ಅಗ್ನಿಸಾಕ್ಷಿ ಸಿದ್ಧಾರ್ಥ್ ಗೆ ಮದುವೆ ಫಿಕ್ಸ್ : ಅದೃಷ್ಟವಂತೆ ಯಾರು ಗೊತ್ತಾ...?!!!
ಕಿರುತೆರೆಯ ಮೋಸ್ಟ್ ಹ್ಯಾಂಡ್ಸಮ್ ನಟ ಅಗ್ನಿಸಾಕ್ಷಿ ಸಿದ್ಧಾರ್ಥ್ ಅಲಿಯಾಸ್ ವಿಜಯ ಸೂರ್ಯ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅಂದ ಹಾಗೇ ರಿಯಲ್ ಲೈಫ್ ನಲ್ಲಿ ವಿಜಯ್ ಸೂರ್ಯ ಹೊಸ ಬಾಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಟ ಸಿದ್ಧಾರ್ಥ್ ನ ಕೈ ಹಿಡಿಯುತ್ತಿರೋ ಆ ಅದೃಷ್ಟವಂತೆ ಯಾರು ಗೊತ್ತಾ..? ತುಂಬಾ ವರ್ಷದಿಂದ ಹೈ ಟಿಆರ್’ಪಿ ಪಡೆದಿರುನ ಸೀರಿಯಲ್ ಅಗ್ನಿಸಾಕ್ಷಿ ಇಂದಿಗೂ ಪ್ರಸಾರವಾಗ್ತಿದೆ. ಹೆಂಗೆಳೆಯರ ಮನಗೆದ್ದ ಸನ್ನಿಧಿ-ಸಿದ್ಧಾರ್ಥ್ ಕ್ಯೂಟ್ ಕಪಲ್ ನಿಜ ಜೀವನದಲ್ಲೂ ಸತಿ-ಪತಿಗಳಾಗ್ತಿದ್ದಾರಾ ಅಂತಾ ಯೋಚಿಸ್ತಿದ್ದೀರಾ..?
ಸಿದ್ದಾರ್ಥ್ ಗೆ ಮ್ಯಾರೇಜ್ ಫಿಕ್ಸ್ ಆಗಿದ್ದೂ ನಿಜ. ಆದರೆ ಅವರನ್ನು ಕೈ ಹಿಡಿಯುತ್ತಿರೋ ಹುಡುಗಿ ಸನ್ನಿಧಿ ಅಲ್ವಂತೆ. ಬದಲಾಗಿ ಮನೆಯವರು ನೋಡಿದ ಹುಡುಗಿಯನ್ನು ಸಿದ್ದಾರ್ಥ್ ವರಿಸಲಿದ್ದಾರೆ. ಅಂದಹಾಗೇ ಆಕೆಯ ಹೆಸರು ಚೈತ್ರಾ. ಈಕೆಗೆ ಇನ್ನೂ 23 ವರ್ಷ. ಚೈತ್ರ ಸಾಫ್ಟವೇರ್ ಉದ್ಯೋಗಿಯಾಗಿದ್ದೂ, ಮದುವೆ ದಿನಾಂಕವನ್ನು ಕೂಡ ಈಗಾಗಲೇ ನಿಗಧಿ ಮಾಡಲಾಗಿದೆ. ವಿಜಯ್ ಸೂರ್ಯ ಹಾಗು ಚೈತ್ರಾ ಮದುವೆ ಫ಼ೆಬ್ರವರಿ14 ಪ್ರೇಮಿಗಳ ದಿನದಂದೇ ನಡೆಯಲಿದೆ.,ಚೈತ್ರಾ ಅವರು ವಿಜಯ್ ಅವರ ದೂರದ ಸಂಭಂಧಿ ಯಾಗಿದ್ದು, ಎರಡು ಕುಟುಂಬದವರ ಒಪ್ಪಿಗೆಯೇ ಮೇರೆಗೆ ವಿಜಯ್ ಸೂರ್ಯ ಮತ್ತು ಚೈತ್ರಾ ದಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿಚಾರವಾಗಿ ವಿಜಯ್ ಸೂರ್ಯ, ನಾನು ಚೈತ್ರಾ ಅವರನ್ನು ಒಂದೆರಡು ಬಾರಿಯಷ್ಟೇ ನೋಡಿದ್ದೂ, ಅವರು ಜನರನ್ನು ಆಧರಿಸೋ ರೀತಿ ನನಗೆ ತುಂಬಾ ಇಷ್ಟವಾಗಿದೆ. ಮನೆಯವರು, ನಾನು ಇಷ್ಟಪಟ್ಟಿಯೇ ಚೈತ್ರಾ ಅವರನ್ನು ಮದುವೆಯಾಗ್ತಿದ್ದೀನಿ. ನಮ್ಮ ದಾಂಪತ್ಯ ಭವಿಷ್ಯದಲ್ಲಿ ಆದರ್ಶ ದಾಂಪತ್ಯವಾಗಲಿದೆ ಎಂದು ಹೇಳಿದ್ದಾರೆ.
Comments