ವ್ಯಾಲೆಂಟೈನ್ಸ್ ಡೇ ಗೆ ಅಭಿಮಾನಿಗಳಿಗೆ ಸಿಕ್ತಿದೆ ಅಭಿಷೇಕ್ ಅಂಬರೀಶ್’ನಿಂದ ಭರ್ಜರಿ ಗಿಪ್ಟ್..!

ಸ್ಯಾಂಡಲ್ ವುಡ್ ಗೆ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನ ತುಂಬಲಾರದ ನಷ್ಟವನ್ನು ಕೊಟ್ಟಿದೆ… ಅದೇ ರೀತಿ ಅವರ ಕುಟುಂಬಕ್ಕೂ ಕೂಡ ತುಂಬಲಾರದ ನಷ್ಟವನ್ನು ಕೊಟ್ಟು ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ.. ಆದರೆ ತಂದೆಯ ಅಗಲಿಕೆಯ ನಡುವೆಯೂ, ಎಲ್ಲವನ್ನೂ ಅದುಮಿಟ್ಟುಕೊಂಡು ಕೆಲವೇ ದಿನಗಳಲ್ಲಿ ವಾಪಸ್ ಶೂಟಿಂಗ್ ಗೆ ಹಾಜರ್ ಆಗಿ ಅಭಿಷೇಕ್ ತಮ್ಮ ವೃತ್ತಿಪರತೆ ಮೆರೆದಿದ್ದರು. ಇದೀಗ ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಚಿತ್ರ 'ಅಮರ್' ಚಿತ್ರೀಕರಣದ ಕೊನೆಯ ಹಂತ ತಲುಪಿದೆ.
ಸಿಂಗಾಪುರದಲ್ಲಿ ಶೂಟಿಂಗ್ ಬಾಕಿ ಇದೆ.. ಅದೊಂದು ಮುಗಿದರೆ, 'ಅಮರ್' ಚಿತ್ರ ನೇರವಾಗಿ ಎಡಿಟಿಂಗ್ ಸೆಕ್ಷನ್ ಗೆ ಹೋಗಲಿದೆ ಎನ್ನುವ ಸಂಭ್ರಮದಲ್ಲಿದೆ ಚಿತ್ರತಂಡ. ಫೆಬ್ರವರಿ 14.. ಪ್ರೇಮಿಗಳ ದಿನಕ್ಕೆ ಸಿನಿ ರಸಿಕರಿಗೆ ಒಂದು ದೊಡ್ಡ ಗಿಫ್ಟ್ ಕೊಡಲು ಅಭಿಷೇಕ್ ಮತ್ತು 'ಅಮರ್' ಚಿತ್ರತಂಡ ಸಖತ್ ಆಗಿಯೇ ಪ್ಲಾನ್ ಮಾಡಿದೆ. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕರಾಗಿ ನಟಿಸುತ್ತಿರುವ 'ಅಮರ್' ಚಿತ್ರದ ಮೊದಲ ಟೀಸರ್ ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗಲಿದೆ. ಸಂದೇಶ್ ಕಂಬೈನ್ಸ್ ಮೂಲಕ ಸಂದೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಅಂಬರೀಶ್ ಅಭಿನಯಿಸಿದ ಸಾಕಷ್ಟು ಚಿತ್ರಗಳನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಅಭಿ ಭರವಸೆಯ ನಾಯಕನಾಗಿ ಉಳಿದುಕೊಳ್ಳುತ್ತಾರೋ ಅಥವಾ ಇಲ್ಲವೊ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
Comments