ಬಹುಭಾಷಾ ನಟಿ ಲಕ್ಷ್ಮಿ ರೈ ಬೆಂಗಳೂರಿನಲ್ಲಿ ದಿಢೀರ್ ಪ್ರತ್ಯಕ್ಷ...!
ಅಂದಹಾಗೇ ನಟಿ ಲಕ್ಷ್ಮಿ ತಾನು ಬಿಕಿನಿ ತೊಟ್ಟ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದರ ಮೂಲಕ ಫ್ಯಾನ್ಸ್, ಫಾಲೋಯರ್ಸ್ ಗೆ ರಸದೌತಣ ಬಡಿಸ್ತಾ ಇದ್ದವರು ಇದ್ದಕ್ಕಿದ್ದ ಹಾಗೇ ಬೆಂಗಳೂರಿನತ್ತ ಬಂದಿದ್ದಾರೆ.ಇಂದು ಮುಂಜಾನೆಯೇ ಲಕ್ಷ್ಮಿ ಗಾರ್ಡನ್ ಸಿಟಿಯಲ್ಲಿ ಕಾಣಿಸಿಕೊಂಡಿದ್ದಾರೆ.ಇವರನ್ನು ನೋಡಿ ಅಭಿಮಾನಿಗಳು ದಂಗಾದ್ರಂತೆ. ನಟಿ ಲಕ್ಷ್ಮಿ ರೈ ನೆನಪಿರ ಬೇಕಲ್ಲವೇ. ಸ್ನೇಹನಾ ಪ್ರೀತಿನಾ ಸಿನಿಮಾ ನಾಯಕಿ. ಕನ್ನಡದ ಲಕ್ಷ್ಮಿ ಸದ್ಯ ಈಗ ಬಹುಭಾಷಾ ನಟಿ. ನಾಲ್ಕೈದು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಲಕ್ಷ್ಮಿ, ಬಾಲಿವುಡ್ ಗೆ ಹಾರಿದಳು. ಸದ್ಯ ಪಂಚಭಾಷೆ ತಾರೆಯಾಗಿ ನಟಿಸುತ್ತಿದ್ದಾರೆ.'ಝಾನ್ಸಿ' ರೂಪದಲ್ಲಿ ಮತ್ತೆ ಕನ್ನಡದತ್ತ ಬಂದಿರುವ ಲಕ್ಷ್ಮಿ, ಆ್ಯಕ್ಷನ್ ರೋಲ್ ನಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಸದಾ ಸೋಶಿಯಲ್ ಮಿಡಿಯಾ ಫಾಲೋ ಮಾಡುವ ಲಕ್ಷ್ಮಿ ರೈ ಗೆ ಫಾಲೋಯರ್ಸ್ ಸಂಖ್ಯೆಯೇನು ಕಡಿಮೆ ಇಲ್ಲ ಬಿಡಿ.
ಈ ಬಾರಿ ಝಾನ್ಸಿಯಲ್ಲಿ ಲವ್ ಟ್ರೀಟ್ಮೆಂಟ್ ಕೊಡೋದನ್ನು ಬಿಟ್ಟು ಕತ್ತಿ ಹಿಡಿಯದೇ ವಿರೋಧಿಗಳಿಗೆ ಬಿಸಿ ಮುಟ್ಟಿಸ್ತಾ ಇದ್ದಾರೆ. ಇದರ ಮಧ್ಯೆ ಲಕ್ಷ್ಮಿಯ ಕೆಲ ಹಾಟ್ ಬಿಕಿನಿ ಫೋಟೋಗಳು ವೈರಲ್ ಆಗಿದ್ದವು. ಆದರೆ ಲಕ್ಷ್ಮಿ, ತಮ್ಮ ಕನ್ನಡದ ಆ್ಯಕ್ಷನ್ ಸಿನಿಮಾ ಝಾನ್ಸಿಯ ಲಾಸ್ಟ್ ಶೆಡ್ಯೂಲ್‌ನಲ್ಲಿ ಭಾಗವಹಿಸುವುದಕ್ಕೆ ಬೆಂಗಳೂರಿಗೆ ಬಂದಿದ್ದಾರೆ.ಈ ಸಿನಿಮಾ ಬಗ್ಗೆ ಸಖತ್ ಎಗ್ಸೈಟ್ ಆಗಿರೋ ನಟಿ ಆದಷ್ಟು ಬೇಗ ನಿಮ್ಮ ಮುಂದೆ ಬರ್ತೀನಿ ಅಂತ ಟ್ವೀಟ್ ಮಾಡಿದ್ದಾರೆ. ಅಂದಹಾಗೇ ಈ ಸಿನಿಮಾ ನನಗೆ ಬ್ರೇಕ್ ಕೊಡಬಹುದೇನೋ ಎಂಬ ನಿರೀಕ್ಷೆ ಇದೆ. 'ಝಾನ್ಸಿ' ನಾಯಕಿ ಓರಿಯೆಂಟೆಡ್ ಸಿನಿಮಾವಾಗಿದ್ದು, ತನಗಾದ ಅನ್ಯಾಯದ ವಿರುದ್ಧ ಸಿಡಿದೇಳುವ ಕಥೆಯನ್ನು ಒಳ ಗೊಂಡಿದೆ. ಅದಕ್ಕೆ ನಾನು ಪಾತ್ರ ಮಾಡಲು ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ. ಈ ಸಿನಿಮಾಗಾಗಿ ನಾನು ಮಾರ್ಷಲ್ ಕೂಡ ಕಲಿತ್ತಿದ್ದೀನಿ ಎನ್ನುತ್ತಾರೆ.ಒಟ್ಟಾರೆ ಹಾಟ್ ಬ್ಯೂಟಿ ಮಾಡುವ ಸಮರ ಕಲೆಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಗುರುಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಝಾನ್ಸಿ ಸಿನಿಮಾದಲ್ಲಿ ಲಕ್ಷ್ಮಿ ರೈ ನಾಯಕಿಯಾಗಿ ನಟಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಶೂಟಿಂಗ್ ಆರಂಭಿದ್ದ ಈ ಚಿತ್ರದ ಚಿತ್ರೀಕರಣ ಕೊನೇ ಹಂತದಲ್ಲಿದ್ದು, ಆದಷ್ಟು ಬೇಗ ರಫ್ ಅಂಡ್ ಟಫ್ ಲಕ್ಷ್ಮಿಯನ್ನ ತೆರೆಮೇಲೆ ಕಣ್ತುಂಬಿಕೊಳ್ಳಬಹುದು. ಅಂದಹಾಗೇ ಲಕ್ಷ್ಮಿ ಕನ್ನಡದಲ್ಲಿ ಮಿಂಚಿನ ಓಟ, ಕಲ್ಪನಾ-2 ವಾಲ್ಮೀಕಿ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತೆ ಕನ್ನಡಕ್ಕೆ ಬಂದಿರೋದು ಖುಷಿ ಎನ್ನುತ್ತಾರೆ ಈ ಹಾಟ್ ಬ್ಯೂಟಿ.
Comments