ಸಿಲಿಕಾನ್ ಸಿಟಿಯಲ್ಲಿ ಸಿಕ್ಕಿಬಿದ್ದಳು ಕಣ್ಸನ್ನೆ ಹುಡುಗಿ…!!!
ರಾತ್ರಿ ಕಳೆದು ಹಗಲು ಆಗೋದ್ರೊಳಗೆ ಪ್ರಿಯಾ ಅನ್ನೋ ಹುಡುಗಿ ಇಡೀ ರಾಷ್ಟ್ರಕ್ಕೆ ಪರಿಚಯವಾಗಿದ್ದಳು.ಹುಡುಗರ ಹಾರ್ಟ್ ಗೆ ಬರೀ ಕಣ್ಸನ್ನೆ ಮೂಲಕ ಪ್ರೇಮಬಾಣ ಬಿಟ್ಟ ಮಲಯಾಳಿ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಬೆಂಗಳೂರಿಗೆ ಬಂದಿದ್ದಾರೆ. ಮಲಯಾಳಂನ ಒರು ಅದಾರ್ ಲವ್ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುನ್ನವೇ ಪ್ರಿಯಾ ಮಾಡಿದ ಕಣ್ಸನ್ನೆ ಮೋಡಿಗೆ ಯೂತ್ ಫಿದಾ ಆಗಿದ್ದರು.
ಈಗ ಅದೇ ಸಿನಿಮಾ ಕನ್ನಡಕ್ಕೆ ಡಬ್ ಆಗ್ತಿದೆ. ಇಂದು ಬೆಂಗಳೂರಿನಲ್ಲಿ ಸಿನಿಮಾ ತಂಡದೊಂದಿಗೆ ಬಂದಿದ್ದ ಪ್ರಿಯಾ ಪ್ರೆಸ್ ಮೀಟ್ ಕೂಡ ನಡೆಸಿದ್ದರು. ಕಿರಿಕ್ ಲವ್ ಸ್ಟೋರಿ ಮೂಲಕ ಕನ್ನಡಾಭಿಮಾನಿಗಳಿಗೆ ಮತ್ತಷ್ಟು ಹುಚ್ಚೆಬ್ಬಿಸೋಕೆ ಹುಬ್ಬು ಚೆಲುವೆ ಬರ್ತಿದ್ದಾರೆ. ಅಂದಹಾಗೇ ಇದೇ ಫೆ.14 ಪ್ರೇಮಿಗಳ ದಿನದಂದೇ ರಂದು ಸಿನಿಮಾ ಕಿರಿಕ್ ಲವ್ ಸ್ಟೋರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ. ಕಳೆದ ವರ್ಷ ಮಲಯಾಳಂನಲ್ಲಿ ರಿಲೀಸ್ ಆಗಿತ್ತು.ಒಮರ್ ಲುಲು ನಿರ್ದೇಶನದ ಮಲಯಾಳಂ ಸಿನಿಮಾ. ಇಬ್ಬರು ಹೈಸ್ಕೂಲ್ ಓದುತ್ತಿರೋ ಹುಡುಗ-ಹುಡುಗಿ ನಡುವೆ ನಡೆಯೋ ಕ್ಯೂಟ್ ಲವ್ ಸ್ಟೋರಿ. ಈಗ ಕನ್ನಡದಲ್ಲಿ ಈ ಕ್ಯೂಟ್ ಪ್ರೇಮಕಹಾನಿ ಡಬ್ ಆಗಿ ಬರ್ತಿದೆ.
Comments