ಅಭಿನಯ ಚಕ್ರವರ್ತಿ ಸುದೀಪ್ ಮೇಲೆ ಬಿಗ್’ಬಾಸ್ ಅಭಿಮಾನಿಗಳ ಆಕ್ರೋಶ..! ಕಾರಣವೇನು ಗೊತ್ತಾ..?

ಕಿರುತೆರೆಯಲ್ಲಿ ಬರುತ್ತಿರುವ ಬಿಗ್ ರಿಯಾಲಿಟಿ ಷೋ ಬಿಗ್ ಬಾಸ್ ಪೈನಲ್ ಹಂತ ತಲುಪಿದೆ.. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕಳೆದ ವಾರ ಕಾಮನ್ ಮ್ಯಾನ್ ಆಗಿ ಮನೆಯೊಳಗೆ ಎಂಟ್ರಿ ಪಡೆದಿದ್ದ ಧನರಾಜ್ ರನ್ನು ಹೊರ ಹಾಕಿದ್ದಕ್ಕೆ ಇದೀಗ ಅಭಿಮಾನಿಗಳು ಭಾರೀ ಸಿಟ್ಟಾಗಿದ್ದಾರೆ. ಮೊದಲಿನಿಂದಲೂ ಧನರಾಜ್ ನ ಇಷ್ಟ ಪಡುತ್ತಿದ್ದ ಅಭಿಮಾನಿಗಳು ನಿರಾಸೆ ಆಗಿದ್ದಂತೂ ಸುಳ್ಳಲ್ಲ… ಧನರಾಜ್ ಮೇಲೆ ಅಭಿಮಾನ ಇಟ್ಟಿರುವ ಜನ ಇಷ್ಟಿರಬೇಕಾದ್ರೆ ಎಲಿಮಿನೇಷನ್ ಆಗೋಕೆ ಹೇಗ್ ಸಾಧ್ಯ…ಅನ್ನೋದು ವೀಕ್ಷಕರ ಪ್ರಶ್ನೆ.
ಬಿಗ್ ಬಾಸ್ ನಲ್ಲಿ ಇತರ ಸ್ಪರ್ಧಿಗಳಿಗಿಂತಲೂ ಹೆಚ್ಚು ಪ್ರಾಮಾಣಿಕವಾಗಿ, ಅಂದಿನಿಂದ ಇಂದಿನವರೆಗೂ ತಮ್ಮ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಿಲ್ಲದೇ ನಿಯತ್ತಾಗಿ ಆಡಿದ ಧನರಾಜ್ ರನ್ನು ಹೀಗೆ ಏಕಾಏಕಿ ಮಧ್ಯರಾತ್ರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿದ್ದು, ವೀಕ್ಷಕರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಇದರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ನಿರೂಪಕರೂ ಆಗಿರುವ ಕಿಚ್ಚ ಸುದೀಪ್ ಮೇಲೆಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಫಿಕ್ಸಿಂಗ್ ಶೋಗೆ ನಿರೂಪಕರಾಗಿದ್ದೀರಲ್ಲಾ ಎಂದು ಸುದೀಪ್ ಮೇಲೆಯೇ ಅಭಿಮಾನಿಗಳು ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ, ಕಲರ್ಸ್ ಕನ್ನಡದ ಬಗ್ಗೆಯೂ ಆಕ್ರೋಶ ಹೊರಹಾಕುತ್ತಿದ್ದಾರೆ. ಧನರಾಜ್ ಈ ಸೀಜನ್ ನ ವಿನ್ನರ್ ಆಗೆ ಆಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಆದರೆ ಏಕಾಕಿ ಹೀಗೆ ಆಗಿರುವುದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ.
Comments