ಬಿಕಿನಿ ಫೋಟೋ ರಿವೀಲ್ ಬಗ್ಗೆ ಹನ್ಸಿಕಾ ಹೇಳಿದ್ದೇನು ಗೊತ್ತಾ…?!!!



ಇತ್ತೀಚೆಗೆ ಕೆಲ ಸ್ಟಾರ್ ನಟಿಯರ ಬಿಕಿನಿ ಫೋಟೋಗಳು ಸಿಕ್ಕಾಪಟ್ಟೆ ಲೀಕ್ ಆಗುತ್ತಿದ್ದು, ಇದರಿಂದ ಕೆಲ ನಟಿಯರು ಮುಜುಗರಕ್ಕೀಡಾಗುವಂತೆ ಮಾಡಿವೆ. ಕೆಲ ದಿನಗಳ ಹಿಂದಷ್ಟೇ ಸೂಪರ್ ಸ್ಟಾರ್ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಅವರ ಪರ್ಸನಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅದರ ಹಿಂದೆಯಷ್ಟೇ ಇದೀಗ ಮತ್ತೊಬ್ಬ ಸ್ಟಾರ್ ನಟಿ ಹನ್ಸಿಕಾ ಅವರ ಬಿಕಿನಿ ಧರಿಸಿದ ಫೋಟೋಗಳು ಎಲ್ಲರ ಮೊಬೈಲ್ನಲ್ಲಿ ಹೆಚ್ಚು ಗ್ರಾಸವಾಗಿವೆ. ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ನಟಿ ಹನ್ಸಿಕಾ...
ನನ್ನ ಮೊಬೈಲ್ ನಿಂದ ಅದೇಗೆ ನನ್ನ ಪರ್ಸನಲ್ ಫೋಟೋಗಳು ಹೊರ ಹೋದವು ಎಂಬುದು ಇಂದಿಗೂ ಅರ್ಥವಾಗುತ್ತಿಲ್ಲ. ನಾನಾಗೇ ನಾನೇ ಆ ಫೋಟೋಗಳನ್ನು ಲೀಕ್ ಮಾಡಿಲ್ಲ. ಯಾವ ಸೋಶಿಯಲ್ ಮಿಡಿಯಾ ಅಕೌಂಟ್ ಗೂ ನಾನು ಪೋಸ್ಟ್ ಮಾಡಿಲ್ಲ. ಈ ಫೋಟೋಗಳು ಲೀಕ್ ಆಗಿದ್ದರಿಂದ ಭಾರೀ ಬೇಸರವಾಗಿದೆ. ಕೆಲವರು ಕಮೆಂಟ್ ಮಾಡುತ್ತಾರೆ, ಸಿನಿಮಾದಲ್ಲಿ ಬಿಕಿನಿ ಹಾಕುತ್ತೀರಾ, ಆಗವಿಲ್ಲದ ಮುಜುಗರ ಈಗ್ಯಾಕೆ ಆಗುತ್ತಿದೆ ಎಂದು. ನಾನು ಸಿನಿಮಾದಲ್ಲಿ ನನ್ನ ಇಚ್ಛೆಯಿಂದ ಹಾಕುತ್ತೇನೆ. ಆದರೆ ಈಗ ನನ್ನ ಅನುಮತಿಯಿಲ್ಲದೇ ನನ್ನ ವೈಯಕ್ತಿಕ ಫೋಟೋಗಳು ಲೀಕ್ ಆಗಿವೆ.
“ನಾನು ಅಮೆರಿಕಾದಲ್ಲಿದ್ದಾಗ ನನ್ನ ಮೊಬೈಲಿನಲ್ಲಿ ಕೆಲ ಸಮಸ್ಯೆ ಆಗುತ್ತಿರುವುದನ್ನು ಗಮನಿಸಿದೆ. ಬಳಿಕ ನನ್ನ ಪ್ರೈವೇಟ್ ಫೋಟೋ ಲೀಕ್ ಆಗಿರುವುದನ್ನು ನೋಡಿ ನಾನು ಶಾಕ್ ಆದೆ. ಈ ಮೊದಲಿಗೆ ಲೀಕ್ ಆಗಿರುವ ಫೋಟೋಗಳಲ್ಲಿ ಕೆಲವು ಫೋಟೋಗಳನ್ನು ಎಡಿಟಿಂಗ್ ಮಾಡಿದ್ದಾರೆ. ನನ್ನ ಸೋಶಿಯಲ್ ಮಿಡಿಯಾ ಅಕೌಂಟ್ ಮತ್ತು ಫೋನ್’ನ್ನು ಹ್ಯಾಕ್ ಮಾಡಲಾಗಿದೆ. ಯಾರು , ಯಾವ ಮೆಸೇಜ್’ಗೂ ಪ್ರತಿಕ್ರಿಯಿಸ ಬೇಡಿ ಎಂದು ಹೇಳಿಕೆ ನೀಡಿದ್ದಾರೆ.
Comments