ಸಂಕ್ರಾಂತಿಗೆ ಟೀಸರ್ ಬಿಡುಗಡೆ, ಯುಗಾದಿಗೆ ಪಿಕ್ಚರ್ ಬಿಡುಗಡೆ..!! ಪೈಲ್ವಾನ್ ಚಿತ್ರತಂಡ ಹೇಳಿದ್ದೇನು..?

ಸ್ಯಾಂಡಲ್ ವುಡ್ ಒಳ್ಳೊಳ್ಳೆ ಸಿನಿಮಾಗಳಿಗೆ ಸಾಕ್ಷಿಯಾಗಲಿದೆ… ಇತ್ತಿಚಿಗಷ್ಟೆ ಕೆಜಿಎಫ್ ಸಿನಿಮಾ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.. ಇದರ ನಡುವೆ ತೆರೆ ಕಾಣಲಿರುವ ಸಿನಿಮಾಗಳ ಟ್ರೈಲರ್, ಟೀಸರ್ ಹಾಡುಗಳು ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಟೀಸರ್ ಮೊನ್ನೆಯಷ್ಟೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೆಟ್ ಮಾಡಿ ಧೂಳೆಬ್ಬಿಸಿದ 'ಪೈಲ್ವಾನ್' ಟೀಸರ್ ಪರಭಾಷೆಯವರು ಕೂಡ ಮತ್ತೊಮ್ಮೆ ಇತ್ತ ಮುಖ ಮಾಡಿ ನೋಡುವಂತೆ ಮಾಡಿತು..
ಇದೀಗ ಪೈಲ್ವಾನ್ ಚಿತ್ರತಂಡ ಮತ್ತೊಂದು ಸಂತಸದ ಸುದ್ದಿಯನ್ನು ನೀಡಿದೆ… 'ಪೈಲ್ವಾನ್' ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿರುವ ಸಮಯದಲ್ಲಿಯೇ, ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ಅದೇನಪ್ಪಾ ಅಂದ್ರೆ, ಯುಗಾದಿ ಹಬ್ಬದ ಸಮಯದಲ್ಲಿ 'ಪೈಲ್ವಾನ್' ಚಿತ್ರ ತೆರೆಕಾಣುವ ಸಾಧ್ಯತೆ ಇದೆ.ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರದ ಶೂಟಿಂಗ್ ಈಗಾಗಲೇ ಬಹುತೇಕ ಮುಕ್ತಾಯವಾಗಿದೆ.. ಎರಡು ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು, ಸದ್ಯದಲ್ಲೇ ಅದು ಕೂಡ ಮುಕ್ತಾಯವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಏಳು ಭಾಷೆಗಳಲ್ಲಿ 'ಪೈಲ್ವಾನ್' ರೆಡಿ ಆಗುತ್ತಿದ್ದು, ಏಪ್ರಿಲ್ ತಿಂಗಳಲ್ಲಿ ತೆರೆಗೆ ತರಲು ಕೃಷ್ಣ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 'ಪೈಲ್ವಾನ್' ಬಗ್ಗೆ ನಿರೀಕ್ಷೆ ಹೆಚ್ಚಾಗಿರುವ ಕಾರಣ, ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯುವುದು ಕನ್ಫರ್ಮ್. ಇದರಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.. ಇನ್ನೂ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಾವ ರೀತಿ ಕಮಾಲು ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Comments