ತನಗಾದ ಲೈಂಗಿಕ ಶೋಷಣೆ ಬಗ್ಗೆ ಬಾಯ್ಬಿಟ್ಟ ಬಾಲಿವುಡ್ ಕ್ವೀನ್...!!!

ಮೀಟೂ ಬಿಸಿ ಇನ್ನೂ ಆರಿಲ್ಲ. ಸಿನಿಮಾ ರಂಗದ ಕೆಲ ಸ್ಟಾರ್ ನಟಿಯರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿ ಮಾತನಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿ ನಾನು ಕೆಲ ಕಾಮುಕರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದೇನೆ ಎಂದು ಸಾರಿದ್ದಾರೆ. ಕೆಲವು ನಟಿಯರು ದೌರ್ಜನ್ಯವೆಸಗಿದವರ ಹೆಸರನ್ನು ಹೇಳುವ ಮೂಲಕ ಬಹಿರಂಗಗೊಳಿಸಿದ್ರೆ, ಇನ್ನೂ ಕೆಲವರು ಹೆಸರೇಳದೇ ಕೆಲವರಿಗೆ ಮೀಟೂ ಬಿಸಿ ಮುಟ್ಟಿಸಿದ್ದಾರೆ. ಇದಕ್ಕೆ ಸ್ಯಾಂಡಲ್’ವುಡ್ ಹೊರತೇನಲ್ಲ ಬಿಡಿ. ಸದ್ಯ ಬಾಲಿವುಡ್’ನ ಕ್ವೀನ್ ಕಂಗನಾ ರಣಾವತ್ ಮತ್ತೊಮ್ಮೆ ಮೀಟೂ ಅಡಿ ಸುದ್ದಿಯಾಗಿದ್ದಾರೆ.
ಅಂದಹಾಗೇ, ಈ ಹಿಂದೆ ಅನೇಕ ಬಾರಿ ತನಗೆ ಮೀಟೂ ಅನುಭವ ಆಗಿದೆ ಎಂಬುದನ್ನು ಹೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ ತಾನು ಅನುಭವಿಸಿದ ಲೈಂಗಿಕ ಶೋಷಣೆಯನ್ನುಪತ್ರಿಕೆಯೊಂದರ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ನಾನು ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಯುವಕನೊಬ್ಬ ತಮ್ಮ ಪೃಷ್ಠದ ಮೇಲೆ ಕೈ ಹಾಕಿದ ಘಟನೆಯನ್ನು ವಿವರಿಸಿದ್ದಾರೆ.'ನಾನು ಗುಂಪಿನ ಮಧ್ಯೆ ಇದ್ದೆ. ಆ ವ್ಯಕ್ತಿ ನೇರವಾಗಿ ನನ್ನ ಪೃಷ್ಠದ ಮೇಲೆ ಚಿವುಟಿದ. ತಕ್ಷಣ ತಿರುಗಿ ನೋಡಿದಾಗ ಆತ ಅಲ್ಲಿಯೇ ಇದ್ದ. ಅವನ ಮುಖದಲ್ಲಿ ಸ್ವಲ್ಪವೂ ಭಯ, ಸಿಕ್ಕಿಬಿದ್ದ ಭಾವನೆ ಕಾಣಲಿಲಲ್ಲ. ಇದು ಲೈಂಗಿಕ ಶೋಷಣೆಯೂ ಅಲ್ಲ, ಬದಲಾಗಿ ಆತ 'ನಾನು ಮಾಡಬಾರದ್ದನ್ನೇ ಮಾಡಿದ್ದೇನೆ' ಎಂಬ ಭಾವವಿತ್ತು. ಮತ್ತು 'ಈಗ ನೀನೇನು ಮಾಡುವೆ' ಎಂದು ಕೇಳುವಂತಿತ್ತು ಆತನ ಮುಖಭಾವ' ಎಂದು ಕಂಗನಾ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ನಾನು ಆ ಸ್ಥಿತಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಹೆಣ್ಣುಮಕ್ಕಳಿಗೆ ತಮಗೆ ಇಷ್ಟವಿಲ್ಲದನ್ನು ಮಾಡಿದ ಗಂಡಸರ ವಿರುದ್ಧ ತಿರುಗಿ ಬೀಳುವಂತೆ ಹೇಳಿ ಕೊಡಬೇಕು. ಆಗ ಖಂಡಿತಾ ಒಂದಷ್ಟು ಲೈಂಗಿಕ ಶೋಷಣೆ ಕಡಿಮೆಯಾಗಬಹುದು ಎಂದು ಹೇಳಿಕೊಂಡಿದ್ದಾರೆ.
Comments