ಸ್ಟಾರ್ ನಟರ ಜೊತೆ ಆ್ಯಕ್ಟ್ ಮಾಡ್ತಿರೋ ಬಿಗ್ ಬಾಸ್ ಸ್ಪರ್ಧಿ : ಲಕ್ಕೇ ಚೇಂಜಾಯ್ತಾ...?!!

30 Jan 2019 3:33 PM | Entertainment
3635 Report

ಬಿಗ್’ಬಾಸ್ ಸಿಸನ್-6 ರಲ್ಲಿ ಮಾರ್ಡನ್ ರೈತ ಶಶಿಕುಮಾರ್ ವಿನ್ನರ್ ಆಗಿದ್ದಾರೆ. ಫೈನಲ್ ಗೆ ಆಯ್ಕೆಯಾಗಿದ್ದ ಕವಿತಾ, ಶಶಿ, ನವೀನ್ ಸಜ್ಜು ಪೈಕಿಯಲ್ಲಿ ನವೀನ್  ರನ್ನರ್’ಅಪ್ ಆಗಿದ್ದಾರೆ. ಅಂದಹಾಗೇ ಬಿಗ್ ಬಾಸ್ ಮನೆಗೆ ಹೋಗಿ ಬಂದೋರೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಸೆಲೆಬ್ರಿಟಿಗಳೇ. ಕಳೆದ ಸೀಸನ್ ನಲ್ಲಿ ಕಾಮನ್ ಮ್ಯಾನ್-ಸೆಲೆಬ್ರಿಟಿ ಅನ್ನೋ ವಾರ್ ಈ ಸೀಸನ್ ನಲ್ಲಿ  ಸ್ವಲ್ಪವೂ ಕಂಡಿಲ್ಲ. ಆದರೆ ಈ ಬಾರಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದ ಒಂದಷ್ಟು ಮಂದಿ ಬಿಗ್ ಬಾಸ್ ನಂತರ ಸೆಲೆಬ್ರಿಗಳಾಗಿದ್ದಾರೆ.

ಸ್ಯಾಂಡಲ್’ವುಡ್ ನ ಸ್ಟಾರ್ ನಟರ ಜೊತೆ ಸಿಲ್ವರ್ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಗಳಿಗೆ ಸಿನಿಮಾ ಅವಕಾಶಗಳು ಬರುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದ ಶೈಲಿಯಲ್ಲಿ ಹರಳು ಉರಿದ ಹಾಗೇ ಮಾತನಾಡುತ್ತಿದ್ದ ಸೋನು ಪಾಟೀಲ್ ಗೆ ಲಕ್ ಚೇಂಜ್ ಆಗಿದೆ.  ಬಿಗ್ ಬಾಸ್ ನಂತರ ಸೋನುಗೆ ಜಾಕ್ಪಾಟ್ ಹೊಡೆದಿದ್ಯಂತೆ. ಹ್ಯಾಟ್ರಿಕ್ ಹೀರೋ ಶಿವಣ್ಣ, ದರ್ಶನ್, ಶ್ರೀ ಮುರಳಿ ಜೊತೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ಯಂತೆ. ಸೋನುಗೆ ಅದೃಷ್ಟ ಖುಲಾಯಿಸಿದೆ. ಸೋನು ಪಾಟೀಲ್'ಗೆ ಸಹಾಯ ಮಾಡುವುದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭರವಸೆ ಕೊಟ್ಟಿದ್ದಾರಂತೆ.ಇನ್ನು ಸೋನು ಪಾಟೀಲ್ ಪ್ಲಾನ್ ಪ್ರಕಾರ ನಡೆದರೆ, ಆಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶ್ರೀಮುರಳಿ ಅಭಿನಯದ ಚಿತ್ರಗಳಲ್ಲಿ ಅಭಿನಯಿಸುವುದು ಗ್ಯಾರಂಟಿ. ಸೋನು ನಟಿಸಿರುವ   'ಗರ' ಚಿತ್ರದ ಪ್ರೆಸ್ ಮೀಟ್ ನಲ್ಲಿ  ಶಿವಣ್ಣ, ತಮ್ಮ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಶಿವಣ್ಣ ನೇ ಈ ಮಾತು ಹೇಳಿದ್ದಾರೆ ಎಂದು ಸೋನು ಪಾಟೀಲ್ ಹೇಳುತ್ತಾರೆ.

'ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಮೂವಿಗೆ ಮಾತುಕತೆ ನಡೆದಿದೆ. ಅದಿನ್ನೂ ಫೈನಲ್ ಆಗಿಲ್ಲ. ಹಾಗೆ ಶ್ರೀಮುರಳಿ ಅಭಿನಯದ ಮದಗಜ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ನಿರ್ದೇಶಕ ಮಹೇಶ್ ಹೇಳಿದ್ದಾರೆ. ಅದು ಕೂಡ ಇನ್ನೂ ಪಕ್ಕಾ ಆಗಿಲ್ಲ. ಒಟ್ನಲ್ಲಿ ಅವಕಾಶಗಳು ಜಾಸ್ತಿ ಆಗಿರುವುದಕ್ಕೆ ಸಂತಸ ಇದೆ'' ಎಂದರು ಸೋನು ಪಾಟೀಲ್. ಒಂದು ವೇಳೆ ಸ್ಟಾರ್ ನಟರ ಜೊತೆ ಆ್ಯಕ್ಟ್ ಮಾಡಲು ನಾನು ತುದಿಗಾಲಲ್ಲಿ ನಿಂತಿದ್ದೀನಿ. ಇನ್ನು ಮಜಾ ಟಾಕೀಸ್ ಗೆ ಅತಿಥಿಯಾಗಿ ಸೋನು ಹೋಗುತ್ತಿದ್ದಾರೆ. ನಟ ಸೃಜನ್ ಲೋಕೇಶ್ ಮಾತಿಗೆ ಸೋನು ಯಾವ ರೀತಿ ನಗುವಿನ ಅಲೆಯಲ್ಲಿಯೇ ತತ್ತರಿಸಿ  ಹೋಗುತ್ತಾರೋ. ಇನ್ನು ಬಿಗ್ ಬಾಸ್ ಮನೆಯಲ್ಲಿ ಗಾಯಕ ನವೀನ್ ಸಜ್ಜು ಅನ್ನು ಸೋನು ಲವ್ ಮಾಡುತ್ತಿದ್ದಾರೆಂಬ ಸುದ್ದಿ ಸಿಕ್ಕಾಪಟ್ಟರ ವೈರಲ್ ಆಗಿತ್ತು. ಈ ಬಗ್ಗೆ ಗಾಯಕ ನವೀನ್ ಸಜ್ಜು ಸ್ಟ್ರಿಕ್ಟ್ ಆಗಿಯೇ ಸೋನುಗೆ ವಾರ್ನ್ ಮಾಡಿದ್ದರು.

 

Edited By

Manjula M

Reported By

Kavya shree

Comments