ಸಮುದ್ರಕ್ಕೆ ಜಾರಿ ಖ್ಯಾತ ನಟಿ ಸಾವು...!!!



ಸಮುದ್ರದ ಅಲೆಯೊಳಗೆ ಸಿಕ್ಕಿ ಖ್ಯಾತ ನಟಿಯೊಬ್ಬರು ಸಾವನಪ್ಪಿರುವ ಘಟನೆ ನಿನ್ನೆ ನಡೆದಿದೆ. ಈಕೆ ಮಾಡೆಲ್ ಕೂಡ ಆಗಿದ್ದರು. ಅಂದಹಾಗೇ ಈಕೆ ಚಿಕ್ಕವಯಸ್ಸಿನಲ್ಲೇ ಸಾವನಪ್ಪಿರುವುದು ದುರಂತವೇ ಸರಿ. ಈಕೆಗೆ ಕೇವಲ 19 ನೇ ವರ್ಷ ಅಷ್ಟೇ ವಯಸ್ಸಾಗಿತ್ತು. ಸಾವಿಗೆ ಬಲಿಯಾದ ಆ ಖ್ಯಾತ ನಟಿ ಸಿನಾದ್ ಮೂಡ್ಲಿಯರ್.
ಸಿನಿಮಾ ಇಂಡಸ್ಟ್ರಿಯಲ್ಲಿ ಬದುಕು ಕಟ್ಟಿಕೊಳ್ಳ ಬೇಕೆಂಬ ಮಹಾದಾಸೆಯಿಂದ ಚಿಕ್ಕವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಯಂಗ್ ಮಾಡೆಲ್ ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಲಂಡನ್ನಿನಲ್ಲಿ ವಾಸವಿದ್ದ ಈಕೆ, ಸ್ನೇಹಿತರೊಟ್ಟಿಗೆ ದಕ್ಷಿಣಾ ಆಫ್ರಿಕಾಕ್ಕೆ ಪ್ರವಾಸಕ್ಕೆಂದು ಹೋದಾಗ ಈ ದುರಂತ ಸಂಭವಿಸಿದೆ ದ.ಆಫ್ರಿಕಾದ ಬೀಚೊಂದರಲ್ಲಿ ಸ್ನೇಹಿತರ ಜೊತೆ ನಿಂತು ನಟಿ, ಬೆಳಗಿನ ಸೂರ್ಯೋದಯವನ್ನು ನೋಡ್ತಾ ಇರುವಾಗ ಮಿಸ್ ಆಗಿ ಸಮುದ್ರದ ಒಳಗೆ ಬಿದ್ದಿದ್ದಾರೆ. ಅಲೆಗಳ ರಭಸಕ್ಕೆ ಸಿಕ್ಕಿ ನಟಿ ತಲೆ ಬಂಡೆಗೆ ಹೊಡೆದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾದರು ಚಿಕಿತ್ಸೆ ಫಲಕಾರಿಯಾಗದೇ ನಟಿ ಸಾವನಪ್ಪಿದ್ದಾರೆ. ಈಕೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದೂ, ಮಾಡೆಲಿಂಗ್ ಕ್ಷೇತ್ರದಲ್ಲೂ ಕೂಡ ಹೆಸರು ಮಾಡಿದ್ದಾರೆ.
Comments