ಮದುವೆಯಾಗಲು ಗೌಡರ ಹುಡುಗನೇ ಬೇಕಂತೆ ರಚಿತಾ ರಾಮ್’ಗೆ..! ‘ಸೀತಾರಾಮ ಕಲ್ಯಾಣ’ ಪ್ರೆಸ್’ಮೀಟ್ ನಲ್ಲಿ ಡಿಂಪಲ್ ಕ್ವೀನ್ ಹೀಗಂದಿದ್ಯಾಕೆ..?

ಸದ್ಯ ಸ್ಯಾಂಡಲ್ ವುಡ್ ಕ್ವೀನ್ ರಚಿತಾರಾಮ್ ಮದುವೆಯ ಖುಷಿಯಲ್ಲಿದ್ದಾರೆ…ಜೊತೆಗೆ ಸೀತಾರಾಮ ಕಲ್ಯಾಣ ಬಿಡುಗಡೆಯಾದ ಸಂಭ್ರಮದಲ್ಲಿದ್ದಾರೆ.. ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಚೆಲುವೆ ರಚಿತಾ ರಾಮ್ ಇದೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.. ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಕೆಲವೇ ಕೆಲವು ನಟಿಯರಲ್ಲಿ ಇವರೂ ಕೂಡ ಒಬ್ಬರು.. ಫುಲ್ ಡಿಮ್ಯಾಂಡ್‌ನಲ್ಲಿರೋ ಈ ನಟಿ 'ಸೀತಾರಾಮ ಕಲ್ಯಾಣ' ಚಿತ್ರದ ಪ್ರೆಸ್ ಮೀಟ್‌ನಲ್ಲಿ ಮದುವೆ ಬಗ್ಗೆ ಒಂದು ಸುದ್ದಿ ಬಿಚ್ಚಿಟ್ಟಿದ್ದು ಎಲ್ಲರಲ್ಲೂ ಕ್ಯೂರಾಸಿಟಿ ಕ್ರಿಯೆಟ್ ಮಾಡಿದೆ.
ಪತ್ರಕರ್ತರಿಂದ ಬಂದ ಮದ್ವೆ ಪ್ರಶ್ನೆಗೆ, 'ಲವ್ ಮ್ಯಾರೇಜ್ ಆದರೂ ಓಕೆ, ಅರೆಂಜ್ಡ್ ಆದರೂ ಓಕೆ. ಆದರೆ, ನಾವು ಗೌಡರಾಗಿರೋದ್ರಿಂದ ಗೌಡರ ಹುಡಗನೇ ಬೇಕು....' ಎಂದು ಹೇಳಿ ಡಿಂಪಲ್ ಕ್ವೀನ್ ಸ್ಮೈಲ್ ಮಾಡಿದ್ದಾರೆ. ಅವರು ಹೇಳಿದ ಮಾತಿಗೂ, ಅವರ ನಗುವಿಗೂ ಏನೋ ಲಿಂಕ್ ಇರಬಹುದಾ ಎಂಬುವುದು ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿರೋ ಹೊಸ ಗಾಸಿಪ್. ರಚಿತಾ ಅವರು ಹೀಗೆ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲಿ ನೋಡಿದರೂ ಈ ವೀಡಿಯೋ ಹರಿದಾಡುತ್ತಿದೆ. 'ಸೀತಾರಾಮ ಕಲ್ಯಾಣ'ದೊಂದಿಗೆ 'ರುಸ್ತುಂ' ಚಿತ್ರದಲ್ಲಿಯೂ ರಚಿತಾ ತೆರೆ ಮೇಲೆ ಕಾಣಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿಯೊಂದಿಗೆ ರಚಿತಾ 'ಸೀತರಾಮ ಕಲ್ಯಾಣ'ದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕಳೆದ ವಿಧಾನ ಸಭೆ ಚುನಾವಣೆ ವೇಳೆ ಜೆಡಿಎಸ್ ಪರವಾಗಿಯೂ ರಚಿತಾ ರಾಮ್ ಪ್ರಚಾರವನ್ನು ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳಿಗೂ, ರಚಿತಾ ಸ್ಟೇಟ್‌ಮೆಂಟ್‌ಗೂ ಲಿಂಕ್ ಆಗುತ್ತಿದೆ ಎನ್ನೋ ಗುಸು ಗುಸು ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ.
Comments