ಕವಿತಾ ಬಿಗ್’ಬಾಸ್’ಗೆ ಹೋಗಿರುವುದರ ರಹಸ್ಯ ಬಿಚ್ಚಿಟ್ಟ ಅಮ್ಮ…!!!

ಬಿಗ್’ಬಾಸ್ ಕನ್ನಡದ ಅತೀದೊಡ್ಡ ರಿಯಾಲಿಟಿ ಶೋ. ಸೀಸನ್ -6 ಫೈನಲ್ ಹಂತ ತಲುಪಿದೆ. ಮನೆಯಲ್ಲಿ ಸದ್ಯ ಉಳಿದುಕೊಂಡಿರುವುದು ಕೇವಲ ಐದು ಮಂದಿ, ಅದರಲ್ಲಿ ನಟಿ ಕವಿತಾ ಗೌಡ ಕೂಡ ಒಬ್ಬರು. ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ಮನೆ ಮಾತಾಗಿದ್ದ ಲಚ್ಚಿ ಅಲಿಯಾಸ್ ಚಿನ್ನು ಬಿಗ್’ಬಾಸ್ ಮೂಲಕ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಬಿಗ್’ಬಾಸ್ ಮನೆಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿರುವ ಈಕೆ ಅಮ್ಮನಿಗೂ, ತಂಗಿಗೂ ಫೇವರೀಟ್ ಅಂತೆ. ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕವಿತಾ ತಾಯಿ….
ಬಿಗ್’ಬಾಸ್ ಮನೆಯಲ್ಲಿ ಕವಿತಾ ಹೋಗಿದ್ದೇ ಬೇರೆ ಉದ್ದೇಶಕ್ಕೆ. ನಾನು ಅವಳಿಗೆ ಹೋಗೋ ಮುನ್ನ ಒಂದು ನಿಮಿಷ ನಿನ್ನೊಂದಿಗೆ ಮಾತನಾಡಬೇಕು ಎಂದು ಪಕ್ಕಕ್ಕೆ ಕೂರಿಸಿಕೊಂಡೆ. ಅವಳಿಗೆ ನೋಡು ರಾಜಾ ನೀನು ನಿನ್ನ ಬುದ್ಧಿಯನ್ನ ತಲೆಯಲ್ಲಿ ಇಟ್ಕೋ ಅಂತಾ ಹೇಳಿದ್ದೆ. ಏನ್ ಕೆಲಸ ಮಾಡ್ತಿದ್ದೀಯಾ, ಯಾತಕ್ಕಾಗಿ ಅಲ್ಲಿಗೆ ಹೋಗ್ತಿದ್ದೀಯಾ ಅಂತಾ ಗಮನದಲ್ಲಿಟ್ಟುಕೋ ರಾಜಾ ಅಂದೆ. ಅದಕ್ಕವಳು ಯಾವತ್ತೂ ನಿಮ್ಮ ಮಾತನ್ನು ಮೀರಲ್ಲ ಅಮ್ಮ ಎಂದಳು. ನನ್ನ ಮಗಳು ಏನು ಅಂತಾ ನನಗೆ ಗೊತ್ತು.ಕವಿತಾ –ಶಶಿ ಬಗ್ಗೆ ಜನ ಏನ್ ಹೇಳಿದ್ರೂ ನನಗೆ ಫೀಲ್ ಆಗಲ್ಲ. ಅವಳ ಬಗ್ಗೆ ನನಗೆ ಗೊತ್ತು. , ನಾನು ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದೀನಿ, ಅಮ್ಮನಾಗಿ ನಾನು ಈ ಮಾತು ಹೇಳ್ತಿಲ್ಲ … ಆ ದೇವರು ನನಗೆ ನನಗೆ ಥರದ್ದ ಹೆಣ್ಣುಮಕ್ಕಳನ್ನು ಕೊಟ್ಟಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಗುತ್ತೆ. ಇಂತಹ ಮಕ್ಕಳನ್ನು ಪಡೆಯೋಕೆ ನಾನು ತುಂಬಾ ಧನ್ಯಂತೆ. ನಾನು ತುಂಬಾ ಸಫರ್ ಪಟ್ಟೆ. ಒಂದೊಂದು ರೂಪಾಯಿ ಗೂ ಕಷ್ಟ ಅನುಭವಿಸಿದ್ದೆ. ಅವರಿಗೆ ಬೇರೆ ವಿಚಾರಕ್ಕೆ ಯೋಚನೆ ಮಾಡೋಕೆ ಕೊಡ್ತಾ ಇರಲಿಲ್ಲ. ಸಿಕ್ಕಾಪಟ್ಟೆ ಲೈಫ್ ‘ನಲ್ಲಿ ಕಷ್ಟಪಟ್ಟಿದ್ದೀನಿ. ನಾನು ಸೇವಿಂಗ್ಸ್ ಅಂತಾ ಏನು ಉಳಿಸಿಲ್ಲ.
ನಮ್ಮಹತ್ರ ಯಾವ ಆಸ್ತಿ ಅಂತಸ್ತು ಇಲ್ಲ, ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಮ್ಮ ಮೈ ಮೇಲಿನ ಚಿನ್ನ ಬಿಟ್ಟು ನಾವು ಏನನ್ನೂ ಉಳಿಸಿಲ್ಲ ವೆಂದು ಕಣ್ಣೀರಿಡುತ್ತಾರೆ. ಮಕ್ಕಳಗೆ ಓದು, ಕಲೆ ಬಿಟ್ರೆ ಏನು ಮಾಡಿಲ್ಲ ಸರ್ ಎಂದು ಕಣ್ಣೀರಿಡುತ್ತಾರೆ ಕವಿತಾ ತಾಯಿ ಆಶಾ. ನಾನೊಬ್ಬಳು ಸಿಂಗಲ್ ಪೇರೆಂಟ್,ತುಂಬಾನೇ ಕಷ್ಟ ಪಟ್ಟೆ ಸರ್. ನಾನು ಕೂಡ 24 ಘಂಟೆ ಕೆಲಸ ಮಾಡಿದ್ದೀನಿ ಸರ್. ಕವಿತಾ ಬಿಗ್’ಬಾಸ್ ಮನೆಗೆ ಹೋಗಿದ್ದೇ ನಮ್ಮ ಕಷ್ಟಕ್ಕೆ. ದುಡ್ಡಿಗಾಗಿಯೇ ಕವಿತಾ ಬಿಗ್’ಬಾಸ್ ಮನೆಯಲ್ಲಿ ಇದ್ದಾಳೆ ಎಂದು ಕಣ್ಣೀರಿಡುತ್ತಾರೆ. ಇನ್ನು ಮದುವೆ ವಿಚಾರವಾಗಿ ಮಾತನಾಡೋದಾದ್ರೆ …ಅವಳು ಬಂದು ಅಮ್ಮ ನಾನು ಇಂಥವರನ್ನು ಮದುವೆಯಾಗ್ತೀನಿ ಅಂತಾ ಹೇಳಿದ್ರೆ, ನಾನು ಇರೋದನ್ನ ಹೇಳ್ತೀನಿ. ಅದೆಲ್ಲಾ ಅವರಿಗೆ ಬಿಟ್ಟಿದ್ದು. ಮದುವೆ ವಿಚಾರದಲ್ಲಿ ನನ್ನ ನಿರ್ಧಾರ ಕೂಡ ಜಾಸ್ತಿ ಕೂಡಿದೆ ಬಿಗ್ಬಾಸ್ ಮನೆಯಲ್ಲಿ ಕವಿತಾ ತುಂಬಾ ಎಮೋಷನಲ್ ಆಗ್ತಾಳೆ. ಅವಳ ಬದುಕು ಬಹಳ ಕಷ್ಟವಿದೆ. ಯಾರು ಬಿಗ್’ಬಾಸ್ ಬೇಕಾದ್ರೂ ಗೆಲ್ಲಲಿ, ನಮಗೆ ಖುಷಿ. ಬಿಗ್’ಬಾಸ್ ಮನೆಯಲ್ಲಿ ನನ್ನ ಮಗಳು ಅದಾಗಲೇ ವಿನ್ನರ್ ಆಗಿದ್ದಾಳೆ ಎನ್ನುತ್ತಾರೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಕವಿತಾ ತಾಯಿ ಶಶಿ.
Comments