ನನ್ನ ಬಗ್ಗೆ ಟ್ರೋಲ್ ಮಾಡಿ, ನನ್ನಾಸೆಗೆ ತಣ್ಣೀರೆರಚಬೇಡಿ ಎಂದ ಬಿಗ್’ಬಾಸ್ ಸ್ಪರ್ಧಿ…?!!!
ಬಿಗ್ ಬಾಸ್ ಸ್ಪರ್ಧಿ-6 ರ ವಿನ್ನರ್ ಆಗಿ ಮಾರ್ಡನ್ ರೈತ ಶಶಿಕುಮಾರ್ ಆಯ್ಕೆಯಾಗಿದ್ದಾರೆ. ಆದರೆ ಫೈನಲ್ ಗೆ ಬಂದಿದ್ದ ಮೂರು ಜನ ಕಂಟೆಸ್ಟಂಟ್ಗಳ ಪೈಕಿ ನವೀನ್ ಸಜ್ಜು ಅವರು ರನ್ನರ್ ಅಪ್ ಆಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಯ್ತು. ಬಿಗ್ ಬಾಸ್ ಕೊನೆಯ ತನಕವೂ ಶಶಿ ಮತ್ತು ನವೀನ್ ಸಜ್ಜು ಅವರಲ್ಲಿ ಯಾರಾಗ್ತಾರೆ ವಿನ್ನರ್ ಎಂಬ ಟ್ವಿಸ್ಟ್ ಭಾರೀಯೇ ಇತ್ತು. ಕೊನೆ ಕ್ಷಣದಲ್ಲಿ ಬಿಗ್’ಬಾಸ್ ಸೀಸನ್- 6 ರ ಟ್ರೋಫಿ ಎತ್ತಿಹಿಡಿದಿದ್ದಾರೆ ಶಶಿ ಕುಮಾರ್. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಪರ ಮತ್ತು ವಿರೋಧ ಅಭಿಪ್ರಾಯಗಳು ಎರಡು ಕೂಡ ಟ್ರೋಲ್ ಆಯ್ತು. ಶಶಿಕುಮಾರ್ ಮಾರ್ಡನ್ ರೈತ ಎಂದು ಗಿಮಿಕ್ ಮಾಡ್ತಿದ್ದಾರೆ. ಅಂತಹವರಿಗೆ ಬಿಗ್’ಬಾಸ್ ವಿನ್ ಮಾಡಿಸಿದ್ದೀರಿ. ನಿಜವಾದ ಮಣ್ಣಿನ ಮಗ, ಗಾಯಕ, ಬಡ ಕುಟುಂಬದ ಹುಡುಗ ನವೀನ್ ಸಜ್ಜು ಅವರು ಬಿಗ್’ಬಾಸ್ ಮೊದಲ ಸ್ಥಾನದಿಂದ ವಂಚಿತರನ್ನಾಗಿಸಿದ್ದೀರಿ ಎಂದು ಬಿಗ್ ಬಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿದ ಶಶಿಕುಮಾರ್ ಅವರು, ನಾನು ರೈತರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬಿಗ್ ಬಾಸ್ ಗೆದ್ದಿಲ್ಲ. ಅಷ್ಟಕ್ಕೂ ನಾನು ಗೆದ್ದ ಹಣವನ್ನು ಏತಕ್ಕೆ ಮೀಸಲಿಡುತ್ತೇನೆ, ನಾನು ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಮುನ್ನವೇ ಹೇಳಿದ್ದೆ. ಅದೇ ರೀತಿ ನಿರ್ಧಾರ ಕೂಡ ತೆಗೆದುಕೊಂಡಿದ್ದೀನಿ ಎಂದಿದ್ದಾರೆ.
Comments