ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಕೈ ಮುರಿದ ಸ್ಟಾರ್ ಸೆಲೆಬ್ರಿಟಿ…!!!

ತಮ್ಮ ನೆಚ್ಚಿನ ಸ್ಟಾರ್ ನಟರ ಜೊತೆ ಫೋಟೋ ತೆಗೆದುಕೊಳ್ಳಬೇಕೆಂಬ ಬಹುದೊಡ್ಡ ಆಸೆ ಕಟ್ಟಿಕೊಂಡ ಬಂದ ಅಭಿಮಾನಿಯ ಕೈ ಮುರಿದಿದ್ದಾರೆ ಇಲ್ಲೊಬ್ಬ ಸ್ಟಾರ್ ಸೆಲೆಬ್ರಿಟಿ. ಇದೀಗ ಈ ಸುದ್ದಿ ವೈರಲ್ ಆಗಿದ್ದು ಸಾರ್ವಜನಿಕವಾಗಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಅಂದಹಾಗೇ ನಡೆದಿದ್ದಾದ್ರು ಏನು…? ಆ ಸ್ಟಾರ್ ಸೆಲೆಬ್ರಿಟಿ ಯಾರು…? ಇದು ನಿಜನಾ....ಖ್ಯಾತ ಗಾಯಕ ಸೋನು ನಿಗಂ ,ತಾವು ನಡೆಸಿಕೊಡುವ ಹಾಡಿನ ಒಂದು ಕಾರ್ಯಕ್ರಮದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಕೈ ಮುರಿದಿದ್ದಾರೆ ಎಂಬುದು ಸುದ್ದಿಯಾಗಿದೆ .
ಈ ಸುದ್ದಿ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ವಿಷಯ ಏನಪ್ಪಾ ಅಂದ್ರೆ ಸೋನು ನಿಗಂ ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ಮಧ್ಯೆದಲ್ಲಿಯೇ ಆ ವ್ಯಕ್ತಿ ಅವರ ಹೆಗಲ ಮೇಲೆ ಕೈ ಹಾಕಿ, ಫೋಟೋಗೆ ಪೋಸು ಕೊಡಲು ಸೂಚಿಸಿದ್ದರಂತೆ. ಆದರೆ ಸೋನು ನಿಗಂ ಗೆ ಕೋಪ ಬಂದಿದೆ. ತಕ್ಷಣ ಆ ಅಭಿಮಾನಿಯ ಕೈ ಎತ್ತು ಬಿಸಾಡಿದ್ದಾರೆ.ಸೋನು ನಿಗಂ ಈ ವರ್ತನೆ ನೋಡಿ ಅಭಿಮಾನಿ ದಂಗಾದ್ರಂತೆ. ಮರು ಕ್ಷಣವೇ ಸೋನು ತಾವೇ ಅಭಿಮಾನಿಯ ಹೆಗಲ ಮೇಲೆ ಕೈ ಹಾಕಿ ಪೋಸು ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ಕೆಲವರು ಸೋನು ನಿಗಂ, ಅಭಿಮಾನಿಯ ಕೈ ಮುರಿದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕೆಲ ಸ್ಟಾರ್ ಗಳಿಗೆ ಒಮ್ಮೊಮ್ಮೆ ಸೆಲ್ಫಿ, ಫೋಟೋ ಮುಜುಗರಕ್ಕೀಡು ಮಾಡುವಂತೆ ಮಾಡಿಬಿಡುತ್ತವೆ. ಅಷ್ಟೇ ಅಲ್ಲಾ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತವೆ. ಆದರೆ ಅಭಿಮಾನಿಗಳು ಸಹ ಅವರ ಪರಿಸ್ಥಿಯನ್ನು ಅರ್ಥ ಮಾಡಿಕೊಳ್ಳಬೇಕು ಅಲ್ಲವೇ… ಕನ್ನಡದಲ್ಲೂ ನಟ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ಗಳಿಗೂ ಈ ಸೆಲ್ಫಿ ಅಭಿಮಾನಿಗಳಿಂದ ಭಾರೀ ಮುಜುಗರವಾಗಿದ್ದ ಘಟನೆ ಸುದ್ದಿಯಾಗಿತ್ತು.
Comments