ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಎರಡನೇ ಹಾಡು ಬಿಡುಗಡೆ

ಚಂದನವನದಲ್ಲಿ ಮೋಸ್ಟ್ ಎಕ್ಸ್’ಪೆಕ್ಟೇಷನ್ ಚಿತ್ರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ 'ಯಜಮಾನ' ಚಿತ್ರದ ಲಿರಿಕಲ್ ಸಾಂಗ್ ಸಂಕ್ರಾಂತಿಯಂದು ಬಿಡುಗಡೆಯಾಗಿದ್ದು ದಾಖಲೆ ಬರೆದಿದ್ದು, ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿತ್ತು.ಅಭಿಮಾನಿಗಳು ಕೂಡ ಇದರಿಂದ ಸಖತ್ ಖುಷಿಯಲ್ಲಿದ್ದಾರೆ. ವರ್ಷಗಳ ನಂತರ ದರ್ಶನ್ ಅಭಿನಯದ ಈ ಚಿತ್ರವು ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೆಟ್ ಮಾಡಿದೆ.. ಯಜಮಾನದ ಚಿತ್ರದ ಈ ಹಾಡು ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಸಿಕ್ಕಿರೋ ಹಾಗೆ ಸಿಕ್ಕಿತ್ತು.. 'ಶಿವನಂದಿ..' ಹಾಡು ಕೇಳಿರುವ ದರ್ಶನ್ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. 'ಯಜಮಾನ' ಸಿನಿಮಾದ ಮೊದಲ ಹಾಡಿನ ಅದ್ಭುತ ಯಶಸ್ಸಿನ ಬಳಿಕ ಇದೀಗ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗುತ್ತಿದೆ.
ಚಿತ್ರದ ಎರಡನೇ ಹಾಡು ಇಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಡಿ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಈ ಯಜಮಾನ ಚಿತ್ರದ 'ಶಿವನಂದಿ..' ಲಿರಿಕಲ್ ಸಾಂಗ್ ಅನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ.. ಸೋಷಿಯಲ್ ಮೀಡಿಯಾದಲ್ಲಂತೂ ಸಖತ್ ಕ್ರೆಜ್ ಎಬ್ಬಿಸಿರೋದು ಸುಳ್ಳಲ್ಲ... ಈ ಸಾಂಗ್ ಬಿಡುಗಡೆಯಾದ 21 ಗಂಟೆ ಅವಧಿಯಲ್ಲಿಯೇ ಸರಿ ಸುಮಾರು 21.50 ಲಕ್ಷ ಮಂದಿ ನೋಡಿದ್ದು, 1.89 ಲಕ್ಷ ಮಂದಿ ಲೈಕ್ ಮಾಡಿದ್ದರು.. ಇದೀಗ 'ಒಂದು ಮುಂಜಾನೆ...' ಎಂಬ ಈ ಹಾಡು ಮೇಲೋಡಿಯಾಗಿದೆ. ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹಾಡು ಇದಾಗಿದೆ. 'ಒಂದು ಮಳೆಬಿಲ್ಲು..' ಹಾಡಿನ ರೀತಿ ಈ ಹಾಡು ಕೂಡ ಹಿಟ್ ಆಗಲಿ ಎನ್ನುವುದು ಅಭಿಮಾನಿಗಳ ಆಸೆ. 'ಯಜಮಾನ'ನಿಗೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಪಿ ಕುಮಾರ್ ಹಾಗೂ ಹರಿಕೃಷ್ಣ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ. 'ಅಮರ್' ಚಿತ್ರದ ನಟಿ ತಾನ್ಸ ಹೂಪೆ ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ವಿಷಯ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ..
Comments