ಜೀನ್ಸ್ ಬೇಡ, ಸೀರೆ ಹಾಕ್ಕೊಳ್ಳಿ ಎಂದ ಅಭಿಮಾನಿಗೆ ಗಾಯಕಿ ಹೇಳಿದ್ದೇನು ಗೊತ್ತಾ…?!!

ಮೀಟೂ ವಿಚಾರವಾಗಿ ಹೆಚ್ಚು ಸೌಂಡು ಮಾಡಿದ್ದ ಗಾಯಕಿ ಚಿನ್ಮಯಿ ಶ್ರೀಪಾದ ಸದ್ಯ ಮತ್ತೆ ಸುದ್ದಿಯಾಗಿದ್ದಾರೆ. ಗಾಯಕ ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ ಸುದ್ದಿಯಾಗಿದ್ದ ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಇದೀಗ ಅಭಿಮಾನಿಯ ಪ್ರಶ್ನೆಯೊಂದಕ್ಕೆ ಖಡಕ್ ಆಗಿ ಉತ್ತರಿಸಿದ್ದಾರೆ. ಇತ್ತೀಚಿಗೆ ಅಭಿಮಾನಿಯೊಬ್ಬ ಟ್ವೀಟ್ ಮೂಲಕ ಚಿನ್ಮಯಿ ಅವರೇ ನೀವು ತುಂಬಾ ಚೆನ್ನಾಗಿ ಹಾಡುತ್ತೀರಾ, ಬೋಲ್ಡ್ ಆಗಿದ್ದೀರಾ, ಸುಂದರವಾಗಿದ್ದೀರ ಹಾಗೂ ಆತ್ಮವಿಶ್ವಾಸವನ್ನು ಹೊಂದಿರುವುದರಿಂದ ನೀವು ಇತರರಿಗೆ ಮಾದರಿಯಾಗಿದ್ದೀರ. ಆದರೆ,
ಈ ಗುಣಗಳನ್ನು ಭಾರತೀಯ ಸಂಸ್ಕೃತಿಯ ಉಡುಗೆ ಅಥವಾ ಸೀರೆಯನ್ನುಟ್ಟು ಪ್ರಸ್ತುತಪಡಿಸಿದರೆ ಉತ್ತಮವಾಗಿರುತ್ತದೆ ಅಲ್ಲವೆ? ಯುವತಿಯರು ಧನಾತ್ಮಕ, ಉತ್ತಮ ಗುಣಗಳು ಹಾಗೂ ಭಾರತೀಯತೆ ಜತೆ ಸಾಗಬೇಕು ಎಂದು ಹೇಳಿದ್ದರು. ಅಭಿಮಾನಿಯ ಈ ಪ್ರಶ್ನೆಗೆ ಗರಂ ಆಗಿಯೇ ಗಾಯಕಿ ಉತ್ತರ ನೀಡಿದ್ದಾರೆ ಚಿನ್ಮಯಿ. ನಾನು ಸೀರೆ ಹುಟ್ಟು ಹಾಡು ಹೇಳಿದ್ರೆ ಏನಾಗುತ್ತೆ ಗೊತ್ತಾ..? ನಾನು ಯಾವಾಗ ಸೀರೆ ಉಡುತ್ತೇನೆ ಆಗ ಕೆಲ ವ್ಯಕ್ತಿಗಳ ಗುಂಪು ನನ್ನ ಎದೆಯ ಭಾಗ ಹಾಗೂ ಸೊಂಟದ ಭಾಗದ ಚಿತ್ರವನ್ನು ತೆಗೆದುಕೊಂಡು ಹಸ್ತಮೈಥುನ ಮಾಡುವ ವಿಡಿಯೋವನ್ನು ಅಶ್ಲೀಲ ವೆಬ್ಸೈಟ್ಗಳಿಗೆ ಅಪ್ಲೋಡ್ ಮಾಡುವ ಸಂದೇಶ ನನಗೆ ಬರಬೇಕಾ? ಸೀರೆಯುಟ್ಟರೂ, ಜೀನ್ಸ್ ತೊಟ್ಟರೂ ನಾನು ಭಾರತೀಯಳೇ ಸರ್ ಎಂದು ರೀಟ್ವೀಟ್ ಮಾಡಿದ್ದಾರೆ.
Comments