ಬಾಲಿವುಡ್ ಈ ಬೆಡಗಿಗೆ ವರ್ಲ್ಡ್ ಕಪ್ ಆಡೋ ಆಸೆಯಂತೆ…! ಯಾರೀ ಹುಡುಗಿ ಅಂತೀರಾ..!!!
ಒಂದಲ್ಲ ಒಂದು ವಿಷಯಕ್ಕಾಗಿ ನಟ ನಟಿಯರು ಸೋಷಿಯಲ್ ಮಿಡೀಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರ್ತಾರೆ..ಇದೀಗ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಕೂಡ ಸುದ್ದಿಯಲ್ಲಿದ್ದಾರೆ… ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಇದೀಗ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಚಿತ್ರಿಕರಣದಲ್ಲಿ ಬ್ಯುಸಿಯಿದ್ದಾರೆ. ಬಿಡುವಿನ ಸಮಯದಲ್ಲಿ ಕತ್ರಿನಾ ಕೈಫ್ ಕ್ರಿಕೆಟ್ ಆಡ್ತಿದ್ದಾರೆ. ಕಪ್ಪು ಟೀ ಶರ್ಟ್ ನಲ್ಲಿ ಬ್ಯಾಟ್ ಹಿಡಿದು ನಿಂತಿರುವ ಕತ್ರಿನಾಗೆ ಭಾರತ್ ತಂಡದ ಸದಸ್ಯರು ಪ್ರೋತ್ಸಾಹ ನೀಡ್ತಿದ್ದಾರೆ.
ಸದ್ಯ ಭಾರತ್ ಸಿನಿಮಾ ಸೆಟ್ ನಲ್ಲಿ ಪ್ಯಾಕ್ ಅಪ್ ಆದ್ಮೇಲೆ ಕತ್ರಿನಾ ಕ್ರಿಕೆಟ್ ಆಡಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಿಕ್ಕಪಟ್ಟೆ ಸದ್ದು ಮಾಡ್ತಿದೆ. ಇನ್ಸ್ಟ್ರಾಗ್ರಾಮ್ ಗೆ ಕತ್ರಿನಾ ವಿಡಿಯೋವನ್ನು ಅಪ್ಲೋಡ್ ಮಾಡಿ, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ರಣವೀರ್ ಸಿಂಗ್ ಗೆ ಮೆಸ್ಸೇಜ್ ನೀಡಿದ್ದಾರೆ. "ಪ್ಯಾಕ್ ಅಪ್ ನಂತರ ಭಾರತ್ ಸೆಟ್, ವಿಶ್ವಕಪ್ ಹತ್ತಿರ ಬರುತ್ತಿದೆ. ಅನುಷ್ಕಾ ಶರ್ಮಾ, ನೀವು ಟೀಂ ನಾಯಕಗೆ ನನ್ನ ಹೆಸರು ಶಿಫಾರಸ್ಸು ಮಾಡಿ. ನನ್ನ ಸ್ವಿಂಗ್ನಲ್ಲಿ ಸ್ವಲ್ಪ ಸುಧಾರಣೆ ಕಂಡುಬರಬಹುದು, ಆದರೆ ನಾನು ಕೆಟ್ಟ ಆಲ್ರೌಂಡರ್ ಅಲ್ಲ. " ಎಂದು ಕತ್ರಿನಾ ಮೆಸ್ಸೇಜ್ ಮಾಡಿದ್ದಾರಂತೆ… ಒಟ್ಟಾರೆ ಕತ್ರಿನಾ ಕೂಡ ಕ್ರಿಕೆಟ್ ಆಡಿ ನಾನು ಯಾರಿಗಿಂತಲೂ ಕಡಿಮೆ ಇಲ್ಲ ಅನ್ನೋದನ್ನ ಸಾಭೀತು ಪಡಿಸಿದ್ದಾರೆ.
Comments