ಬಿಕಿನಿ ತೊಟ್ಟು ಟ್ರೋಲ್ ಆದ ಕನ್ನಡದ ಕಿರಿಕ್ ಚೆಲುವೆ…!!!



ಒಂದೆರಡು ಸಿನಿಮಾಗಳು ಹಿಟ್ ಆಗಿದ್ದೇ ತಡ ಕೆಲ ನಟೀ ಮಣಿಯರಿಗೆ ಭೂಮಿ ಮೇಲೆ ಕಾಲು ನಿಲ್ಲಲ್ಲ. ಕಿರಿಕ್ ಮಾಡುತ್ತಾ ಸಿನಿಮಾ ಅವಕಾಶಗಳು ಸಿಗದೇ ಅದೆಷ್ಟೋ ಮಂದಿ ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಅಂತಹವರ ಪೈಕಿ ಈ ನಟಿಯೂ ಕೂಡ ಸೇರಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸು ಗಳಿಸಿದ್ದೇ ತಡ ಸಂಯುಕ್ತಾ ಹೆಗ್ಡೆ ಬಗ್ಗೆ ಮಾತನಾಡಿದ್ದೇ ಹೆಚ್ಚು. ಬಬ್ಲಿ ಕ್ಯಾರೆಕ್ಟರ್’ನಲ್ಲಿ ಮಿಂಚಿದ್ದ ಸಂಯುಕ್ತಾ ಹೆಗಡೆ ಎಲ್ಲರತ್ತಿರ ಕಿರಿಕ್ ಮಾಡಿದ್ದೇ ಹೆಚ್ಚು. ಅಂದಹಾಗೇ ಕನ್ನಡದ ಬಿಗ್’ಬಾಸ್ ಗೂ ಹೋಗಿದ್ದ ಸಂಯುಕ್ತಾ ಹೆಗಡೆ ಅಲ್ಲಿಯೂ ಕೂಡ ಕಿರಿಕ್ ಮಾಡಿ ಹೊರ ಬಂದಿದ್ದರು.
ಆ ನಂತರ ಹಿಂದಿ ರಿಯಾಲಿಟಿ ಶೋ ವೊಂದರಲ್ಲಿ ಭಾಗವಹಿಸಿರುವ ಸಂಯುಕ್ತಾ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಹಿಂದಿ ರಿಯಾಲಿಟಿ ಶೋನಲ್ಲೂ ಕೂ ಪ್ರತೀ ಸ್ಪರ್ಧಿ ಜೊತೆ ಜಗಳ ಮಾಡಿಕೊಂಡಿದ್ದರು. ಇದೀಗ ತನ್ನನ್ನು ಆಡ್ಕೊಳ್ತಿದ್ದವರಿಗೆ ಫೋಟೋ ಮೂಲಕ ಉತ್ತರ ಕೊಡುತ್ತಿದ್ದಾರೆ. ಈ ಹಿಂದೆ ಬಿಕಿನಿ ಫೋಟೋ ವೊಂದನ್ನು ಹಾಕಿ ಸಿಕ್ಕಾಪಟ್ಟೆ ನೆಗಟೀವ್ಸ್ ಕಮೆಂಟ್ಸ್ ಗೆ ಒಳಗಾಗಿದ್ದು ಕಿರಿಕ್ ಚೆಲುವೆ, ಮತ್ತಷ್ಟು ಫೋಟೋಗಳನ್ನು ಹಾಕುವುದರ ಮೂಲಕ ಆಡ್ಕೊಳ್ತಿದ್ದವರಿಗೆ ಉರಿಸಿದ್ದಾರೆ. ನಾನಿರುವುದೇ ಹೀಗೆ ಎಂದು ತೋರಿಸಿದ್ದಾರೆ. ಬಿಕಿನಿಯ ಮತ್ತೊಂದು ಪೋಸ್ ಪೋಸ್ಟ್ ಮಾಡಿ ‘ಜನ ನಿನ್ನ ದ್ವೇಷಿಸ್ತಾರೆ, ಬೆಲೆ ಕಟ್ತಾರೆ, ಬೀಳಿಸೋಕೆ ಟ್ರೈ ಮಾಡ್ತಾರೆ, ಅದೆಲ್ಲವನ್ನ ಎದುರಿಸಿ ಎಷ್ಟು ಗಟ್ಟಿಯಾಗಿ ನಿಲ್ತಿಯಾ ಅನ್ನೋದು ನಿನ್ನನ್ನು ಬೆಳೆಸುತ್ತೆ’ ಅಂದಿದ್ದಾರೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ ಸಂಯುಕ್ತ ತಮಗಾಗ್ತಾ ಇರೋ ಟ್ರೋಲ್, ಕಮೆಂಟ್ಗಳ ಬಗ್ಗೆ ಎಷ್ಟು ತಲೆ ಕೆಡಿಸಿಕೊಂಡಿದ್ದಾರೆ ಅಂತ.
Comments