ಕನ್ನಡದ ಖ್ಯಾತ ನಟಿಯ ಹೆಸರಿನಲ್ಲೊಂದು ಕಾನೂನು…!! ಆ ಕಾನೂನಿಗೆ ಆ ನಟಿಯ ಹೆಸರು ಇಟ್ಟಿದ್ಯಾಕೆ..?




ಸ್ಯಾಂಡಲ್ ವುಡ್ ನ ಒಂದು ಕಾಲದಲ್ಲಿ ಆಳಿದ ನಟಿಯರಲ್ಲಿ ಚೆಂದದ ಹುಡುಗಿ, ಮುದ್ದು ಮುದ್ದಾದ ಹುಡುಗಿಯರಲ್ಲಿ ಇವರು ಕೂಡ ಒಬ್ಬರು… ಈಕೆ ಕಪ್ಪು ಹುಡುಗಿ, ಸಿನಿಮಾ ಮಾಡಲು ಲಾಯಕ್ಕಿಲ್ಲ ಎಂದು ಎಷ್ಟೋ ಜನ ಆಕೆಯನ್ನು ಅವಮಾನಿಸಿದರೂ ಇದೆಲ್ಲದರ ನಡುವೆಯೂ ಪಟ್ಟುಬಿಡದೆ ಟಾಪ್ ನಟಿಯಾಗಿ ಬೆಳೆದ ನಟಿ ಈಕೆ, ಆ ನಟಿ ಬೇರೆ ಯಾರು ಅಲ್ಲ… ಅವರೇ ಸರಿತಾ… ಆದರೆ ನಟಿ ಸರಿತಾ ಅವರ ಬಾಲ್ಯ ಜೀವನ ತುಂಬಾ ಕಷ್ಟಕರವಾಗಿತ್ತು.. ಸರಿತಾ 15 ವರ್ಷ ವಯಸ್ಸಿದಾಗಲೇ ನಟ ವೆಂಕಟಸುಬ್ಬಯ್ಯ ಜೊತೆ ಮದುವೆ ಮಾಡಲಾಯಿತು, ಇಬ್ಬರೂ ಮದ್ರಾಸ್ ನಲ್ಲಿ ಕೆಲವು ತಿಂಗಳು ಸಂಸಾರವನ್ನು ಕೂಡ ಮಾಡಿದರು. ಸಂಸಾರ ಅಂದರೆ ಏನು ಅಂತ ಗೊತ್ತಿಲ್ಲದ ವಯಸ್ಸಿನಲ್ಲಿಯೇ ಸರಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು..
ತದ ನಂತರ ಇಬ್ಬರಿಗೂ ಯಾಕೋ ಹೊಂದಾಣಿಕೆಯಾಗಲಿಲ್ಲ ಆಗ ಗಂಡನ ಜೊತೆ ಇರದೇ ತನ್ನ ಪೋಷಕರ ಜೊತೇನೆ ಜೀವನವನ್ನ ಸಾಗಿಸಿದರು ಸರಿತಾ. ಹೈ ಸ್ಕೂಲ್ ನಲ್ಲಿ ಓದುತ್ತಿದ್ದ ಸರಿತಾ ಅವರನ್ನ ನೋಡಿದ ರಸ್ತೆಯಲ್ಲಿ ನೋಡಿದ ಒಬ್ಬ ಬರಹಗಾರ, ಕಮಲ್ ಹಾಸನ್ ಅವರ ಚಿತ್ರದಲ್ಲಿ ನಟನೆ ಮಾಡುತ್ತೀಯಾ ಎಂದು ಕೇಳಿದರಂತೆ.. ನಟನೆಯ ಮೇಲೆ ಹುಚ್ಚು ಇಟ್ಟುಕೊಂಡಿದ್ದ ಸರಿತಾ ಕಮಲ್ ಹಾಸನ್ ಜೊತೆ ನಟನೆ ಮಾಡಲು ಒಪ್ಪಿದರು, ನಂತರ ತನ್ನ ಅದ್ಬುತ ಪ್ರತಿಭೆಯ ಮೂಲಕ ದೊಡ್ಡ ನಟಿಯಾಗಿ ಬೆಳೆದರು ನಟಿ ಸರಿತಾ.ಇನ್ನು ಈ ಸಮಯದಲ್ಲಿ ಸರಿತಾ ಅವರ ಮೊದಲ ಮದುವೆಯ ವಿಚ್ಛೇದನದ ಕೇಸ್ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿತು, ಕಮಲ್ ಹಾಸನ್ ಜೊತೆ ‘ಮಾರೋ ಚರಿತ್ರ’ ಚಿತ್ರದಲ್ಲಿ ನಟನೆ ಮಾಡಿದ ನಂತರ ಬೆಳಗಾಗುವುದರಲ್ಲಿ ದೊಡ್ಡ ಸ್ಟಾರ್ ಆಗಿಬಿಟ್ಟರು ನಟಿ ಸರಿತಾ.
ಈ ಸಮಯದಲ್ಲಿ ತನ್ನ ಹೆಂಡತಿಯನ್ನ ನನ್ನ ಜೊತೆ ಕಳುಹಿಸಿ ಎಂದು ಗಂಡ ವೆಂಕಟಸುಬ್ಬಯ್ಯ ಕೋರ್ಟ್ ನಲ್ಲಿ ಕೇಸ್ ಹಾಕಿದರು, ಆದರೆ ಆತನ ಜೊತೆ ಸಂಸಾರ ಮಾಡಲು ಸರಿತಾ ಅವರು ಒಪ್ಪಲಿಲ್ಲ.ಸರಿತಾರವರ ಈ ಕೇಸ್ ಹೈ ಕೋರ್ಟ್ ಮೆಟ್ಟಿಲ್ಲನ್ನ ಕೂಡ ತಲಿಪಿತು, ಆದರೂ ಸರಿತಾ ಅವರು ಒಪ್ಪಿಕೊಳ್ಳಲಿಲ್ಲ ಮತ್ತು ಅದು ಮದುವೆನೇ ಅಲ್ಲ ವಾದ ಮಾಡಿದರು, ಆಗ ಜೆಸ್ಟಿಸ್ ಚೌದರಿ ಕೊಟ್ಟ ತೀರ್ಪು ದೊಡ್ಡ ಸಂಚಲವನ್ನ ಉಂಟು ಮಾಡಿತು. ಇನ್ನು ಗೌರವಕ್ಕೆ ವಿರುದ್ಧವಾಗಿರುವ ವಿವಾಹವನ್ನು ಕಾನೂನಿನ ಸೆಕ್ಷನ್ 9 ನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಸ್ ಮುಕ್ತಾಯಗೊಳಿಸಿದರು.. ಆಕೆಯ ಅನುಮತಿ ಇಲ್ಲದೆ ಆಕೆಯ ದೇಹದ ಯಾವುದೇ ಭಾಗವನ್ನ ಮುಟ್ಟಿದರು ಅದು ತಪ್ಪು ಎಂದು ಸರಿತಾ ಪರವಾಗಿ ನಿಂತ ಕೋರ್ಟ್ ಆಕೆಗೆ ವಿಚ್ಛೇದನದನ್ನ ಕೊಟ್ಟಿತು, ಆವತ್ತು ಜೆಸ್ಟಿಸ್ ಚೌದರಿ ಕೊಟ್ಟ ತೀರ್ಪು ಈಗ ಸರಿತಾ ಕಾನೂನು ಎಂದು ಪ್ರತಿದಿನ ಕೋರ್ಟ್’ನಲ್ಲಿ ಕೇಳಿಸಿರುತ್ತದೆ.. ಈ ಮೂಲಕ ಬಾಲ್ಯವಿವಾಹದ ವಿರುದ್ದ ತಿರುಗಿ ಬಿದ್ದವರಲ್ಲಿ ಇವರು ಕೂಡ ಒಬ್ಬರು..
Comments