ಹತ್ತು ವರ್ಷದ ಇತಿಹಾಸದಲ್ಲೇ ಸಿನಿಮಾ ಸೋಲೊಪ್ಪಿಕೊಂಡ ಸ್ಟಾರ್’ನಟ…?!!!

ಸಿನಿಮಾ ರಿಲೀಸ್ ಗೂ ಮುನ್ನವೇ ಭಾರೀ ಸೌಂಡು ಮಾಡಿದ್ದ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಬಗ್ಗೆ ಬಹಳಷ್ಟು ನಿರೀಕ್ಷೆಗಳಿದ್ದವು. ದೊಡ್ಡ ಬವಜೆಟ್ ನ ಚಿತ್ರ, ಖ್ಯಾತ ಸ್ಟಾರ್ ಗಳ ಬಳಗವಿರೋ ಈ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗೋದಂತೂ ಖಚಿತ ಎಂಬೆಲ್ಲಾ ಮಾತುಗಳು ಬಿ ಟೌನ್ ನಿಂದ ಕೇಳಿ ಬರುತ್ತಿದ್ದವು. ನಟ ಅಮೀರ್ ಖಾನ್ ರ ಬಹು ನಿರೀಕ್ಷಿತ ಚಿತ್ರ ಥಗ್ಸ್ ಆಫ್ ಇಂಡಿಯಾ ಅಂದುಕೊಂಡಂತೇ ಯಶಸ್ಸು ಕಾಣಲಿಲ್ಲ.ಈ ಬಗ್ಗೆ ನಟ ಅಮೀರ್ ಖಾನ್ ಹೇಳಿದ್ದೇನು ಗೊತ್ತಾ…? ತಮ್ಮ ನೆಚ್ಚಿನ ಸ್ಟಾರ್ ಸಿನಿಮಾ ಬಗ್ಗೆ ಬಹಳಷ್ಟು ಕನಸು ಕಟ್ಟಿ ಥಿಯೇಟರ್ ಗೆ ಬಂದಿದ್ದ ಅಭಿಮಾನಿಗಳ ಮನಸ್ಸು ಗೆಲ್ಲಲಿಲ್ಲ ಥಗ್ಸ್ ಆಫ್ ಇಂಡಿಯಾ.
ಕಳೆದ ವರ್ಷದ ಕೊನೆಯಲ್ಲಿ ರಿಲೀಸ್ ಆದ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಸೋಲಿನಿಂದ ತಮ್ಮ ಮೇಲಿನ ಕೋಪವನ್ನು ಜನ ಚಿತ್ರದ ಮೇಲೆ ತೀರಿಸಿಕೊಂಡಿದ್ದಾರೆ ಎಂದು ಅಮೀರ್ ಖಾನ್ ಹೇಳಿದ್ದಾರೆ. ಚಿತ್ರ ಸೋಲನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿರುವ ನಟ ಅಮೀರ್ ಖಾನ್, 'ಪ್ರೇಕ್ಷಕರಿಗೆ ಚಿತ್ರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸಂಪೂರ್ಣ ಹಕ್ಕಿದೆ. ಅವರು ಏನು ಬೇಕಾದರು ಹೇಳಬಹುದು ಎಂದಿದ್ದಾರೆ.ನನ್ನೊಂದಿಗೆ ಕೆಲಸ ಮಾಡಿದ ಪ್ರತೀ ನಿರ್ದೇಶಕರೂ ಉತ್ತಮ ಚಿತ್ರ ನೀಡಬೇಕು ಎಂಬ ಉದ್ದೇಶದಿಂದಲೇ ಕೆಲಸ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗದೇ ಇರಬಹುದು. ಚಿತ್ರ ನಿರ್ಮಾಣ ತುಂಬ ಕಠಿಣ ಕೆಲಸ, ನಾನು ಕೂಡ ಆ ತಂಡದ ಸದಸ್ಯನಷ್ಚೇ..ನನ್ನ ನಿರ್ದೇಶಕನಿಂದ ತಪ್ಪಾಗಿದೆ ಎಂದರೆ, ಆ ತಪ್ಪಿನಲ್ಲಿ ನನ್ನ ಪಾತ್ರವೂ ಇರುತ್ತದೆ ಎಂದು ಹೇಳಿದ್ದಾರೆ.ಈ ಸಿನಿಮಾದಲ್ಲಿ ಮಾಡಿದ ತಪ್ಪನ್ನು ನಾನು ಮತ್ತೆ ಮಾಡುವುದಿಲ್ಲ. ಇದರಲ್ಲಿ ಆದ ಕೆಲ ಮಿಸ್ಟೇಕ್ಸ್ ನ್ನು ನಾನು ಮುಂದಿನ ಹಂತದಲ್ಲಿ ತಿದ್ದಿಕೊಳ್ಳುತ್ತೇನೆ ಎಂದಿದ್ದಾರೆ.
ತಪ್ಪುಗಳಿಂದ ನಾವು ಪಾಠ ಕಲಿಯುತ್ತೇವೆ. ಆದರೆ ಆ ತಪ್ಪುಗಳು ಪುನರಾವರ್ತನೆಯಾಗಬಾರದು. ನನ್ನನ್ನು ನಂಬಿ ಜನ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಆದರೆ ನಿರಾಸೆ ಅನುಭವಿಸಿದ್ದಾರೆ.. ಚಿತ್ರದ ಸಂಪೂರ್ಣ ವೈಫಲ್ಯದ ಜವಾಬ್ದಾರಿಯನ್ನು ನಾನೇ ವಹಿಸುತ್ತೇನೆ. ಸುದೀರ್ಘ ವರ್ಷಗಳಿಂದ ನನ್ನ ಸಿನಿಮಾ ಸೋತಿರಲಿಲ್ಲ. ದಶಕಗಳ ಬಳಿಕ ಮೊದಲ ಬಾರಿಗೆ ನನ್ನ ಅಭಿಮಾನಿಗಳಿಗೆ ಮೋಸ ಮಾಡಿದ್ದೇನೆ. ಇದಕ್ಕೆಲ್ಲಾ ನಾನೇ ಜವಬ್ದಾರನು ಎಂದಿದ್ದಾರೆ. ಜನ ನನ್ನ ಮೇಲೆ ಕೋಪ ತೀರಿಸಿಕೊಳ್ಳಲು ಅವರಿಗೆ ಈಗ ಅವಕಾಶ ಸಿಕ್ಕಂತಾಗಿದೆ ಎಂದಿದ್ದಾರೆ.
Comments