ಬಾಹುಬಲಿ ಸಿನಿಮಾದಲ್ಲಿ ಸ್ಥಾನಗಿಟ್ಟಿಸಿಕೊಂಡ ಬಿಗ್'ಬಾಸ್ ಸ್ಪರ್ಧಿ...!!!

21 Jan 2019 1:29 PM | Entertainment
1930 Report

ಬಿಗ್’ಬಾಸ್ ಸೀಸನ್ 5 ನ ಸ್ಪರ್ಧಿ ಶೃತಿ ನೆನಪಿರ ಬೇಕಲ್ಲವೇ….ಅಂದಹಾಗೇ ಬಿಗ್'ಬಾಸ್ ಮನೆಯಲ್ಲಿ ಜೆಕೆ  ಜೊತೆ ಇದ್ದರಲ್ಲಾ ಆ ಶೃತಿ ಅಂದ್ರೆ ಥಟ್ಟನೆ ನೆನಪಾಗಬಹುದು. ಅಂದಹಾಗೇ ಒಂದಷ್ಟು ದಿನ ಶೃತಿ ಕೆಲ ಫೋಟೋಶೂಟ್ ಗಳಲ್ಲಿ ಸುದ್ದಿಯಾಗಿದ್ದರು. ಶೃತಿ ಪ್ರಕಾಶ್ ಸ್ಯಾಂಡಲ್’ವುಡ್’ಗೆ ಎಂಟ್ರಿ ಕೊಟ್ಟಿದ್ದು ಹಳೆಯ ವಿಚಾರ.  ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. 'ಲಂಡನ್‌ನಲ್ಲಿ ಲಂಬೋದರ' ಚಿತ್ರದೊಂದಿಗೆ ನಟಿ ಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಶ್ರುತಿ ಪ್ರಕಾಶ್ ಈಗಾಗಲೇ ಮತ್ತೆರೆಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಮಂಜು ಮಾಂಡವ್ಯ ನಿರ್ದೇಶನ ಹಾಗೂ ಅಭಿನಯದ 'ಶ್ರೀಭರತ್ ಬಾಹುಬಲಿ' ಚಿತ್ರದಲ್ಲಿನ ಸ್ಪೆಷಲ್ ಸಾಂಗ್‌ವೊಂದಕ್ಕೆ ಸೊಂಟ ಬಳುಕಿಸಲು ರೆಡಿ ಆಗಿದ್ದಾರೆ.

ನಾನು ನಟಿಯಾಗಿ ಜನಮೆಚ್ಚುವ ಪಾತ್ರಗಳಲ್ಲಿ ಗುರುತಿಸಿಕೊಳ್ಳಬೇಕೆನ್ನುವುದು ನನ್ನ ಆಸೆ ಅಷ್ಟೆ. ಅದೂ ಯಾವ ಪಾತ್ರವಾಗಿರಲೀ ಜನ ಮೆಚ್ಚುವಂತದ್ದು ಆಗಿರಬೇಕು. ಅದೇನು ನಾಯಕಿ ಪ್ರಧಾನ ಪಾತ್ರವೇ ಅಗಿರಬೇಕೇಂದಿಲ್ಲ.ಒಂದೊಳ್ಳೆ ಚಿತ್ರಕಥೆಯಾಗಿರಬೇಕಷ್ಟೆ. ಅಷ್ಟು  ಸೊಗಸಾದ ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೂ ಕೂಡ ಅದರದ್ದೇ ಆದ ಮಹತ್ವ ಇರುತ್ತದೆ. ಹಾಗಾಗಿಯೇ ಈ ಅವಕಾಶ ಒಪ್ಪಿಕೊಂಡೆ  ಎನ್ನುತ್ತಾರೆ ಶ್ರುತಿ ಪ್ರಕಾಶ್. ಅಂದಹಾಗೇ ಶೃತಿ ಪ್ರಕಾಶ್ ಸದ್ಯ ಈ ಹಾಡಿನಲ್ಲಿ  ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೇ ಈ ಬಾರಿ ಶೃತಿ ಪ್ರಕಾಶ್ ಅಭಿಮಾನಿಗಳ ಮನ ಸೂರೆಗೊಳ್ಳಲು ಸಿಕ್ಕಾಪಟ್ಟೆ ವರ್ಕ್ ಮಾಡಿದ್ದಾರೆ. ಈಗಾಗಲೇ ಸಿಂಗರ್ ಆಗಿರುವ ಶೃತಿ ಬಿಗ್ ಬಾಸ್ ಮನೆಯಲ್ಲಿದ್ದಾಗ  ಎಲ್ಲರ ಫೇವರೀಟ್ ಆಗಿದ್ದರು. ಶ್ರೀ ಭರತ್ ಬಾಹುಬಲಿ ಹಾಡಿನ ಚಿತ್ರೀಕರಣ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಈಗಾಗಲೇ ಸೆಟ್ ನಿರ್ಮಾಣವಾಗಿದ್ದು ನಿರ್ದೇಶಕ ಮಂಜು ಮಾಂಡವ್ಯ. ಸೊಗಸಾದ ಸಾಹಿತ್ಯದ ಹಾಡಿನಲ್ಲಿ ತಾವು ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.ಈ ಚಿತ್ರದಲ್ಲಿ ಚಿಕ್ಕಣ್ಣ, ಅಚ್ಯುತ್ ಕುಮಾರ್, ಹೊಸ ಪ್ರತಿಭೆ ಶ್ರೇಯಾ ಸೇರಿದಂತೆ ಹಲವರಿದ್ದಾರೆ.

Edited By

Manjula M

Reported By

Manjula M

Comments