ಅಮ್ಮನನ್ನು ಕಳೆದುಕೊಂಡ ಬಿಗ್’ಬಾಸ್ ಸ್ಪರ್ಧಿ..!! ಯಾರ್ ಗೊತ್ತಾ..?



ತಾಯಿಗೆ ಸರಿಸಮನಾದವರು ಯಾರು ಇಲ್ಲ… ತಾಯಿಯೇ ಎಲ್ಲಾ… ತಾಯಿಯನ್ನು ಕಳೆದುಕೊಂಡರೆ ಆಗುವ ನೋವು ಅಷ್ಟಿಷ್ಟಲ್ಲ… ಇದೀಗ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಅಮ್ಮನ ಅಗಲಿಕೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ… ಕಳೆದ 13 ದಿನಗಳ ಹಿಂದೆ ಕಿರುತೆರೆ ನಟಿ ಆಶಿತಾ ಅವರಿಗೆ ಮಾತೃವಿಯೋಗವಾಗಿದೆಅಮ್ಮನ ಅಗಲಿಕೆಯ ಆಘಾತದಿಂದ ಬಿಗ್ಬಾಸ್ ಮಾಜಿ ಸ್ಪರ್ಧಿ ಆಶಿತಾ ಚಂದ್ರಪ್ಪ ಇನ್ನೂ ಹೊರ ಬಂದಿಲ್ಲ. ತಾಯಿಯ ನೆನಪಿನಲ್ಲಿಯೇ ದಿನ ದೂಡುತ್ತಿದ್ದಾರೆ. ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ...
ಆಶಿತಾ ಅಮ್ಮನಿಲ್ಲದ ಕಷ್ಟದ ದಿನಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.., 'ನೀವು ನಮ್ಮನ್ನು ಅಗಲಿ 13 ದಿನಗಳು ಕಳೆದಿವೆ. ನೀವಿಲ್ಲದೇ ಪ್ರತಿ ದಿನವೂ ಕಷ್ಟವಾಗುತ್ತಿದೆ.. ನೀವು ನಮ್ಮನ್ನು ಮೇಲಿನಿಂದ ನೋಡುತ್ತಿದ್ದೀರ ಅಂತ ಗೊತ್ತು. ಎಂದಿನಂತೆ ನಮ್ಮನ್ನ ಬೈಯುತ್ತಾ, ನಾವು ಅಳೋದನ್ನ ನೋಡ್ತಿರ್ತೀರ ಅಂತ ಗೊತ್ತು. ಆದ್ರೆ, ಅದು ನಮಗೆ ಕೇಳಿಸಲ್ಲ. ಅಮ್ಮಾ..ನಾನು ನಿಮ್ಮನ್ನು ಮಿಸ್ ಮಾಡುತ್ತಿದ್ದೇನೆ. ನನ್ನ ಜೀವನ ಎಂದಿನಂತೆ ಇಲ್ಲ. ನಿದ್ದೆಯಿಲ್ಲದ ಈ ದಿನಗಳು ಯಾವಾಗ ಕೊನೆಯಾಗುತ್ತೋ ಗೊತ್ತಿಲ್ಲ. ನಾನು ನಿಮ್ಮ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು. ಐ ಲವ್ ಯು, ಮಿಸ್ ಯೂ ಸೋ ಮಚ್ ಅಂತ ಆಶಿತಾ ಬರೆದುಕೊಂಡಿದ್ದಾರೆ.
Comments