ನಟಿ ಪ್ರಿಯಮಣಿ ಅವರ ಅಕ್ಕ ಬಾಲಿವುಡ್’ನ ಟಾಪ್ ನಟಿ…! ಯಾರು ಗೊತ್ತಾ..,?

22 Jan 2019 10:50 AM | Entertainment
3858 Report

ಕನ್ನಡ ಸಿನಿಮಾದಲ್ಲಿ ಪಡ್ಡೆ ಹುಡುಗರ ಮನಸ್ಸನ್ನು ಗೆದ್ದ ನಟಿ ಮಣಿಯರಲ್ಲಿ  ಪ್ರಿಯಾ ಮಣಿ ಕೂಡ ಒಬ್ಬಳು… ಈಗಾಗಲೇ ಕನ್ನಡ ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿರುವ ಈಕೆ ಕನ್ನಡ ಸಿನಿಮಾಗಳಲ್ಲಿ ಮಿಂಚಿ ಬೇರೆ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡ ಈ ನಟಿಗೆ ಚಾರುಲತಾ ಸಿನಿಮಾದ ನಟನೆಗಾಗಿ 2012 ರಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಿಕ್ಕಿತ್ತು… ಇತ್ತೀಚೆಗೆ ಮದುವೆಯಾದ ಈ ನಟಿ ಕೆಲವು ರಿಯಾಲಿಟಿ ಶೋಗಳ ಜಡ್ಜ್​ ಆಗಿಯೂ ಕೂಡ ಕೆಲಸವನ್ನು ಮಾಡುತ್ತಿದ್ದಾರೆ.

ಪ್ರಿಯಾಮಣಿ ಅವರ ಫ್ಯಾಮಿಲಿಯ ಬಗ್ಗೆ ಅಷ್ಟಾಗಿ ಯಾರಿಗೂ ಕೂಡ ಗೊತ್ತಿಲ್ಲ. ನಟಿ ಪ್ರಿಯಾ ಮಣಿ ಅವರ ಅಕ್ಕ ಬಾಲಿವುಡ್​ನ ಫೇಮಸ್​ ನಟಿ ಹಾಗೂ ಮತ್ತು ಅವರ ಅತ್ತೆ ಕೂಡ ಒಬ್ಬ ಸ್ಟಾರ್​ ಸಿಂಗರ್​ ಎನ್ನುವುದು ಹಲವರಿಗೆ ಗೊತ್ತಿರುವುದಿಲ್ಲ… ಬಾಲಿವುಡ್​ನ ಮಾಧಕ ತಾರೆ ವಿದ್ಯಾ ಬಾಲನ್​ ಅವರು ನಟಿ ಪ್ರಿಯಾಮಣಿ ಅವರ ಅಕ್ಕ, ಅಂದರೆ ಪ್ರಿಯಾಮಣಿ ಅವರ ಅಕ್ಕನ ಮಗಳು. ಆದರೂ ಕೂಡ ಈ ನಟಿಯರು ಒಟ್ಟಿಗೆ ಇರುವ ಫೋಟೋಗಳು ಕೂಡ  ತುಂಬಾ ಕಡಿಮೆ ಹಾಗಾಗಿ ಈ ವಿಷಯ ಅಷ್ಟಾಗಿ ಯಾರಿಗೂ  ಗೊತ್ತಿರಲಿಲ್ಲ. ಸ್ಟಾರ್​ ಸಿಂಗರ್​ ಮಾಲ್ಗುಡಿ ಶುಭ ನಟಿ ಪ್ರಿಯಾಮಣಿ ಅವರ ಅತ್ತೆ. ವಿದ್ಯಾಬಾಲನ್​ ಮತ್ತು ಪ್ರಿಯಾಮಣಿ ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ಈ ಮಾಲ್ಗುಡಿ ಶುಭ ಅವರೇ ಕಾರಣ ಎನ್ನುವ ಮಾತು ಕೂಡ ಇದೆ. ಒಟ್ಟಾರೆ ನಮ್ಮ ಕನ್ನಡದ ಈ ಚೆಲುವೆ ಪರಭಾಷೆಯಲ್ಲಿ ಮಿಂಚುತ್ತಿರುವುದು ಖುಷಿಯ ವಿಚಾರವೇ ಸರಿ..

Edited By

Manjula M

Reported By

Manjula M

Comments