ಸ್ಯಾಂಡಲ್ ವುಡ್’ನಲ್ಲಿ ಅಪ್ಪನ ಸ್ಥಾನ ತುಂಬೋದಕ್ಕೆ ಅಭಿಷೇಕ್ ಹೇಳಿದ್ದು ಯಾರನ್ನ ಗೊತ್ತಾ..?

ಚಂದನವನದಲ್ಲಿ ಇದೀಗ ಎಲ್ಲರಲ್ಲೂ ಮೂಡುತ್ತಿರುವ ಒಂದು ಪ್ರಶ್ನೆಯೆಂದರೆ ಸ್ಯಾಂಡಲ್ ವುಡ್ ನ ಮುಂದಿನ ದಳಪತಿ ಯಾರು ಅನ್ನೊದು… ರೆಬಲ್ ಸ್ಟಾರ್ ಅಂಬರೀಶ್ ಇರುವವರೆಗೂ ಯಾವುದೇ ಗಲಾಟೆ ಆದರೂ ಅವರ ಮನೆಯಲ್ಲಿಯೇ ಇತ್ಯರ್ಥ ಆಗುತ್ತಿತ್ತು.. ಎಲ್ಲಾ ರೀತಿಯ ಸಮಸ್ಯೆಗಳನ್ನು ಕೂಡ ಬಗೆಹರಿಸುತ್ತಿದ್ದರು. ಅಂಬರೀಶ್ ಸ್ಥಾನವನ್ನ ತುಂಬ ಬಲ್ಲ ಕಲಾವಿದ ಯಾರು ಅನ್ನೋದು.. . ಅಂಬಿ ಇದ್ದಾಗ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಏನೇ ಸಮಸ್ಯೆಯಾದರೂ, ಅಭಿವೃದ್ದಿ ಕೆಲಸಗಳಾದರೂ ತಾವೇ ಮುಂದೆ ನಿಂತು ಮಾಡ್ತಿದ್ರು. ಆ ರೀತಿಯ ನಾಯಕನ ಅವಶ್ಯಕತೆ ಕನ್ನಡ ಚಿತ್ರರಂಗಕ್ಕೆ ತುಂಬಾ ಇದೆ..
ಇದೀಗ, ಈ ವಿಷ್ಯದ ಬಗ್ಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಕೂಡ ಮಾತನಾಡಿದ್ದಾರೆ. ತಂದೆಯ ಸ್ಥಾನವನ್ನ ಯಾರು ತುಂಬಬಲ್ಲರು ಎಂದು ಹೇಳಿದ್ದಾರೆ. ಮುಂದೆ ಅಂಬರೀಶ್ ಅವರ ನಂತರ ಆ ಸ್ಥಾನದಲ್ಲಿ ಯಾರು ಕೂರಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿ, ''ಇಂಡಸ್ಟ್ರಿಗೆ ಯಾರಾದರೂ ಒಬ್ಬರು ನಾಯಕರು ಇರಬೇಕು. ಇದು ಚಿತ್ರರಂಗದ ಬೆಳವಣಿಗೆ ಸಹಾಯವಾಗಲಿದೆ. ಇದು ಆಗಲೇಬೇಕು. ಬಟ್, ಯಾರಾಗಬಹುದು ಅಂತ ಗೊತ್ತಿಲ್ಲ'' ಎಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಭಿಪ್ರಾಯ ಪಟ್ಟಿದ್ದಾರೆ.
Comments