ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದ ಕಿಚ್ಚ ಸುದೀಪ!




ನಡೆದಾಡುವ ದೇವರು ಲಿಂಗೈಕ್ಯರಾಗಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿಗಳು ಅನಾರೋಗ್ಯದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ಜಾತಿ ಧರ್ಮ ಎನ್ನದೇ ಎಲ್ಲಾ ಸಮುದಾಯದವರಿಗೂ ತ್ರಿವಿಧ ದಾಸೋಹ ನೀಡುತ್ತಿದ್ದ ಶ್ರೀಗಳನ್ನು ಈ ಲೋಕದ ದೇವರೆಂದೇ ಪೂಜಿಸಲಾಗುತ್ತಿತ್ತು. ಶ್ರೀ ಶಿವಕುಮಾರ ಸ್ವಾಮಿಜಿಗಳ ನಿಧನಕ್ಕೆ ಇಡೀ ಸ್ಯಾಂಡಲ್’ವುಡ್ ಕಂಬನಿ ಮಿಡಿದಿದೆ.
ನಿನ್ನೆಯೇ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದಾಗ ನಟ ಕಿಚ್ಚ ಸುದೀಪ್ ಟ್ವೀಟ್ ಮೂಲಕ ನಡೆದಾಡುವ ದೇವರು ನಿಜವಾದ ಭಾರತ ರತ್ನ ಎಂದು ಕೊಂಡಾಡಿದ್ದರು. ಇಂದು ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೆ, ಶ್ರೀಗಳ ವಿವಿಧ ಫೋಟೋ ಕಟಿಂಗ್ಸ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ನಮಿಸಿದ್ದಾರೆ. ದರ್ಶನ್, ನಿನಾಸಂ ಸತೀಶ್, ನಟ ಜಗ್ಗೇಶ್ ಸೇರಿದಂತೇ ಸಿನಿಮಾ ರಂಗದ ಅನೇಕ ಗಣ್ಯರು, ಕಲಾವಿದರು ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
Comments