‘ದಶರಥ’ನೊಂದಿಗೆ ಒಂದಾದ ‘ಸಾರಥಿ’..!! ‘ಅಂಜದಗಂಡ’ನ್ನು ಹಾಡಿ ಹೊಗಳಿರುವ ‘ದಾಸ’..!!!



ಸ್ಯಾಂಡಲ್ವುಡ್ ನಲ್ಲಿ ಒಂದು ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಇದ್ದ ಅಭಿಮಾನಿಗಳು ಯಾರಿಗೂ ಇರಲಿಲ್ಲ.. ಚಂದನವನವನ್ನ ಬಹಳಷ್ಟು ಕಾಲ ಆಳಿದ ಹೀರೋ ಅಂದ್ರೆ ಅದು ಕ್ರೇಜಿಸ್ಟಾರ್…ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಲಾಯರ್ ಆಗಿ ನಟಿಸಿರುವ ಚಿತ್ರ ದಶರಥ ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಮುಂದೆ ತೆರೆಗೆ ಬರಲು ಸಿದ್ದವಾಗುತ್ತದೆ. ಈ ಚಿತ್ರದಲ್ಲಿ ವಿರೋಧಿಗಳಿಗೆ ತಮ್ಮ ಲಾ ಪಾಯಿಂಟ್ ಮೂಲಕ ಶಿಕ್ಷೆ ಕೊಡಿಸುವ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಷ್ಯಾ ಏನಪ್ಪಾ ಅಂದ್ರೆ ರವಿಚಂದ್ರನ್ ಅವರ ಈ ದಶರಥ ಸಿನಿಮಾದಲ್ಲಿನ ಒಂದು ಹಾಡಿಗೆ ಡಿ ಬಾಸ್ ಧ್ವನಿಯಾಗಿದ್ಧಾರೆ ಈಗಾಗಲೇ ಚಲನಚಿತ್ರಗಳಲ್ಲಿ ನರೇಷನ್ ಮೂಲಕ ಎಲ್ಲರ ಕೈಯಲ್ಲೂ ಸೈ ಎನಿಸಕೊಂಡಿದ್ದ ದರ್ಶನ್ ಅವರು ಈ ಚಿತ್ರದಲ್ಲಿ ರವಿಚಂದ್ರನ್ ಅವರ ಗುಣಗಾನವನ್ನು ಹಾಡಿನಲ್ಲಿ ಹಾಡಿ ಹೊಗಳಿದ್ದಾರೆ ಎಂದು ಹೇಳಲಾಗುತ್ತಿದೆ... ಇನ್ನು ಈ ಹಾಡು ಹೇಗಿರಲಿದೆ ಎಂದು ರವಿಚಂದ್ರನ್ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು ಈ ಹಾಡಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ರವಿಚಂದ್ರನ್ ಮತ್ತು ದರ್ಶನ್ ಅವರು ಕುರುಕ್ಷೇತ್ರದಲ್ಲಿ ನಟಿಸಿದ್ದಾರೆ..ಈ ಸಿನಿಮಾಗಾಗಿಯೂ ಕೂಡ ಅಭಿಮಾನಿಗಳು ಕಾಯುತ್ತಿದ್ದಾರೆ.
Comments