ಆ ಒಂದು ಕ್ಷಣ ಯಾಮಾರಿದ್ರೆ ರಾಧಿಕ ಪಂಡಿತ್ ಬದುಕುತ್ತಿರಲಿಲ್ವಂತೆ…!!

ಜೀವನದಲ್ಲಿ ಏರು ಪೇರು ಎಂಬುದು ಹೇಗೆ ತಾತ್ಕಾಲಿಕೋ ಅದೇ ರೀತಿ ಜೀವ ಎಂಬುದು ಕೂಡ ತಾತ್ಕಲಿಕ.. ಯಾರ ಜೀವನದಲ್ಲಿ ಯಾವಾಗ ಏನು ನಡೆಯುತ್ತದೆಯೋ ಗೊತ್ತಿಲ್ಲ,,,ಅವರವರ ಜೀವನಕ್ಕೆ ಜೀವಕ್ಕೆ ಅವರೇ ಹೊಣೆ ಅನ್ನುವುದು ಮಾತ್ರ ಸತ್ಯ.. ಎಲ್ಲರಿಗೂ ಕೂಡ ಒಂದಲ್ಲ ಒಂದು ಗಂಡಾಂತರಗಳು ಬಂದೆ ಬಂದಿರುತ್ತವೆ.. ಅದೇ ರೀತಿಯಾಗಿ ರಾಕಿಂಗ್ ಸ್ಟಾರ್ ಪತ್ನಿ ರಾಧಿಕಗೂ ಕೂಡ ಈ ರೀತಿಯ ಗಂಡಾಂತರ ಬಂದಿದ್ದಂತೆ.. ಇದನ್ನು ರಾಧಿಕ ಅವರೇ ಹೇಳಿದ ಮೇಲೆಯೆ ಎಲ್ಲರಿಗೂ ತಿಳಿದಿದ್ದು..
ಸಿನಿಮಾ ಚಿತ್ರಿಕರಣ ಅಂದರೆ ಸಾಮಾನ್ಯವಲ್ಲ.. ಅಲ್ಲಿ ಮಾಡೋ ಸಾಹಸ ದೃಶ್ಯಗಳಿಗೆ ಜೀವ ಕೂಡ ಹೋಗಿದ್ದುಂಟು.. ಸಿನಿಮಾ ಶೂಟಿಂಗ್ ಸಮಯದಲ್ಲಿ ಅನೇಕ ಅಹಿತಕರ ಘಟನೆಗಳು ನಡೆಯುತ್ತವೆ. ಇಂತಹ ಒಂದು ಘಟನೆ ರಾಧಿಕ ಪಂಡಿತ್ ಕೂಡ ಎದುರಾಗಿತ್ತಂತೆ… ಸಾವಿನ ಬಾಗಿಲಿಗೆ ಹೋಗಿ ಬಂದಿದ್ದಾರಂತೆ.. ಅಜಯ್ ರಾವ್ ಜೊತೆ ರಾಧಿಕ ಕೃಷ್ಣನ್ ಲವ್’ಸ್ಟೋರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಈ ಚಿತ್ರ ಬಹಳ ಯಶಸ್ಸನ್ನು ಕೂಡ ಕಂಡಿತು.. ಈ ಸಿನಿಮಾದಲ್ಲಿ ಹರಿಯುವ ನೀರಿನಲ್ಲಿ ತೆಪ್ಪವನ್ನು ಓಡಿಸುವ ದೃಶ್ಯವಿದೆ.. ಅದು ರಾಧಿಕ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ.. ಈ ಚಿತ್ರಿಕರಣದ ಸಮಯದಲ್ಲಿ ಸಾಕಷ್ಟು ಮುಂಜಾಗ್ರತೆಯನ್ನು ತೆಗೆದುಕೊಂಡಿದ್ದರು, ಆದರೂ ಕೂಡ ತೆಪ್ಪ ತೂತಾಗಿರುವುದನ್ನು ಯಾರು ನೋಡಿಕೊಂಡಿರಲಿಲ್ಲ…ತೆಪ್ಪ ತೂತಿದ್ದ ಕಾರಣ ಶೂಟಿಂಗ್ ಸಮಯದಲ್ಲಿ ನೀರು ತೆಪ್ಪದ ಒಳಗೆ ಹೋಗಿ ತೆಪ್ಪ ಮಗುಚಿಕೊಂಡು ಬಿದ್ದಿತ್ತು.. ಆಗ ರಾಧಿಕ ನೀರಿನಲ್ಲಿ ಬಿದ್ದಿದ್ದಾರೆ. ಅಲ್ಲೆ ಇದ್ದ ಅಸಿಸ್ಟೆಂಟ್’ಗಳು ರಾಧಿಕರವರನ್ನು ಆಚೆ ತಂದಿದ್ದಾರೆ..
Comments