ಉಂಡ ಮನೆಗೆ ದ್ರೋಹ ಬಗೆದ ಸ್ಯಾಂಡಲ್'ವುಡ್ ಪದ್ಮಾವತಿ...!!!
ಅಂದಹಾಗೇ ಮಂಡ್ಯದ ಹುಡುಗಿ ರಮ್ಯಾ ಮೇಲೆ ಮತ್ತೆ ಕನ್ನಡಿಗರು ಕಣ್ಣು ಕೆಂಪು ಮಾಡಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ಇವರು ತಮಿಳು ನಟ ಧನುಷ್ ಅವರ ಹಾಡಿಗೆ ಅಭಿಮಾನ ಮೆರೆದು ಕನ್ನಡದ ಸ್ಟಾರ್’ಗಳನ್ನು ಅವಮಾನ ಮಾಡಿದ್ದಾರೆಂದು ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಇತ್ತೀಚೆಗೆ ನಟ ಧನುಷ್ ಮತ್ತು ನಟಿ ಸಾಯಿ ಪಲ್ಲವಿ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಮಾರಿ -2 ಸಿನಿಮಾದ ಹಾಡು ರೌಡಿ ಬೇಬಿ ಸಿಕ್ಕಾಪಟ್ಟೆ ಕಿಕ್ ಏರಿಸಿದೆ. ಸಾಂಗು ಇತ್ತೀಚಿಗಷ್ಟೇ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಮಿಲಿಯನ್ ವೀವ್ಸ್ ದಾಟಿದೆ.
ಇದನ್ನು ನೋಡಿದ ರಮ್ಯಾ ”ಎಂತಹ ಹಾಡು ಡಿ!, ಹಾಡು 100 ಮಿಲಿಯನ್ ಆಗಿದೆ. ಯುವನ್ ಶಂಕರ್ ರಾಜ್ ನಿಮ್ಮ ಬಗ್ಗೆ ಬಹಳ ಖುಷಿ ಆಗುತ್ತಿದೆ.” ಎಂದು ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ. ಈ ಟ್ವೀಟ್ ನೋಡಿದ ಕನ್ನಡಿಗರು ರಮ್ಯಾ ವಿರುದ್ಧ ಮಾತನಾಡಿದ್ದಾರೆ.ಇನ್ನು ಕನ್ನಡದ ಸ್ಟಾರ್ ಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ ಅದೆಲ್ಲಾ ನಮ್ಮ ರಮ್ಯಾ ಮೇಡಂ ಮರೆತಿದ್ದಾರೆ ಅನಿಸುತ್ತೆ. ಆದರೆ ಅದನ್ನೆಲ್ಲಾ ಬಿಟ್ಟು ರಮ್ಯಾ ಪರಭಾಷಿಗರನ್ನು ಹಾಡಿ ಹೊಗಳಿದ್ದು ನೋಡಿ ಕನ್ನಡಿಗರು ಕಣ್ಣು ಕೆಂಪು ಮಾಡಿದ್ದಾರೆ. ಯಜಮಾನ ಸಿನಿಮಾದ ಸಾಂಗ್’ಗಳು, ಪೈಲ್ವಾನ್ ಚಿತ್ರ ಟೀಸರ್ ಕೂಡ ಅತೀ ಹೆಚ್ಚು ವೀವ್ಸ್ ಆಗಿದೆ. ಕೆಜಿಎಫ್ ದೇಶದ ಗಡಿ ಆಚೆಗೂ ಸದ್ದು ಮಾಡುತ್ತಿದೆ. ದರ್ಶನ್, ಸುದೀಪ್, ಯಶ್'ರನ್ನ ಮರೆತ ರಮ್ಯಾ ತಮಿಳಿನ ಧನುಷ್ ಅವರ ಬಗ್ಗೆ ಮಾತನಾಡಿದ್ದಾರೆ. ಅಂಬಿಯಣ್ಣನ ಸಾವಿಗೆ ಬಾರದೇ ದೊಂಬರಾಟ ಆಡಿದ್ದಾರೆ. ಇದು ಯಾವ ಪ್ರೀತಿ, ಪರಬಾಷಿಗರನ್ನು ಹಾಡಿ ಹೊಗಳೋದು. ಪರ ಭಾಷೆ ಚಿತ್ರಗಳಿಗೆ ರೆಡ್ ಕಾರ್ಪೆಟ್ ಹಾಕಿ ಟ್ವೀಟ್ ಮಾಡೋದು ನೋಡಿದ್ದರೆ ಮನುಷ್ಯ ಅಂತ ಕರೆಸಿ ಕೊಳ್ಳಬೇಕು ಅಂದರೆ ಸ್ವಲ್ಪ ಆದರೂ ನಿಯತ್ತು ಇರಬೇಕು ಅಲ್ವ, ಬಿಡುವು ಇದ್ದಾಗ ಅಂಬಿ ನಿನಗೆ ವಯಸ್ಸಾಯ್ತೋ ನೋಡಿ” ಎಂದು ಕನ್ನಡಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಅದೇ ಕನ್ನಡ ಸಿನಿಮಾ ಮಾಡಿಕೊಂಡ ರಮ್ಯಾ ಹೊಟ್ಟೆ ತುಂಬಿಸಿಕೊಂಡಿದ್ದರು. ನೇಮು-ಫೇಮು ತಂದುಕೊಟ್ಟ ಸಿನಿಮಾ ರಂಗವನ್ನೇ, ಬೆಳಸಿದ ಅಭಿಮಾನಿಗಳನ್ನು ಮರೆತಿದ್ದಾರೆ, ಉಂಡ ಮನೆಗೆ ದ್ರೋಹ ಬಗೆದಿದ್ದಾರೆಂದು ಟ್ವಿಟ್ಟರ್ ನಲ್ಲಿ ಕೆಲವರು ರಮ್ಯಾಗೆ ಖಾರವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
Comments