ಇದೆಂಥಾ ಟಾರ್ಚರ್’ಪ್ಪ..! ‘ದಿ ವಿಲನ್’ ನ ಮತ್ತೆ ನೋಡ್ಬೇಕಾ..!?

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ನೀರಿಕ್ಷೆಯನ್ನು ಹುಟ್ಟಿಸಿದ ಸಿನಿಮಾಗಳಲ್ಲಿ ದಿ ವಿಲನ್ ಕೂಡ.. ಈ ಸಿನಿಮಾ ಎಷ್ಟು ನಿರೀಕ್ಷೆಯನ್ನು ಹುಟ್ಟಿಸಿತ್ತು ಅಂದರೆ ಜನ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತ ಕಾಯುತ್ತಿದ್ದರು. ಆದರೆ ರಿಲೀಸ್ ಆದ ನಂತರ ಸಿನಿರಸಿಕರು ಅದ್ಯಾಕೋ ಆ ಸಿನಿಮಾವನ್ನು ಅಷ್ಟಾಗಿ ಒಪ್ಪಿಕೊಳ್ಳಲಿಲ್ಲ.. ಒಂದು ಕಡೆ ಸುದೀಪ್ ಅಭಿಮಾನಿಗಳು ಮತ್ತೊಂದು ಕಡೆ ಶಿವಣ್ಣಗಳಿಗೂ ಅವರಿಗವರೆ ಟಾಂಗ್ ಕೊಟ್ಟಿಕೊಳ್ಳುತ್ತಿದ್ದರು.. ಸೋಷಿಯಲ್ ಮೀಡಿಯಾದಲ್ಲೂ ಕೂಡ ಈ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಸುಳ್ಳಲ್ಲ..
ಜೋಗಿ ಪ್ರೇಮ್ ನಿರ್ದೇಶನದ 'ವಿಲನ್' ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ಮೂಡಿಬರಲಿದೆ. ಸದ್ಯದಲ್ಲೇ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ವಿಲನ್ ವೀಕ್ಷಿಸಬಹುದು ಎಂದು ಜೀ ಕನ್ನಡ ಈಗಾಗಲೇ ಪ್ರೋಮೋ ಕೊಟ್ಟಿದೆ. ಆದರೆ ಜೀ ಕನ್ನಡ ಈ ರೀತಿ ಪ್ರೋಮೋ ಕೊಟ್ಟ ಬೆನ್ನಲ್ಲೇ ಅಭಿಮಾನಿಗಳು ಜೋಗಿ ಪ್ರೇಮ್ ಮತ್ತು ವಿಲನ್ ಸಿನಿಮಾವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಪ್ರೇಮ್ ಬಿಲ್ಡಪ್ ಕೊಟ್ಟಷ್ಟು ಸಿನಿಮಾ ಚೆನ್ನಾಗಿರಲಿಲ್ಲ ಎಂದು ಪ್ರೇಕ್ಷಕರು ಅಂದೇ ಟೀಕಿಸಿದ್ದರು. ಇದೀಗ ಕಿರುತೆರೆಯಲ್ಲಿ ಮೂಡಿಬರುತ್ತಿರುವುದಕ್ಕೆ ಥಿಯೇಟರ್ ನಲ್ಲೇ ಈ ಸಿನಿಮಾ ನೋಡಕ್ಕಾಗಲಿಲ್ಲ, ಇನ್ನು, ಮನೆಯಲ್ಲೂ ನೋಡಬೇಕಾ ಎಂದು ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ. ಹೀಗಾಗಿ ಸಿನಿರಸಿಕರು ಜೋಗಿ ಪ್ರೇಮ್ ವಿರುದ್ದ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ..
Comments