ಅಂದು ಸ್ಟಾರ್ ನಟರ ಜೊತೆ ನಟಿಸಿದ್ದ ನಟಿ ಇಂದು ಬೀದಿ ಪಾಲು...!!!
ಬಣ್ಣದ ಲೋಕವೇ ಅಂತದ್ದು ಅವಕಾಶವಿದ್ದಾಗ, ದೊಡ್ಡ ಸೆಲೆಬ್ರಿಟಿಗಳಾಗಿ ಬಿಡುತ್ತಾರೆ. ಆದರೆ ಯಾವ ಅವಕಾಶಗಳು ಇಲ್ಲದಿದ್ದಾಗ ಸಾಮನ್ಯರಲ್ಲಿ ತೀರಾ ಸಾಮಾನ್ಯರಾಗಿ ಬಿಡುತ್ತಾರೆ. ಅಂತಹವರಲ್ಲಿ ಈ ನಟಿ ಕೂಡ ಒಬ್ಬರು. ಒಂದು ಕಾಲದಲ್ಲಿ ರಾಣಿಯಾಗಿ ಮೆರೆಯುತ್ತಿದ್ದ ಈ ಕಲಾವಿದೆ ಇಂದು ಬೀಚ್ ಪಕ್ಕದಲ್ಲಿ ಕರ್ಚೀಫ್ ಮಾರುತ್ತಿದ್ದಾರೆ. ಅಂದಹಾಗೇ ಕೆಲ ಸೂಪರ್ ಸ್ಟಾರ್’ಗಳ ಜೊತೆ ನಟಿಸಿದ್ದ ಈ ಕಲಾವಿದೆ ಒಂದೊತ್ತಿನ ಊಟಕ್ಕಾಗಿ ಅವರು ಪರದಾಡುತ್ತಿರುವ ಸ್ಥಿತಿ ನೋಡಿದ್ರೆ ಎಂಥವರಿಗೂ ಕರುಳು ಹಿಂಡಿದಂತಾಗುತ್ತದೆ.
ಸುಮಾರು ಅಂದಿನ ಎಲ್ಲಾ ಸೂಪರ್ ಸ್ಟಾರ್’ಗಳ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ಈ ನಟಿ ತಮಿಳು ಸಿನಿಮಾಗಳಲ್ಲಿ ಚಿರಪರಿಚಿತ. ತಮಿಳು ಚಿತ್ರರಂಗದ ಅಜ್ಜಿ ಅಂತಾನೇ ಫೇಮಸ್ಸು ನಟಿ ರಂಗಮಲ್ಲು. ಮರೀನಾ ಬೀಚ್ ನ ಬಿಸಿಲಲ್ಲಿ ಕುಳಿತು, ಕೆಲ ವಸ್ತುಗಳನ್ನು ಮಾರಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಸುಮಾರು ನೂರು ಚಿತ್ರಗಳಲ್ಲಿ ನಟಿಸಿದ ರಂಗಮಲ್ಲು ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾದಲ್ಲಿ ರಾಣಿಯಾಗಿ ಬದುಕುತ್ತಿದ್ದ ರಂಗಮಲ್ಲು ಸದ್ಯ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ದುಡಿದ ಹಣವನ್ನೆಲ್ಲಾ ಮಕ್ಕಳಿಗೆ ಕೈ ಕೊಟ್ಟ ರಂಗಮಲ್ಲುವನ್ನು ಹೆತ್ತ ಮಕ್ಕಳೇ ದೂರವಿಟ್ಟಿದ್ದಾರೆ. ಎಂಜಿಆರ್ ಕಾಲದಿಂದಲೂ ಸಿನಿಮಾಕ್ಕಾಗಿ ದುಡಿಯುತ್ತಿರುವ ರಂಗಮಲ್ಲು, ಸದ್ಯ ಅವಕಾಶಗಳಿಲ್ಲದೇ ಖಾಲಿ ಕೈಯಲ್ಲಿ ಕೂತಿದ್ದಾರೆ. ಗುರುತಿಸುವ ಅಭಿಮಾನಿಗಳ ಜೊತೆ ಮಾತನಾಡುತ್ತಾ ಬದುಕುವುದಕ್ಕೆ ಏನಾದರೂ ಮಾಡಬೇಕಲ್ಲವೇ, ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರರಂಗಕ್ಕಾಗಿ ದುಡಿದ ಈ ನಟಿಯನ್ನು ಚಿತ್ರರಂಗವೇ ಪೋಷಿಸಿಬೇಕಾಗಿದೆ.
Comments