'ಕರ್ನಾಟಕ ಬುಲ್ಡೋಜರ್ಸ್' ನಾಯಕತ್ವ ತೊರೆದ ಕಿಚ್ಚ ಸುದೀಪ್..? ಹಾಗಾದ್ರೆ ಮುಂದಿನ ನಾಯಕ ಯಾರ್ ಗೊತ್ತಾ..?

ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್ ) ಪಂದ್ಯಾವಳಿಯು ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದು, ಆರು ಸೀಜನ್ ಗಳಿಯೂ ಕೂಡ ಕನ್ನಡ ಚಿತ್ರರಂಗದ ಪರವಾಗಿ 'ಕರ್ನಾಟಕ ಬುಲ್ಡೋಜರ್ಸ್' ತಂಡ ಭಾಗವಹಿಸಿದೆ. ಎರಡು ಭಾರಿ ಸಿಸಿಎಲ್ ಟೂರ್ನಿಯಲ್ಲಿ ಗೆಲುವನ್ನು ಸಾಧಿಸಿದೆ.. ಈ ಹಿಂದಿನ ಎಲ್ಲಾ ಆವೃತ್ತಿಯಲ್ಲೂ ಕಿಚ್ಚ ಸುದೀಪ್ 'ಕರ್ನಾಟಕ ಬುಲ್ಡೋಜರ್ಸ್' ತಂಡದ ನಾಯಕರಾಗಿದ್ದರು. ಆದರೆ ಇದೀಗ, ಮುಂಬರುವ ಸೀಸನ್ ನಲ್ಲಿ ಸುದೀಪ್ ನಾಯಕತ್ವವನ್ನ ತೊರಯಲಿದ್ದಾರೆ ಎಂಬ ಮಾತುಗಳು ಸಿಸಿಲ್ ಬಳಗದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ...
ಸುದೀಪ್ ಒಂದು ವೇಳೆ ಕ್ಯಾಪ್ಟನ್ ಪಟ್ಟ ತೊರೆದರೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಸ್ಟಾರ್ ಆಟಗಾರ ಹಾಗೂ ಆಲ್ ರೌಂಡರ್ ಪ್ರದೀಪ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆಯಂತೆ. ಸುದೀಪ್ ನೇತೃತ್ವದ ತಂಡದಲ್ಲಿ ಪ್ರದೀಪ್ ಉತ್ತಮ ಪ್ರದರ್ಶನ ತೋರಿದ್ದು, ಸದ್ಯ ಉಪನಾಯಕನ ಸ್ಥಾನದಲ್ಲಿದ್ದಾರೆ. ಈಗ ಕ್ಯಾಪ್ಟನ್ ಆಗಿ ಪ್ರದೀಪ್ ಸ್ಥಾನ ಪಡೆದುಕೊಂಡರೇ, ರಾಜೀವ್ ಉಪನಾಯಕನಾಗಿ ಆಡುವ ಸಾಧ್ಯತೆ ಇದೆ. ಸುದೀಪ್ ಯಾವ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬುದು ಮಾತ್ರ ತಿಳಿದಿಲ್ಲ…ಸುದೀಪ್ ನಾಯಕತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಆರು ಸೀಸನ್ ಆಡಿದ್ದು, ಎರಡು ಬಾರಿ ಜಯಶಾಲಿಯಾಗಿದ್ದಾರೆ.
Comments