ವರ್ಷಕ್ಕೂ ಮೊದಲೇ ಮುರಿದು ಬಿತ್ತಾ ಸಮಂತಾ-ನಾಗಚೈತನ್ಯ ಸಂಬಂಧ...?!!!

ಟಾಲಿವುಡ್ ನ ಟಾಪ್ ನಟಿ ಸಮಂತಾ ಹೊಸ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಕಳೆಯಿತು. ಅಕ್ಕಿನೇನಿ ಕುಟುಂಬದ ಮುದ್ದಿನ ಸೊಸೆಯಾಗಿ ನಾಗಚೈತನ್ಯ ಅವರನ್ನು ಕೈ ಹಿಡಿದಿದ್ದಾರೆ. ಆದರೆ ಈ ಸ್ವೀಟ್ ಕಪಲ್ ಮದುವೆಯಾಗಿ ವರ್ಷ ತುಂಬೋದ್ರೊಳಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಅಂದಹಾಗೇ ಎಲ್ಲಿ ಹೋದ್ರೂ ಎಲ್ಲರು ಸಮಂತಾ ಮತ್ತು ನಾಗಚೈತನ್ಯ ಪೇರ್ ಬಗ್ಗೆ ಹಾಡಿ ಹೊಗಳಿದ್ದೇ ಜಾಸ್ತಿ. ಆದರೆ ಇದೀಗ ಈ ಇಬ್ಬರ ದಾಂಪತ್ಯ ಬ್ರೇಕ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಮದುವೆಯಾದ ಮೇಲೆ ಇಬ್ಬರು, ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇವರಿಬ್ಬರು ಬ್ರೇಕ್ಅಪ್ ಆಗಲು ಸಿನಿಮಾಗಳೇ ಕಾರಣವಂತೆ.ಅಂದಹಾಗೇ ಮದುವೆಯಾದ ಮೇಲೆ ಸಮಂತಾ ನಟಿಸಿದ್ದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆದರೆ, ಇತ್ತ ನಾಗಚೈತನ್ಯ ಅಭಿನಯಿಸಿದ ಚಿತ್ರಗಳು ಸೋಲುಕಂಡಿವೆ. ಇದರಿಂದ ಇವರ ನ್ಯೂ ಲೈಫ್ ಗೆ ಪೆಟ್ಟುಬಿದ್ದಂತಾಗಿದೆ. ಸಮಂತಾಗೆ ಸಿನಿಮಾ ಮಾರ್ಕೆಂಟಿಗ್ ಹೆಚ್ಚಾದರೆ ಇತ್ತ ನಾಗಚೈತನ್ಯ ಡಿಮ್ಯಾಂಡ್ ಸದ್ಯಕ್ಕಂತೂ ಕಟಿಮೆಯಾಗಿದೆ. ಹಾಗಾಗಿ ಸತಿ-ಪತಿಗಳಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ ಬಂದಿದೆ. ನಾಗಚೈತನ್ಯಗೆ ಪತ್ನಿಯ ಡಿಮ್ಯಾಂಡ್ ಕಂಡು ಸ್ವಲ್ಪ ಅಸೂಯೆ ಬಂದಿದೆ. ಅಷ್ಟೇ ಅಲ್ಲದೇ ಸಮಂತಾ ಕೂಡ ನಾಗಚೈತನ್ಯರನ್ನು ಸಿನಿಮಾ ಫೀಲ್ಡ್ ನಲ್ಲಿ ಮೀರಿಸ್ತಾ ಇದ್ದಾರೆ. ಇವರಿಬ್ಬರು ಬೇರೆ ಬೇರೆಯಾಗೋಕೆ ಅದೇ ಕಾರಣ ಎಂಬ ಸುದ್ದಿ ಟಾಲಿವುಡ್’ನಲ್ಲಿ ಹರಿದಾಡುತ್ತಿದೆ. ಇಬ್ಬರು ಸದ್ಯದಲ್ಲೇ ಬ್ರೇಕಪ್ ಮಾಡಿಕೊಳ್ತಿದ್ದಾರೆ ಎಂಬ ಸುದ್ದಿ ತೆಲಗು ಸಿನಿ ಇಂಡಸ್ಟ್ರಿಯಲ್ಲಿ ಗಿರಕಿ ಹೊಡೆಯುತ್ತಿದೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಒಂದಷ್ಟು ಜನ ಗಾಸಿಪ್ ಅಂದ್ರೂ, ಹೀಗೂ ಇರಬಹುದು ಎನ್ನುವವರು ಇದ್ದಾರೆ. ಒಟ್ಟಾರೆ ಈಗ ತಾನೇ ಹೊಸ ಕೆರಿಯರ್ ಆರಂಭಿಸಿರುವ ಈ ಜೋಡಿ ಬೇರೆಬೇರೆಯಾಗದೇ ಬಾಳ ಬದುಕಿನಲ್ಲಿ ಒಟ್ಟಿಗೆ ಸಾಗಲಿ ಎಂಬುದು ನಮ್ಮೆಲ್ಲರ ಆಶಯ.
Comments