ಈ ಬಾರಿಯ ಬಿಗ್’ಬಾಸ್ ವಿನ್ನರ್ ಮಾರ್ಡನ್ ಕೃಷಿಕ….!

ಕನ್ನಡದ ಅತೀದೊಡ್ಡ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ -6 ವಿನ್ನರ್ ಯಾರೆಂದು ನಿನ್ನೆ ಘೋಷಣೆಯಾಗಿದೆ. ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಮನೆಯ ವಾಸದ ನಂತರ ಈ ಸೀಸನ್ ವಿನ್ನರ್ ರನ್ನು ನಿನ್ನೆ ಆಯ್ಕೆ ಮಾಡಲಾಗಿದೆ. ಜನರ ಓಟಿನ ಪ್ರಕಾರ ಈ ಬಾರಿ ಬಿಗ್’ಬಾಸ್ ವಿನ್ನರ್ ಆಗಿ ಟ್ರೋಫಿಗೆ ಮುತ್ತಿಕ್ಕಿದ್ದಾರೆ ಮಾರ್ಡನ್ ರೈತ ಶಶಿಕುಮಾರ್. ಬಿಗ್’ಬಾಸ್ ಕೊನೆಯ ತನಕ ಭಾರೀ ಕುತೂಹಲಕಾರಿಯಾಗಿtತ್ತು. ಕೊನೆಗೂ ಮುಕ್ತಾಯವಾಗಿದೆ.
ಮಾರ್ಡನ್ ರೈತ ಎಂದೇ ಗುರುತಿಸಿಕೊಂಡಿದ್ದ ಪಾರ್ಟ್ ಟೈಮ್ ಸೀರಿಯಲ್ ಆಕ್ಟರ್ ಶಶಿ ಕುಮಾರ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಶಶಿ ಕುಮಾರ ಧಾರಾವಾಹಿಯೊಂದರಲ್ಲೂ ಅಭಿನಯಿಸಿದ್ದರು. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಕಾಮನ್ ಮ್ಯಾನ್ ಆಗಿ ಎಂಟ್ರಿಕೊಟ್ಟ ಶಶಿ ಕುಮಾರ್ 'ಮಾರ್ಡನ್ ಕೃಷಿಕ' ಎಂಬ ಕಾರಣಕ್ಕೆ ಹಲವು ಅಭಿಮಾನಿಗಳು ಹುಟ್ಟಿಕೊಂಡರು.ನೋಡಲು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರುವ ಶಶಿ ಕುಮಾರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋವಿಂಗ್ ಇದೆ. ಅಭಿಮಾನಿಗಳ ಕೃಪೆಯಿಂದ ಶಶಿ ಕುಮಾರ್ 'ಬಿಗ್ ಬಾಸ್' ವಿನ್ನರ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇನ್ನು ಈ ಬಾರಿಯ ರನ್ನರ್ ಅಪ್ ಆಗಿ ಗಾಯಕ ನವೀನ್ ಸಜ್ಜು ಆಯ್ಕೆಯಾಗಿದ್ದಾರೆ.
Comments