ಅತೀ ಚಿಕ್ಕ ವಯಸ್ಸಿನ ನಟಿಯನ್ನು ಮದುವೆಯಾಗ್ತಿರುವ ಆ ಟಾಪ್ ಸ್ಟಾರ್ ಯಾರು ಗೊತ್ತಾ...?



ಅಂದಹಾಗೇ ಪ್ರೀತಿಗೆ ಕಣ್ಣಿಲ್ಲ ಅನ್ನೋದು ನಿಜ ಅನಿಸುತ್ತೆ. ಅದಕ್ಕೆ ಜಾತಿ, ಧರ್ಮ, ವಯಸ್ಸು, ಏನು ಗೊತ್ತಾಗೋದೇ ಇಲ್ಲ. ಪ್ರೀತಿ ಬಲೆಗೆ ಬಿದ್ದೋರಲ್ಲಿ ಸಿನಿಮಾ ಸ್ಟಾರ್’ಗಳೇನು ಕಡಿಮೆ ಇಲ್ಲ. ಕೆಲ ಕ್ರಿಕೆಟರ್ಸ್, ಕೆಲ ಸಿನಿಮಾ ಸ್ಟಾರ್ ಗಳು ತಮಗಿಂತ ದೊಡ್ಡವರನ್ನು ಪ್ರೀತಿ ಮಾಡಿ, ಮದುವೆಯಾಗಿದ್ದಾರೆ. ಅದೇ ರೀತಿ ಇಲ್ಲೊಬ್ಬ ಖ್ಯಾತ ನಟ ತಮಗಿಂತ ಅತೀ ಚಿಕ್ಕವಯಸ್ಸಿನ ನಟಿಯನ್ನು ವರಿಸಿದ್ದಾರೆ. ಟಾಪ್ ಸ್ಟಾರ್’ವೊಬ್ಬರು ತನಗಿಂತ 17 ವರ್ಷ ಚಿಕ್ಕವಳಾದ ನಟಿಯನ್ನು ಮದುವೆಯಾಗಲು ಹೊರಟಿದ್ದಾರೆ.
ಆ ನಟ ಮತ್ತು ನಟಿ ಯಾರು ಗೊತ್ತಾ…? ತಮಿಳಿನ ಖ್ಯಾತ ನಟ, ರಾಜಾ-ರಾಣಿ ಖ್ಯಾತಿಯ ಆರ್ಯ. ಅಂದ ಹಾಗೇ ಈ ನಟ ರಾಜರಾಥ ಸಿನಿಮಾದ ಹೀರೋ. ಅಂದಹಾಗೇ ನೋಡೋಕೆ ಜಬರ್’ದಸ್ತ್ ಆಗಿರುವ ಸ್ಟಾರ್ ನಟ ಆರ್ಯ ತನಗಿಂತ ತುಂಬಾ ಚಿಕ್ಕ ವಯಸ್ಸಿನ ಅಂತರವಿರುವ ಸಾಯೇಷಾ ಸೈಗಲ್ ಅವರನ್ನು ವರಿಸುತ್ತಿದ್ದಾರೆ. ಸಾಯೇಷಾ ಸೈಗಲ್ ಈ ನಟಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾಳೆ. ನಟ ಆರ್ಯ ವಯಸ್ಸು 38 ವರ್ಷ, ನಟಿ ಸಾಯೇಷಾಗೆ 21 ವರ್ಷ, ಇವ್ವರಿಬ್ಬರ ಮಧ್ಯ17 ವರ್ಷ ವಯಸ್ಸಿನ ಅಂತರ ಇದೆ. ಇವರಿಬ್ಬರು ಗಜನಿಕಾಂತ್ ಚಿತ್ರದಲ್ಲಿ ಜೊತೆಗೆ ನಟಿಸುವಾಗ ಪ್ರೀತಿ ಮಾಡಲು ಶುರುಮಾಡಿದ್ದರು. ಸದ್ಯ ಹೊಸ ಬಾಳಿಗೆ ಹೆಜ್ಜೆ ಇಡಲು ನಿರ್ಧರಿಸುತ್ತಿದ್ದಾರೆ. ತನಗಿಂತ ವಯಸ್ಸಿನಲ್ಲಿ ಹೆಚ್ಚು ಅಂತರವಿರುವ ಹುಡುಗನನ್ನು ಮದುವೆಯಾಗ್ತಿದ್ದೀನಿ ಅಂತಾನೋ, ಸಾಯೇಷಾಗಾಗಲೀ, ತನಗಿಂತ ಅತೀ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾಗ್ತಿದ್ದೀನಿ ಅಂತಾ ನಟ ಆರ್ಯಗಾಗಲೀ ಯಾವುದೇ ಸಂಕೋಚವಿಲ್ಲವಂತೆ. ಯಾರು ಏನೇ ಹೇಳಿದ್ರು ನಾವಿಬ್ಬರು ಮದುವೆಯಾಗೋದೇ ಎನ್ನುತ್ತಾರೆ ಈ ಕ್ಯೂಟ್ ಸ್ಟಾರ್ ಕಪಲ್.
Comments