ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾ ಯಾವುದು ಗೊತ್ತಾ..?!

ಸ್ಯಾಂಡಲ್ ವುಡ್’ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಸಾಕು ಅಭಿಮಾನಿಗಳಿಗೆ ಹಬ್ಬವೋ ಹಬ್ಬ… ದರ್ಶನ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಡುವ ಸುದ್ದಿ ಗಾಂಧಿನಗರದಲ್ಲಿ ಕೇಲಿ ಬರುತ್ತಿದೆ….ಅಂದ ಹಾಗೇ, ದರ್ಶನ್ ಅಭಿನಯದ 'ಕುರುಕ್ಷೇತ್ರ' ಮತ್ತು 'ಯಜಮಾನ' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಇದರ ಬೆನ್ನಲ್ಲೇ, 'ಗಂಡುಗಲಿ ಮದಕರಿ ನಾಯಕ', 'ರಾಬರ್ಟ್' ಹಾಗೂ 'ಒಡೆಯ' ಚಿತ್ರಗಳಲ್ಲಿ ದರ್ಶನ್ ಮಿಂಚಲಿದ್ದಾರೆ ಎನ್ನುವುದು ಎಲ್ಲರಿಗೂ ಕೂಡ ಗೊತ್ತು… .
ಈ ಸಮಯದಲ್ಲಿಯೇ ಅವರ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯೊಂದು ಕೇಳಿಬರುತ್ತಿದೆ… ದರ್ಶನ್ 'ಪಾಶು ಪತಾಸ್ತ್ರ' ಎನ್ನುವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ…. ಈಗಾಗಲೇ ಟೈಟಲ್ ಫಿಕ್ಸ್ ಆಗಿದ್ದು, ಚಿತ್ರದ ಕುರಿತಾಗಿ ಶೀಘ್ರವೇ ಅಧಿಕೃತ ಘೋಷಣೆಯಾಗಲಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ.. ಅಕ್ಟೋಬರ್ ನಲ್ಲಿ 'ಪಾಶು ಪತಾಸ್ತ್ರ' ಸೆಟ್ಟೇರುವ ಸಾಧ್ಯತೆ ಇದೆ. ಕಳೆದ ವರ್ಷ ದರ್ಶನ್ ಸಿನಿಮಾ ಇಲ್ಲದೆ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಈ ವರ್ಷ ಹಬ್ಬವೋ ಹಬ್ಬ…. 'ಕುರುಕ್ಷೇತ್ರ', 'ಯಜಮಾನ' ಬಿಡುಗಡೆಗೆ ಸಿದ್ಧವಾಗಿವೆ. ಇದರೊಂದಿಗೆ ಸಾಲು ಸಾಲು ಚಿತ್ರಗಳಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ.. ಸಿನಿರಸಿಕರಿಗೆ ಈ ವಿಷಯವಾಗಿ ತುಂಬಾನೇ ಖುಷಿಯಿದೆ.. ದರ್ಶನ್ ಅಭಿಮಾನಿಗಳಂತೂ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ..
Comments