ಬಿಗ್ ಬಾಸ್ ಸ್ಪರ್ಧಿಗೆ ಕೂಡಿಬಂತು ಕಂಕಣ ಭಾಗ್ಯ...!
ಬಿಗ್’ಬಾಸ್ ನ ಕಂಟೆಸ್ಟಂಟ್, ಕಿರುತೆರೆಯ ಕಲಾವಿದನಿಗೆ ಕಂಕಣ ಯೋಗ ಕೂಡಿ ಬಂದಿದೆ. ಬಿಗ್ಬಾಸ್ ಸೀಸನ್5 ನಲ್ಲಿ ಸ್ಪರ್ಧಿಯಾಗಿದ್ದ, ಜಗನ್ ಇದೀಗ ತಮ್ಮ ಬಹುಕಾಲದ ಸ್ನೇಹಿತೆಯೊಟ್ಟಿಗೆ ಮದುವೆಯಾಗುತ್ತಿದ್ದಾರೆ. ರಕ್ಷಿತಾ ಮುನಿಯಪ್ಪ ಎಂಬುವವರೊಂದಿಗೆ ಜಗನ್ ನಿಶ್ಚಿತಾರ್ಥ ಮಾಡಿಕೊಂಡು ಸದ್ಯದಲ್ಲೇ ಮದುವೆ ಡೇಟ್ ಕೂಡ ಅನೌನ್ಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದುಬೈನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗಿಸಿರುವ ರಕ್ಷಿತಾ ಮುನಿಯಪ್ಪ ಕೆಲ ವರ್ಷಗಳ ಹಿಂದಷ್ಟೇ ಸೀರಿಯಲ್ ನಟ ಜಗನ್ ರೊಂದಿಗೆ ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ಸುಮಾರು ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಸದ್ಯ ಎರಡು ಕುಟುಂಬದವರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಳ್ಳುವುದರ ಮೂಲಕ ಮದುವೆಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮೇ ತಿಂಗಳಲ್ಲಿ ಮದುವೆ ಡೇಟ್ ಫಿಕ್ಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ ನಟ ಜಗನ್. ಇತ್ತೀಚಿಗಷ್ಟೇ ಜಗನ್ ಬಿಗ್ ಸ್ಕ್ರೀನ್ ಗೆ ಎಂಟ್ರಿ ಆಗ್ತಿದ್ದಾರೆ ಎಂಬ ಸುದ್ದಿ ಕೂಡ ಆಯ್ತು. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಶಾರ್ಟ್ ಟೆಂಪರ್ ಅಂತಾನೇ ಕರೆಸಿಕೊಳ್ಳುತ್ತಿದ್ದ ಜಗನ್, ಧಾರವಾಹಿ ನಟಿ ಅನುಪಮಾರೊಂದಿಗೆ ಒಂದಷ್ಟು ಪ್ರೇಮ ಗಾಸಿಪ್ ಇದ್ದಾಗ್ಯು ಸುದ್ದಿ ಇತ್ತು. ಗಾಂಧಾರಿ ಧಾರವಾಹಿ ಮೂಲಕ ಮನೆಮಾತಾಗಿರುವ ಜಗನ್ ಸದ್ಯ ಸೀತಾ ವಲಭ ಧಾರವಾಹಿಯಲ್ಲೂ ಕಥಾ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಬಿಗ್ಬಾಸ್-5 ನಲ್ಲಿ ಸ್ಫರ್ಧಿಸಿದ್ದರು. ಅಲ್ಲದೇ ಡ್ಯಾನಿಂಗ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್-3 ನಲ್ಲೂ ಜಗನ್ ಹೆಜ್ಜೆ ಹಾಕಿದ್ದರು.
Comments