ರಾಕಿಬಾಯ್ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್..!
ಸ್ಯಾಂಡಲ್’ವುಡ್ ನಲ್ಲಿ ಸಿನಿಮಾಗಳ ಹಾವಳಿ ಹೆಚ್ಚಾಗಿದೆ.. ಇತ್ತಿಚಿಗಷ್ಟೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಬಿಡುಗಡೆಯಾಗಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಈ ಚಿತ್ರ ಮಾಡಿದ ದಾಖಲೆಗಳು ಒಂದೆರಡಲ್ಲ. ಈಗಾಗಲೇ, 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ 'ಕೆಜಿಎಫ್' ದೇಶ, ವಿದೇಶಗಳಲ್ಲಿಯೂ ಬಿಡುಗಡೆಯಾಗಿ ಗಳಿಕೆಯಲ್ಲಿ ಇಡೀ ಚಿತ್ರರಂಗದ ಗಮನವನ್ನೆ ಸೆಳೆದಿದೆ. ದಿನದಿಂದ ದಿನಕ್ಕೆ ಕೆಜಿಎಫ್ ಸಿನಿಮಾ ಸಖತ್ ಹವಾ ಕ್ರಿಯೆಟ್ ಮಾಡ್ತಿದೆ..
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ 'ಕೆಜಿಎಫ್' ಕನ್ನಡ ಮತ್ತು ಹಿಂದಿಯಲ್ಲಿ ಹೆಚ್ಚು ಗಳಿಕೆ ಕಂಡಿದೆ. ಈ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ ಮತ್ತೊಂದು ಹೊಸ ದಾಖಲೆಯನ್ನು 'ಕೆಜಿಎಫ್' ಮಾಡಿದೆ…ಬುಕ್ ಮೈ ಶೋ ಆಪ್ ನಲ್ಲಿ 4 ಲಕ್ಷಕ್ಕೂ ಅಧಿಕ ವೋಟ್ ಗಳಿಸಿದ ಏಕೈಕ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ 'ಕೆಜಿಎಫ್' ಪಾತ್ರವಾಗಿದೆ. 'ಬಾಹುಬಲಿ 2', 'ರೋಬೋ 2' ಬಳಿಕ ಇಷ್ಟೊಂದು ವೋಟ್ ಗಳಿಸಿದ ದಕ್ಷಿಣ ಭಾರತದ 3 ನೇ ಸಿನಿಮಾ 'ಕೆಜಿಎಫ್' ಆಗಿದೆ ಎನ್ನುವುದು ಚಿತ್ರದ ವಿಶೇಷ. ಇನ್ನು ಚಿತ್ರ ಬಿಡುಗಡೆಯಾದ ಸಮಯದಲ್ಲಿ ಟ್ರೆಂಡಿಂಗ್ ನಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿತ್ತು. ಬಿಡುಗಡೆಯಾದ ದಿನದಿಂದಲೂ ಸ್ಯಾಂಡಲ್ ವುಡ್ ನಲ್ಲಿ 'ಕೆಜಿಎಫ್' ಹವಾ ಹೆಚ್ಚಾಗಿಯೇ ಇದೆ…
Comments