ಇಲ್ಲಿ ಎಲ್ಲರ ಮೋಸ್ಟ್ ಫೇವರೀಟ್ ಹೀರೋ ಆಗಿದ್ದ ಕಿಚ್ಚ ಅಲ್ಲಿ ವಿಲನ್ ಆಗಿದ್ಯಾಕೆ...!!!

ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ ಕಿಚ್ಚ ಸುದೀಪ್ ನ್ಯಾಷನಲ್ ಸ್ಟಾರ್, ಅವರು ಮಾಡಿದ ಸಿನಿಮಾಗಳು ಬಾಕ್ಸ್ ಆಫೀಸ್ ಹಿಟ್ ಆಗುತ್ತವೆ ಎಂಬ ಮಾತು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿದ್ದು ಸುದೀಪ್ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರವೊಂದು ಹೊರ ಬಿದ್ದಿದೆ. ಈಗಾಗಲೇ ಹಿಂದಿ ತೆಲಗು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿರುವ ಕಿಚ್ಚ ಆ ಸ್ಟಾರ್ ಗೆ ವಿಲನ್ ಆಗಿದ್ಯಾಕೆ. ಅಂದಹಾಗೇ ಆ ಸ್ಟಾರ್ ಟ್ವೀಟ್ ಮಾಡಿದ್ದೇ ತಡ ಸುದೀಪ್ ಗೆ ಸ್ವರ್ಗಕ್ಕೆ ಮೂರೇ ಗೇಣು.
ಸರ್ ನಿಜಾನಾ ಇದು ನೀವೇನಾ, ಈ ದಿನವೆಲ್ಲಾ ಚೆನ್ನಾಗಿರುತ್ತದೆ ಎಂದು ಹಾಡಿ ಹೊಗಳಿದ್ದಾರೆ. ಅಂದಹಾಗೇ ನಟ ಕಿಚ್ಚ ಸುದೀಪ್ ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್ ಟ್ವೀಟ್ ಗೆ ದಿಲ್ ಖುಷ್ ಆಗಿದ್ದಾರೆ. ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಇದನ್ನು ನೋಡಿದ ಸಲ್ಮಾನ್ ಖಾನ್ ಸುದೀಪ್ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಅಂದಹಾಗೇ ಈ ಹಿಂದೆಯೇ ದಬಾಂಗ್-2 ಚಿತ್ರದ ಯಶಸ್ಸಿನ ನಂತರ ದಬಾಂಗ್ ಮೂರನೇ ಭಾಗವನ್ನು ಮಾಡಬೇಕೆಂದು ಯೋಚನೆಯಲ್ಲಿದ್ದರಂತೆ ಸಲ್ಮಾನ್. ನಟನೆ ‘ದಬಾಂಗ್ 3’ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ನಟಿಸುತ್ತಿದ್ದಾರೆ.ಸುದೀಪ್ ಹಾಗೂ ಸಲ್ಮಾನ್ ಖಾನ್ ಅವರು ಬಹಳ ದಿನದಿಂದ ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು.
ಆದರೆ ಈಗ ಇಬ್ಬರಿಗೂ ಒಂದೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಯೂಟ್ಯೂಬ್ ಲಿಂಕ್ ಹಾಕಿ ಪೈಲ್ವಾನ್ ನಲ್ಲಿ ಸುದೀಪ್ ದ್ದು ಒಳ್ಳೆ ಪ್ರಯತ್ನವೆಂದಿದ್ದಾರೆ. ಸಲ್ಮಾನ್ ಟ್ವೀಟ್'ಗೆ ರೀ ಟ್ವೀಟ್ ಮಾಡಿ ಕಿಚ್ಚ ಸಿಕ್ಕಾಪಟ್ಟೆ ಖುಷ್ ಆಗಿದ್ದಂತೂ ನಿಜ. ಅಂದಹಾಗೇ ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿತ್ತು, ಸಲ್ಮಾನ್ ಸಹೋದರ ನಿರ್ಮಾಣ ಮಾಡುತ್ತಿದ್ದಾರೆ. ಒಟ್ಟಾರೆ ಸುದೀಪ್ ಕೂಡ ಯೆಸ್ ಎಂದಿದ್ದು,ಕನ್ನಡದ ಸೂಪರ್ ಸ್ಟಾರ್, ಹಿಂದಿಯಲ್ಲಿ ಖಳನಾಯಕನಾಗಿ ಮಿಂಚ್ತಾ ಇದ್ದಾರೆ. ಅದೂ ಭಾಯ್’ಜಾನ್ ಸಲ್ಮಾನ್ ಜೊತೆ. ಒಟ್ಟಾರೆ ಕನ್ನಡದ ಸ್ಟಾರ್ ಸುದೀಪ್ ಗೆ ಈ ಸಿನಿಮಾ ಯಶಸ್ಸು ತಂದುಕೊಡಲಿ.
Comments