ಬಿಗ್'ಬಾಸ್ ಸ್ಪರ್ಧಿ ಅಯ್ಯಪ್ಪನ ಮದುವೆಯಲ್ಲಿ ಸ್ಟೆಪ್ಪು ಹಾಕಿ ನಲಿದ ಪ್ರೇಮ

ಬಿಗ್ ಬಾಸ್ ನ ಕೆಲ ಸೀಸನ್ ಗಳು ಮುಗಿದ್ರೂ ಅದರ ಜ್ವರ ಮಾತ್ರ ಕಡಿಮೆಯಾದಂತಿಲ್ಲ. ಅಂದಹಾಗೇ ಬಿಗ್’ಬಾಸ್ ಸೀಸನ್ 6 ಫೈನಲ್ ಸ್ಟೇಜ್ ತಲುಪಿದೆ. ಕೇವಲ ಒಂದು ವಾರ ಬಾಕಿ ಇದೆ ಅಷ್ಟೆ ಬಿಗ್’ಬಾಸ್ ರಿಯಾಲಿಟಿ ಶೋ ಮುಗಿಯಲು. ಈ ಹಿಂದಿನ ಬಿಗ್ ಬಾಸ್ ಸೀಸನ್ ನ ಸ್ಪರ್ಧಿ ಯಾಗಿದ್ದ ಕ್ರಿಕೆಟರ್ ಅಯ್ಯಪ್ಪ ರ ಮದುವೆ ಸಮಾರಂಭ ಭರ್ಜರಿಯಾಗಿ ನಡೆದಿದೆ.
ನಟಿ ಅನು ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ಅಯ್ಯಪ್ಪ. ನಿನ್ನೆ ಮತ್ತು ಇಂದು ಕೊಡಗಿನ ವಿರಾಜಪೇಟೆಯ ಕೊಡವ ಸಮಾಜದಲ್ಲಿ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಮದುವೆ ಸಮಾರಂಭದಲ್ಲಿ ಅಯ್ಯಪ್ಪ ಸಹೋದರಿ ನಟಿ ಪ್ರೇಮ ಸಖತ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಕೊಡವ ಸಂಪ್ರದಾಯದ ಉಡುಗೆ ತೊಟ್ಟಿದ್ದ ಪ್ರೇಮಾ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಬಿಗ್’ಬಾಸ್ ನಲ್ಲಿದ್ದ ಅಯ್ಯಪ್ಪ ಮತ್ತು ನಟಿ ಪೂಜಾಗಾಂಧಿಯ ಬಿಗ್’ಬಾಸ್ ಮನೆಯೊಳಗಿದ್ದಾಗ ದೊಡ್ಡಮಟ್ಟದ ಸುದ್ದಿಯಾಗಿದ್ದರು. ಈ ಹಿಂದೆಯೇ ಅಯ್ಯಪ್ಪ ಮತ್ತು ಸಿನಿಮಾ ರಂಗದಿಂದ ಬಂದಿರುವ ಅನು ಅವರ ನಿಶ್ಚಿತಾರ್ಥ ಸುದ್ದಿಯಾಗಿತ್ತು. ಇದೀಗ ತಮ್ಮ ಸಹೋದರನ ಮದುವೆಗೆ ಪ್ರೇಮಾ ಸ್ಟೆಪ್ಪು ಹಾಕುವುದರ ಮೂಲಕ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.ಮದುವೆ ಸಮಾರಂಭದಲ್ಲಿ ಪ್ರೇಮ ಕೇಂದ್ರಬಿಂದುವಾಗಿದ್ದಾರೆ. ಕೊಡವ ಸಂಪ್ರದಾಯದಂತೇ ಮದುವೆ ಕಾರ್ಯಗಳು ನೆರವೇರಿವೆ.
Comments