ನಟಿ ಕಂಗನಾ ಮನೆಗೆ ಬಿಗಿ ಪೊಲೀಸ್ ಭದ್ರತೆ...!!!

ಬಾಲಿವುಡ್ ನ ಕ್ವೀನ್ ಕಂಗನಾ ರಣಾವತ್ ಅವರ ಬಹು ನಿರೀಕ್ಷಿತ ಸಿನಿಮಾ ಮಣಿಕರ್ಣಿಕಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಕಥೆಯ ಮಣಿಕರ್ಣಿಕಾ ಟ್ರೈಲರ್ನಿಂದಲೇ ಭರವಸೆ ಮೂಡಿಸಿದೆ. ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಸಾಕಷ್ಟು ವಿವಾದಗಳನ್ನು ಸುತ್ತಿಕೊಂಡಿರುವ ಚಿತ್ರದಲ್ಲಿ ಕಂಗನಾ ರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿಡುಗಡೆ ಸಂಭ್ರಮ ಒಂದುಕಡೆಯಾದರೇ, ಚಿತ್ರಕ್ಕೆ ಪ್ರತಿಭಟನೆ ಎದುರಾಗುವ ಸಾಧ್ಯತೆ ಕೂಡ ಇದೆ.
ಚಿತ್ರದಲ್ಲಿ ರಜಪೂತ ರಾಣಿ ಲಕ್ಷ್ಮೀಬಾಯಿ ಪಾತ್ರದ ಕೆಲವು ದೃಶ್ಯಗಳನ್ನ ರಜಪೂತರ ನಂಬಿಕೆಗಳಿಗೆ ಹಾಗೂ ಭಾವನೆಗಳಿಗೆ ಧಕ್ಕೆಯಾಗುವಂತೆ ಚಿತ್ರಿಸಲಾಗಿದೆ ಅಂತಾ ಕರ್ಣಿಸೇನಾ ಆರೋಪಿಸಿದೆ. ಸಿನಿಮಾ ರಿಲೀಸ್ ಆದರೆ ನಾವು ಪ್ರತಿಭಟಿಸುತ್ತೇವೆ ಎಂಬ ಎಚ್ಚರಿಕೆಯನ್ನು ಕೂಡ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಲಕ್ಷ್ಮಿಬಾಯಿ ಪಾತದಲ್ಲಿ ಮಾಡುತ್ತಿರುವ ಕಂಗನಾ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಬಗ್ಗೆ ಅವಹೇಳನಕಾರಿ ಪೋಸ್ಟ್’ಗಳನ್ನು ಕೂಡ ಹಾಕಲಾಗಿತ್ತು. ಆ ಪಾತ್ರದಿಂದ ಹೊರ ಬರುವಂತೆ ವಾರ್ನ್ ಮಾಡಿದ್ದರು. ರಜಪೂತ ಹೆಣ್ಣು ಮಕ್ಕಳ ಭಾವನೆಗಳ ಜೊತೆ ಆಟವಾಡಬೇಡಿ ಎಂದು ಕರ್ಣಿಕಾ ಸೇನೆ ಎಚ್ಚರಿಕೆ ನೀಡಿದ್ದರು. ಈ ಹಿಂದೆಯೂ ಬಾಲಿವುಡ್’ ಬ್ಯೂಟಿ ದೀಪಿಕಾ ಪಡುಕೋಣೆ ಪದ್ಮಾವತ್ ಸಿನಿಮಾದಲ್ಲಿನ ವಿವಾದಕ್ಕೂ ಸಹ ಪಡುಕೋಣೆ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರೆ ಒದಗಿಸಲಾಗಿತ್ತು.
Comments