ಬ್ಯಾಚುಲರ್ ಲೈಫ್'ಗೆ ಗುಡ್ ಬೈ ಹೇಳ್ತಿರೋ ನಟಿ ಕಾಜಲ್...!
ದಕ್ಷಿಣ ಭಾರತದ ಚೆಲುವೆ, ತೆಲುಗಿನ ಡಾರ್ಲಿಂಗ್ ಕಾಜೋಲ್ ಅಗರ್’ವಾಲ್ ಮದುವೆ ಮಾಡಿಕೊಳ್ಳೋಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಾಜಲ್ ಸಿನಿಮಾ ಇಂಡಸ್ಟ್ರಿಗೆ ಬಂದು 11 ವರ್ಷ ಕಳೆದ್ರೂ ಈಕೆಯ ಕಾಲ್ ಶೀಟ್ ಪಡೆಯುವುದು ಮಾತ್ರ ಕಷ್ಟವೇ. ಅಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿರುತ್ತಾರೆ ಈ ಮಗಧೀರನ ರಾಣಿ.
ಅಂದಹಾಗೇ ನಟಿ ಕಾಜಲ್ ಹೇಳುವುದು, ನನಗೂ ಮದುವೆಯಾಗಬೇಕು ಎಂಬ ಆಸೆ ಈಗ ಬಂದಿದೆ. ನಾನು ಹೋದಲ್ಲೆಲ್ಲ ನಿಮ್ಮ ಮದುವೆ ಯಾವಾಗ ಅಂತಾ ಕೇಳ್ತಿದ್ದವರಿಗೆ ನಾನು ಗುಡ್ ನ್ಯೂಸ್ ಕೊಡ್ತಾ ಇದ್ದೀನಿ ಎಂದರು. ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ನಾನು ಸಿನಿಮಾ ಫೀಲ್ಡ್ ನಲ್ಲಿರೋರ ಜೊತೆ ಯಾವ ರಿಲೇಷನ್’ಶಿಪ್ ಇಟ್ಕೊಂಡಿಲ್ಲ. ನಾನು ಹುಡುಗನ್ನು ಹುಡುಕೋದಾದ್ರೆ ಅದು ಬೇರೆ ಫೀಲ್ಡ್ನಲ್ಲಿರೋರನ್ನೇ ಸರ್ಚ್ ಮಾಡಬೇಕು ಎಂದಿದ್ದಾರೆ. ಇತ್ತೀಚಿಗೆ ಸಿನಿಮಾ ಫೀಲ್ಡ್ ನಲ್ಲಿದ್ದ ಅನೇಕ ಸ್ಟಾರ್’ಗಳು ಮದುವೆಯಾಗಿದ್ದಾರೆ. ಇವರನ್ನ ನೋಡ್ತಿದ್ರೆ ನನಗು ಮದುವೆ ಆಗೋ ಆಸೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಅವರು ಲವ್ ಮ್ಯಾರೇಜ್ ಮಾಡ್ಕೊಳ್ತಾರೋ, ಅಥವಾ ಅರೇಂಜ್ ಮ್ಯಾರೇಜ್ ಮಾಡ್ಕೊಳ್ತಾರಾ ಅನ್ನೋದ್ರ ಬ್ಗಗೆ ಸದ್ಯದಲ್ಲೇ ಸುಳಿವು ಕೊಡಬಹುದು. ಸದ್ಯಹಿಂದಿ ಸಿನಿಮಾವೊಂದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.ಸದ್ಯಕ್ಕಂತೂ ಕಾಜಲ್ ತಮ್ಮ ಮದುವೆಯಾಗೋ ಹುಡುಗನಿಗೆ ಯಾವ ಥರಾ ಕ್ವಾಲೀಟೀಸ್ ಬೇಕು ಎನ್ನೋದ್ರ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟು ಕೊಡದೇ ಎಲ್ಲಾ ಹುಡಗಿಯರು ಹೇಗೆ ನಿರೀಕ್ಷೆ ಮಾಡ್ತಾರೇ ಹಾಗೇ ಇದ್ರೆ ಸಾಕು ಎನ್ನುತ್ತಾರೆ. ಒಟ್ಟಾರೆ ಹುಡುಗ ಯಾರು…? ಏನು…? ಎಲ್ಲಿಯವರು ಅನ್ನೋದನ್ನ ಬಿಟ್ಟುಕೊಡದೇ ಇದ್ರು, ಎಲ್ಲೋ ಒಂದು ಕಡೆ ಕಾಜಲ್ ಹುಡುಗನ್ನಾ ಅದಾಗಲೇ ಫಿಕ್ಸ್ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಟಾಲಿವುಡ್’ನಲ್ಲಿ ಹರಿದಾಡುತ್ತಿದೆ.
Comments