ಜೂನಿಯರ್ ಅಂಬರೀಶ್ ಕೇಳಿದ ಗಿಫ್ಟ್'ನ್ನು ರಾಕಿಂಗ್ ಸ್ಟಾರ್ ಕೊಟ್ಟಿಲ್ವಂತೆ...!!!

ಸ್ಯಾಂಡಲ್’ವುಡ್’ನ ರೆಬೆಲ್ ಸ್ಟಾರ್ ಅಂಬರೀಶ್ ಸದ್ಯ ನನೆಪು ಮಾತ್ರ. ಆದರೆ ಅವರ ಚಾರ್ಮ್ ಮಾತ್ರ ಇನ್ನು ಕಡಿಮೆಯಾಗಿಲ್ಲ . ಅವರ ಮಗ ಅಭಿಷೇಕ್ ಅಂಬರೀಶ್ ಮಾತನಾಡುತ್ತಾ, ಅಪ್ಪ ಇದ್ದಾಗ್ಲೂ, ಹೋದಾಗ್ಲೂ ಅದೇ ಪ್ರೀತಿ, ಗೌರವ , ಅಭಿಮಾನ ತೋರುತ್ತಾರೆ ಅಭಿಮಾನಿಗಳು. ಇದನ್ನು ನೋಡಿ ನನಗೆ ತುಂಬಾ ಖುಷಿಯಾಗುತ್ತದೆ ಎಂದು ಭಾವುಕರಾದರು. ಅವರ ಮೊದಲಚಿತ್ರ ಅಮರ್ ತೆರೆ ಮೇಲೆ ಬರಲು ಸಿದ್ಧವಾಗಿದೆ. ಅಭಿಷೇಕ್ ರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಸಂದರ್ಶನ ವೊಂದರಲ್ಲಿ ಯಶ್ ಬಗ್ಗೆ ಅಭಿಷೇಕ್ ಒಂದು ಇಂಟ್ರೆಸ್ಟಿಂಗ್ ಮಾಹಿತಿ ಹೇಳಿದ್ದಾರೆ. ಯಶ್ ಅವರಿಗೆ ಸಿನಿಮಾ ಬ್ರೇಕ್ ತಂದುಕೊಟ್ಟಿದ್ದು ಕಿರಾತಕ ಚಿತ್ರ.
ಅಂದಹಾಗೇ ಯಶ್ ಮತ್ತು ಅಭಿಷೇಕ್ ಅಂಬರೀಶ್ ತುಂಬಾ ಆತ್ಮೀಯರು ಎಂಬುದು ಎಲ್ಲರಿಗೂ ಗೊತ್ತು. ಸಿನಿಮಾ ಶೂಟಿಂಗ್ ವೇಳೆ ಆಗಾಗ್ಗ ಅಭಿಷೇಕ್ ಭೇಟಿ ಮಾಡುತ್ತಿರುತ್ತಾರೆ. ಇಬ್ಬರು ಸಮಯ ಸಿಕ್ಕಾಗಲೆಲ್ಲಾ ಭೇಟಿ ಮಾಡುತ್ತಿರುತ್ತಾರೆ. ಆದರೆ ಅಭಿ ಕೇಳಿದ ಗಿಪ್ಟ್’ನ್ನು ರಾಕಿಂಗ್ ಸ್ಟಾರ್ ಯಶ್ ಇನ್ನು ಕೊಟ್ಟಿಲ್ಲವಂತೆ. ಅಭಿಷೇಕ್ ಅವರು ಕಿರಾತಕ ಸಿನಿಮಾದಲ್ಲಿ ಯಶ್ ಹಾಕಿದ್ದ ಶರ್ಟ್ ನ್ನು ಅಪೇಕ್ಷೆ ಮಾಡುತ್ತಿದ್ದಾರೆ. ಅಂದಹಾಗೇ ಯಶ್ ಅವರು ಹಾಕಿದ್ದ ಅದೇ ಶರ್ಟ್ ಬೇಕೆಂದು ಈಗಾಗಲೇ ಇನ್ಸ್ಟ್ರಾಗ್ರಾಂ ನಲ್ಲಿ ಹಾಕಿದ್ದೆ, ಆದರೆ ಇನ್ನು ನಮ್ಮ ಯಶ್ ಫ್ರೀ ಆಗಿಲ್ಲ. ಅವರು ಈ ಶೋ ನೋಡಿದ ನಂತರವಾದ್ರು ಕೊಡಿಸಲೇ ಬೇಕು. ಅದೇ ಶರ್ಟ್ ಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲಾ ಆ ಶರ್ಟ್’ನ್ನು ಫ್ರೇಮ್ ಹಾಕಿ ಹಾಕ್ತಾರಂತೆ. ಯಶ್ ಸ್ಮಾರ್ಟ್ ಗೆ ನಾನು ಫಿದಾ ಎನ್ನುತ್ತಾರೆ ಅಭಿ. ಅಭಿಷೇಕ್ ಅವರ ಚೊಚ್ಚಲ ಸಿನಿಮಾ ಅಮರ್ ಸದ್ಯ ಶೂಟಿಂಗ್ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅಮರ್ ಚಿತ್ರ ತೆರೆಗೆ ಬರುತ್ತಿದೆ. ಇನ್ನು ನಾಗಶೇಖರ್ ಅವರ ನಿರ್ದೇಶನದಲ್ಲಿ, ಸಂದೇಶ್ ನಾಗರಾಜ್ ಅವರ ನಿರ್ಮಾಣದಲ್ಲಿ ಈ ಸಿನಿಮಾ ಬರುತ್ತಿದೆ. ಲವ್ ಅಂಡ್ ಆ್ಯಕ್ಷನ್ ಸಿನಿಮಾ ಇದು ಎನ್ನುತ್ತಾರೆ.
Comments