ಅಂಬಿ ಮಾಡ್ತಾ ಇದ್ದ ಕೀಟಲೆಗಳನ್ನು ನೆನೆದು ಭಾವುಕರಾದ್ರು ಜಲೀಲನ ಸ್ನೇಹಿತೆ !!!
ಸೆಟ್’ನಲ್ಲಿ ಅಂಬಿ ನನ್ನನ್ನು ತುಂಬಾನೇ ರೇಗಿಸ್ತಾ ಇದ್ರು. ನಾನು ಅಂಬಿ ಜೊತೆ ಸಿನಿಮಾ ಸೆಟ್ ನಲ್ಲಿದ್ದಾಗ ಸಿಕ್ಕಾಪಟ್ಟೆ ಕಾಲೇಳಿತಾ ಇದ್ರು. ತುಂಬಾ ಹಾಸ್ಯ ಮಾಡ್ತ ಮಾಡ್ತಾ ಇದ್ರು. ಅಂಬಿ ಜೊತೆ ನಾಲ್ಕು ಸಿನಿಮಾ ಮಾಡಿದ್ದೀನಿ ತುಂಬಾನೇ ಒಳ್ಳೆ ವ್ಯಕ್ತಿ. ಡ್ಯಾನ್ಸ್ ಮಾಡುವಾಗ ಸುಮ್ಮನೇ ಕಟ್ ಕಟ್ ಅಂತಾ ನನ್ನನ್ನು ಸತಾಯಿಸ್ತ ಇದ್ರು ತಾವು ನಗ್ತಾ ಅವರು ಖುಷಿಖುಷಿಯಾಗಿ ಇರ್ತಾಯಿದ್ರು ಎಂದು ಮಿಡಿದ ಹೃದಯಗಳು ಸಿನಿಮಾ ನಾಯಕಿ ನಿರೋಷಾ.
ಅಲ್ದೇ ನನ್ನ ಪತಿ ಹೆಸರು ರಾಮಕೃಷ್ಣನ್, ಅಂಬಿ ಮೇಕಪ್ ಮ್ಯಾನ್ ಹೆಸರು ರಾಮಕೃಷ್ಣ ನ್. ಅವರನ್ನ ಎಲ್ಲರು ರಾಮ್ ಕೀ ಅಂತಾನೇ ಕರೆಯುತ್ತಿದ್ದರು. ನಾನು ಇದ್ದಾಗ ರಾಮ್ ಕೀ ಅಂತಾ ಸುಮ್ಮನೆ ಕರೀತಾ ಇದ್ರು. ನಾನು ಸಡನ್ ಆಗಿ ತಿರುಗಿ ನೋಡ್ತಾ ಇದ್ದೆ, ಅವರು ನಾನು ಕರೆದಿದ್ದೂ ನಿಮ್ಮ ಪತಿಯನ್ನಲ್ಲ. ನಾನು ಕರೆದಿದ್ದು ನನ್ನ ಮ್ಯಾಕಪ್ ಮ್ಯಾನ್ನನ್ನು, ನೀವು ಯಾಕೆ ತಿರುಗಿ ನೋಡ್ತೀರಿ ಅಂತಾ ರೇಗಿಸೋರು, ಇದೆಲ್ಲಾ ಇವಾಗ ನೆನಪು ಅಷ್ಟೆ. ಮತ್ತೆ ಅಂಬಿಗೆ ಯಾವ ಸ್ಟಾರ್ ಗಳು ಬಂದ್ರು ಅಷ್ಟೆ ಅವರೆಷ್ಟೇ ದೊಡ್ಡ ಸ್ಟಾರ್ ಆದ್ರು, ಚಿಕ್ಕ ಕಲಾವಿದರಾದ್ರು ಒಂದೇ ಥರಾ ನೋಡ್ತಾ ಇದ್ರು. ಎಲ್ಲರನ್ನು ಬನ್ನಿ, ಕುತ್ಕೊಳ್ಳಿ, ಏನ್ ತಿಂತೀರಾ,ಕುಡಿತೀರಾ ಅಂತಾ ವಿಚಾರಿಸೋರು ಇವಾಗ ತುಂಬಾನೇ ಮಿಸ್ ಮಾಡ್ಕೊಳ್ತಿದ್ದೀವಿ.
ಅಷ್ಟೇ ಅಲ್ದೇ ರಾಗಿ ಮುದ್ದೆ ತಿನ್ನೋದನ್ನ ಕಲಿಸಿಕೊಟ್ಟಿದ್ದೇ ಅವರು ನನಗೆ.ಇವಾಗ ನಮ್ಮೊಂದಿಗಿಲ್ಲ ಎಂಬುದೇ ಒಂದು ದೊಡ್ಡ ಫೀಲ್ ಎಂದು ಭಾವುಕರಾದ್ರು. ಮತ್ತೆ ಅವರೊಂದಿಗೆ ಸಿನಿಮಾ ಮಾಡೋಕೆ ಚಾನ್ಸ್ ಸಿಕ್ಕಿಲ್ಲ ಎನ್ನುತ್ತಾರೆ ನಟಿ. ಅಂದಹಾಗೇ ನಟಿ ನಿರುಷಾ ಕನ್ನಡದಲ್ಲಿ ಐದು ಸಿನಿಮಾಗಳನ್ನು ಮಾಡಿದ್ದಾರೆ. ಅಂಬಿ ಜೊತೆ ಮಿಡಿದ ಹೃದಯಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲಾಕಪ್ ಡೆತ್, ಇಬ್ಬರ ಹೆಂಡಿರ ಮುದ್ದಿನ ಪೊಲೀಸ್, ಗಂಡುಗಲಿ, ಮದರ್ ಇಂಡಿಯಾ ಸಿನಿಮಾದಲ್ಲೂ ಕೂಡ ಅಭಿನಯಿಸಿದ್ದಾರೆ.ಸದ್ಯ ನಟಿ ನಿರೋಷಾ ಪೈಟರ್ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ವಿನೋದ್ ಪ್ರಬಾಕರ್ ಜೊತೆ ಆ್ಯಕ್ಟ್ ಮಾಡುತ್ತಿದ್ದು, ಚಿತ್ರದಲ್ಲಿ ಡಿಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Comments