ಇಷ್ಟು ಬೇಗ ಟಿವಿಯಲ್ಲಿ ಬಂದೇ ಬಿಟ್ಟ ರಾಕಿ ಬಾಯ್…!!
ಕಳೆದ ವರ್ಷ ಸ್ಯಾಂಡಲ್ ವುಡ್ ನಲ್ಲಿ ದೂಳೆಬ್ಬಿಸಿದ್ದ ಚಿತ್ರಗಳ ಪೈಕಿ ಕೆಜಿಎಫ್ ಅಗ್ರಸ್ಥಾನದಲ್ಲಿದೆ… ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಇದೀಗ ಟಿವಿಯಲ್ಲಿ ಪ್ರಸಾರವಾಗ್ತಿದೆ. 25 ದಿನ ಪೂರೈಸಿ, 50 ದಿನದತ್ತ ಸಾಗುತ್ತಿರುವಾಗಲೇ ಕಿರುತೆರೆಯಲ್ಲಿ ಕೆಜಿಎಫ್ ಟೆಲಿಕಾಸ್ಟ್ ಆಗ್ತಿರುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತಿದೆ.. ಕಳೆದ ಡಿಸೆಂಬರ್ 21 ರಂದು ಐದು ಭಾಷೆಯಲ್ಲಿ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿತ್ತು...
ಕಲೆಕ್ಷನ್ ನಲ್ಲಿ ಭಾರಿ ಗಳಿಕೆ ಕಂಡಿದ್ದಂತಹ ಕೆಜಿಎಫ್ ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಹೊಸ ದಾಖಲೆಗಳನ್ನ ಬರೆದಿತ್ತು… ಕೆಜಿಎಫ್ ಚಾಪ್ಟರ್ 1 ಟಿವಿಯಲ್ಲಿ ಪ್ರಸಾರವಾಗ್ತಿರೋದು ಕನ್ನಡದಲ್ಲಿ ಅಲ್ಲ ಕಣ್ರಿ…, ಹಿಂದಿ ಭಾಷೆಯಲ್ಲಿ ಬರುತ್ತಿದೆ... ಚಿತ್ರಮಂದಿರದಲ್ಲಿ ನೋಡಿ ಖುಷಿಯಾಗಿದ್ದ ಬಾಲಿವುಡ್ ಮಂದಿ ಈಗ ಟಿವಿಯಲ್ಲಿ ನೋಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ..ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದ ಕೆಜಿಎಫ್ ಸಿನಿಮಾ ಈಗ ಸೋನಿ ಮ್ಯಾಕ್ಸ್ ನಲ್ಲಿ ಪ್ರಸಾರವಾಗ್ತಿದೆ. ಈಗಾಗಲೇ ಕೆಜಿಎಫ್ ಪ್ರೋಮೋ ಟೆಲಿಕಾಸ್ಟ್ ಮಾಡ್ತಿರುವ ಟಿವಿ ವಾಹಿನಿ, ಅತಿ ಶೀಘ್ರದಲ್ಲಿ ಎಂದು ಜಾಹೀರಾತು ನೀಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಫೆಬ್ರವರಿಯಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.
Comments