ಅಭಿಷೇಕ್ ನೋಡಿ ಭಾವುಕರಾಗಿ ಕಣ್ಣೀರಿಟ್ಟ ಸುಮಲತಾ ಅಂಬರೀಶ್..! ಕಾರಣ ಗೊತ್ತಾ?

ಕಳೆದ ವರ್ಷ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದಿಂದ ಇಡೀ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿತ್ತು..ಜನತೆಯ ಜೊತೆ ರ ರೆಬಲ್ ಸ್ಟಾರ್ ಅಂಬರೀಶ್ ಮೇಲೆ ಎಷ್ಟು ಪ್ರೀತಿಯಿದೆಯೋ ಅಷ್ಟೇ ಪ್ರೀತಿ ಅವರ ಪುತ್ರ, ಪತ್ನಿಯ ಮೇಲೆಯೂ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ ಅನ್ನೋದು ಅಕ್ಷರಸಹಃ ಸತ್ಯ… ಇದನ್ನು ನೋಡಿ ಸುಮಲತಾ ಅಂಬರೀಶ್ ಅವರು ಮೂಕ ವಿಸ್ಮಿತರಾಗಿದ್ದಾರೆ. ಅಂಬರೀಶ್ ಹೊರಗಡೆ ಎಲ್ಲಾದರೂ ಕಾಣಿಸಿಕೊಂಡರೆ ಜನ ಅವರನ್ನು ಒಮ್ಮೆ ನೋಡಲು ಮುಗಿ ಬೀಳುತ್ತಿದ್ದರು.
ಇದೀಗ ಪುತ್ರ ಅಭಿಷೇಕ್ ಮೇಲೆಯೂ ಕೂಡ ಜನ ಅಷ್ಟೇ ಪ್ರೀತಿ ವ್ಯಕ್ತಪಡಿಸಿರುವುದನ್ನ ನೋಡಿ ಸುಮಲತಾ ಭಾವುಕರಾಗಿದ್ದಾರೆ. ಮೆಜೆಸ್ಟಿಕ್ ನಲ್ಲಿ ರೆಸ್ಟೋರೆಂಟ್ ಒಂದರ ಉದ್ಘಾಟನೆಗೆ ಬಂದಿದ್ದ ಅಭಿಷೇಕ್ ಗೆ ಅಲ್ಲಿ ಅಭಿಮಾನಿಗಳು ಪ್ರೀತಿಯಿಂದಲೇ ಮುಗಿಬಿದಿದ್ದಾರೆ. ಒಂದು ಸೆಲ್ಫೀ ತೆಗೆದುಕೊಳ್ಳಲು ನೂಕುನುಗ್ಗಲು ಮಾಡಿದ್ದಾರೆ. ಜನರ ಈ ಪ್ರೀತಿ ಕಂಡು ಸುಮಲತಾ ಧನ್ಯವಾದ ಸಲ್ಲಿಸಿದ್ದು, ಈ ಜನರ ಪ್ರೀತಿಯೇ ಅಂಬರೀಶ್ ಗೆ ಶಕ್ತಿಯಾಗಿತ್ತು ಎಂದಿದ್ದಾರೆ. ಈಗ ಮಗನ ಮೇಲೂ ಅಷ್ಟೇ ಪ್ರೀತಿ ವ್ಯಕ್ತಪಡಿಸುತ್ತಿರುವುದಕ್ಕೆ ಧನ್ಯವಾದ ಎಂದಿದ್ದಾರೆ. ಅಂದ ಹಾಗೆ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಇನ್ನೂ ತೆರೆ ಕಂಡಿಲ್ಲ. ಈ ಜನರ ಅಭಿಮಾನವೇ ಆ ಸಿನಿಮಾದ ಯಶಸ್ಸಿಗೆ ಕಾರಣವಾದ್ರೂ ಆಗಬಹುದು..
Comments