ಫ್ಲರ್ಟ್ ಮಾಡಿದ ನಿರೂಪಕನಿಗೆ ತಿರುಗೇಟು ಕೊಟ್ಟ ಟೆನಿಸ್ ತಾರೆ...!!!

ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ವೊಂದರಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ನಿರೂಪಕರಿಗೆ ತಿರುಗೇಟು ನೀಡಿದ್ದಾರೆ. ಅಂದಹಾಗೇ ಕಿರುತೆರೆಯಲ್ಲಿ ಹೆಸರು ಮಾಡಿರುವ ಕಪಿಲ್ ಶರ್ಮಾ ಶೋ ನಲ್ಲಿ ಸಾನಿಯಾ ಮಿರ್ಜಾ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಹೋಸ್ಟ್ ಮಾಡುವ ನಿರೂಪಕ ಕಪಿಲ್ ಶರ್ಮಾ ಸಾನಿಯಾ ಮಿರ್ಜಾ ಅವರನ್ನು ಫ್ಲರ್ಟ್ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ.
ಇದಕ್ಕೆ ತಕ್ಷಣವೇ ರಿಯಾಕ್ಟ್ ಮಾಡಿದ ಸಾನಿಯಾ ಮಿರ್ಜಾ ತಿರುಗೇಟು ಕೊಟ್ಟಿದ್ದಾರೆ.ಅಂದಹಾಗೇ ಶೋಗೆ ಸಾನಿಯಾ ಜೊತೆ ಆಕೆಯ ಸಹೋದರಿ ಆನಮ್ ಮಿರ್ಜಾ ಕೂಡ ಬಂದಿದ್ದರು. ಇದೇ ಮೊದಲ ಬಾರಿಗೆ ಮಗುವಾದ ಬಳಿಕ ಸಾನಿಯಾ ಮಿರ್ಜಾ ಟಿವಿ ಶೋವೊಂದರಲ್ಲಿ ಪಾಲ್ಗೊಂಡಿದ್ದಾರೆ. ಮಸ್ತ್ ಮಜಾ ಮಾಡುತ್ತಾ, ಹಾಸ್ಯಮಯವಾದ,ಇದು ಹಿಂದಿಯಲ್ಲಿ ಬಹಳ ಫೇಮಸ್ಸು. ಈ ವೇಳೆ ನಿರೂಪಕ ಕಪಿಲ್ ಶರ್ಮಾ 'ನಾನು ನಿಮಗಾಗಿಯೇ ಟೆನಿಸ್ ನೋಡುವುದು' ಎಂದು ಫ್ಲರ್ಟ್ ಮಾಡಿದ್ದಾರೆ. ಇದಕ್ಕೆ ಸಾನಿಯಾ 'ಏಟು ತಿನ್ತೀಯಾ.. ಈಗಷ್ಟೇ ಮದುವೆಯಾಗಿದ್ದೀಯಾ.' ಎಂದು ತಿರುಗೇಟು ಕೊಟ್ಟಿದ್ದಾರೆ. ಈ ಶೋ ಇದೇ ಶನಿವಾರ ಭಾನುವಾರ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.
Comments