ಆ ನಟನ ಫೋಟೋ ನೋಡಿ ಬೆಚ್ಚಿಬಿದ್ದಿದ್ಯಾಕೆ ಈ ಸ್ಟಾರ್ ನಟಿ…!!!

ಕೆಲ ದಿನಗಳ ಹಿಂದಷ್ಟೇ ದಾದೂ ರತ್ನಾನಿ 2019 ರ ಕ್ಯಾಲೆಂಡರ್ ಆಫ್ ದಿ ಇಯರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಹಲವಾರು ಬಲಿವುಡ್ ಸೆಲೆಬ್ರಿಟಿಗಳು ದಂಡೇ ಆಗಮಿಸಿತ್ತು. ಡಿಫರೆಂಟ್ ಲುಕ್ ನಲ್ಲಿ , ತಮ್ಮದೇ ಸ್ಟೈಲ್ ನಲ್ಲಿ ಮಿಡಿಯಾ ಗೆ ಪೋಸು ಕೊಡುತ್ತಿದ್ದರು. ಇದೇ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಹಿರಿಯ ತಾರೆ ರೇಖಾ. ಈ ಬಾರಿ ರೇಖಾ ಮೇಡಂ ಅವರು ವಿಶೇಷವಾಗಿಯೇ ಕಾಣಿಸುತ್ತಿದ್ದರು. ರೇಖಾ ನೋಡಿದಾಕ್ಷಣ ಮಾಧ್ಯಮಗಳು ಅವರ ಬೆನ್ನುಹತ್ತಿದ್ದವು.
ಮಾಧ್ಯಮದವರು ರೇಖಾ ಜೀ ಒಂದು ಪೋಸ್ ಎಂದಾಕ್ಷಣ ಕ್ಯಾಮೆರಾಗೆ ಪೋಸುಕೊಡಲು ಬಂದು ನಿಂತ ರೇಖ ಕ್ಷಣ ಬೆಚ್ಚಿ ಬಿದ್ದರಂತೆ. ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂದು ನಿಂತ ರೇಖಾ ಹಿಂದೆ ತಿರುಗಿ ನೋಡಿ, ಅಲ್ಲಿದ್ದ ಫೋಟೋ ಕಂಡಾಕ್ಷಣ ಪಕ್ಕಕ್ಕೆ ದೌಡಾಯಿಸಿದ್ದಾರೆ. ಅಂದಹಾಗೇ ಅಲ್ಲಿದ್ದ ಆ ಫೋಟೋ ಯಾವುದು ಗೊತ್ತಾ… ಅಮಿತಾಬ್ ಬಚ್ಚನ್. ಅದ್ಯಾಕೇ ಹಾಗೇ ಮಾಡಿದ್ದರೋ ಗೊತ್ತಿಲ್ಲ.
ಆದರೆ ಸಡನ್ಲಿ ಅವರು ಬಿಗ್ ಬಿ ಫೋಟೋ ನೋಡಿದಾಕ್ಷಣ ಗಾಬರಿ ಬಿದ್ದವರ ಹಾಗೇ ಪಕ್ಕಕ್ಕೆ ನಿಂತಿದ್ದಾರೆ. ಸದ್ಯ ಆ ರೀತಿ ಮಾಡಿದ ರೇಖಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೇ ಯಾವುದೇ ಕಾರ್ಯಕ್ರಮಕ್ಕೆ ಹೋದರೆ ಮಿರ ಮಿರ ಮಿಂಚುವ ರೇಖಾ ಈ ಬಾರಿ ಟ್ರೆಡಿಷನಲ್ ಉಡುಗೆ ಬಿಟ್ಟು ಮಾರ್ಡನ್ ಆಗಿ ಕಾಣಿಸಿಕೊಂಡಿದ್ದರು. ಕಪ್ಪು ಬಣ್ಣದ ಗಾಗಲ್ ಧರಿಸಿ, ಸೂಟ್ ತೊಟ್ಟು ಬಂದಿದ್ದಂತೂ ಎಲ್ಲರನ್ನ ಅಟ್ರಾಕ್ಟ್ ಮಾಡುತ್ತಿತ್ತು.
Comments