ಅಪ್ಪು ಸಿನಿಮಾ ನೋಡಲು ಈ ಅಭಿಮಾನಿ ಮಾಡಿದ್ದೇನು ಗೊತ್ತಾ…?!!!

ಅಂದಹಾಗೇ ತಮ್ಮ ನೆಚ್ಚಿನ ಸ್ಟಾರ್ ಸಿನಿಮಾ ನೋಡಲು ವಿದ್ಯಾರ್ಥಿನಿಯೋರ್ವಳು ಮಾಡಿರುವ ಕೆಲಸ ಇದೀಗ ವೈರಲ್ ಆಗಿದೆ. ಅಂದಹಾಗೇ ಕೆಲ ಖಾಸಗೀ ಕಂಪನಿಗಳು ಸೂಪರ್ ಸ್ಟಾರ್ ರಜನೀಕಾಂತ್ ಅವರ ಸಿನಿಮಾ ನೋಡಲು ರಜೆ ಕೊಡುತ್ತಾರೆ. ಆದರೆ ಸ್ಯಾಂಡಲ್’ವುಡ್’ನ ತಮ್ಮ ನೆಚ್ಚಿನ ಸ್ಟಾರ್ ಒಬ್ಬರ ಸಿನಿಮಾ ನೋಡೋಕೆ ವಿದ್ಯಾರ್ಥಿನಿ ಆಗಿರುವ ಅಭಿಮಾನಿಯೋರ್ವಳು ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ರಜೆ ಕೋರಿದ್ದಾಳೆ.
ಸದ್ಯ ಆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೇ ನಟ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಅವರ ಸಿನಿಮಾ‘ ನಟ ಸಾರ್ವಭೌಮ’ ಫೆ.7 ರಂದು ತೆರೆಕಾಣುತ್ತಿದ್ದು, 8ನೇ ತಾರೀಖು ಸಿನಿಮಾ ನೋಡಲು ನಿರ್ಧರಿಸಿದ್ದೇನೆ. ಆ ದಿನ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ರಜೆ ಮಂಜೂರು ಮಾಡಬೇಕೆಂದು'' ವಿದ್ಯಾರ್ಥಿನಿ ನಿಸರ್ಗ ಪತ್ರ ಬರೆದಿದ್ದಾರೆ.ಮೈಸೂರು ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎರಡನೇ ವರ್ಷದ ಕಾಮರ್ಸ್ ಓದುತ್ತಿರುವ ನಿಸರ್ಗ ಈ ಪತ್ರ ಬರೆದಿದ್ದಾರೆ. ಈ ಸಿನಿಮಾ ನಿರ್ದೇಶಕರು ಪವನ್ ಒಡೆಯರ್ ಅವರೇ ಈ ಪತ್ರವನ್ನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, ಖುಷಿ ಹಂಚಿಕೊಂಡಿದ್ದಾರೆ. ರಾಕ್ ಲೈನ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ನಟ ಸಾರ್ವಭೌಮ ಸಿನಿಮಾದಲ್ಲಿ ರಚಿತಾ ರಾಂ ಮತ್ತು ಅನುಪಮಾ ಪರಮೇಶ್ವರ್ ಅಭಿನಯಿಸಿದ್ದಾರೆ. ನಟ ಸಾರ್ವಭೌಮ ಸಿನಿಮಾ ಟ್ರೇಲರ್ ರಿಲೀಸ್ ಆದಾಗ ಸಿಕ್ಕಾಪಟ್ಟೆ ಸೌಂಡು ಮಾಡಿತ್ತು.
Comments