ಡಿಪ್ಪಿ ಹಾಕಿದ ಆ ಕಂಡೀಷನ್'ಗಳಿಗೆ ತಲೆ ಬಾಗಿ ಒಪ್ಕೊಂಡ್ರಂತೆ ಪತಿ ರಣವೀರ್....!!!
ಮದುವೆಯಾದ ನಂತರ ದೀಪಿಕಾ ಪಡುಕೋಣೆ ರಣವೀರ್ ಜೊತೆ ಸಿಕ್ಕಾಪಟ್ಟೆ ಎಂಜಾಯ್ ಮೂಡ್ ನಲ್ಲಿದ್ದಾರೆ. ಅಂದಹಾಗೇ ಪತಿ ರಣವೀರ್, ಪತ್ನಿಯ ಮಾತನ್ನು ಕೇಳುತ್ತಾರಂತೆ. ರಣವೀರ್ ಮನೆಗೆ ತಡವಾಗಿ ಬಂದ್ರೆ ಬೈಯುತ್ತಾರಂತೆ ಡಿಪ್ಪಿ. ತಾವಿಬ್ಬರು ಪ್ರೈವಸಿ ಬಯಸುವುದಾಗಿ ಹೇಳಿಕೊಂಡಿದ್ದ ಈ ಜೋಡಿ ಸದ್ಯ ಇನ್ನು ಹೊಸ ಜೋಡಿಯ ಗುಂಗಿನಿಂದ ಹೊರ ಬಂದಂತೆ ಕಾಣುತ್ತಿಲ್ಲ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗೀಯಾಗಿದ್ದ ರಣವೀರ್ ತಾನು ಮನೆಗೆ ಬೇಗ ಸೇರಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ ಕೇಳಿದ್ರೆ ನನ್ನ ಹೆಂಡತಿ ದೀಪೀಕಾ ಮನಗೆ ತಡವಾಗಿ ಹೋದರೆ ಸಿಕ್ಕಾಪಟ್ಟೆ ಬೈಯುತ್ತಾಳೆ. ಅವಳು ಹೇಳಿದ ಹಾಗೇ ಕೇಳುತ್ತೇನೆ ಎಂದಿದ್ದಾರೆ.
ದೀಪಿಕಾ ಮದುವೆಯ ಮುನ್ನವೇ ರಣವೀರ್’ಗೆ ಮೂರು ಷರತ್ತುಗಳನ್ನು ವಿಧಿಸಿದ್ದರಂತೆ. ಅದನ್ನು ತಪ್ಪದೇ ಪಾಲಿಸುವಂತೇ ರಣವೀರ್’ಗೆ ಸೂಚಿಸಿದ್ದಾರಂತೆ. ಪ್ರತಿದಿನ ರಾತ್ರಿ ಬೇಗ ಮನೆಗೆ ಬರಬೇಕು ಎಂಬುದು ದೀಪಿಕಾ ಅವರ ಮೊದಲ ಕಂಡಿಷನ್. ರಣವೀರ್ ಬಗ್ಗೆ ದೀಪಿಕಾ ಹೆಚ್ಚು ಕಾಳಜಿ ವಹಿಸುತ್ತಾರಂತೆ. ಹಾಗಾಗಿ, ಎಷ್ಟೇ ಕೆಲಸದ ಒತ್ತಡ ಇದ್ದರೂ, ಶೂಟಿಂಗ್ ಸೆಟ್ಗೆ ತೆರಳುವುದು ಎಷ್ಟೇ ತಡವಾದರೂ ಬೆಳಿಗ್ಗೆ ಮನೆಯಿಂದ ಹೊರಡುವಾಗ ತಿಂಡಿ ತಿಂದೇ ರಣವೀರ್ ಮನೆ ಬಿಡಬೇಕು. ಇನ್ನು, ಸೆಟ್ನಲ್ಲಿರುವಾಗ ದೀಪಿಕಾ ಕರೆ ಮಾಡಿದರೆ, ಅದನ್ನು ಮಿಸ್ ಮಾಡಲೇ ಬಾರದಂತೆ. ಇದು ದೀಪಿಕಾ ಹಾಕಿರುವ ಮೂರನ ಕಂಡೀಷನ್. ಈ ಷರತ್ತುಗಳಿಗೆ ರಣವೀರ್ ಯಾವುದೇ ತಕರಾರಿಲ್ಲದೆ ಒಪ್ಪಿಕೊಂಡಿದ್ದಾರೆ. ಜೊತೆಗೆ ಹೆಂಡತಿಯನ್ನು ಹೆಚ್ಚು ಪ್ರೀತಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಇತ್ತೀಚಿಗಷ್ಟೇ ಸಪ್ತಪದಿ ತುಳಿದಿದ್ದಾರೆ. ತುಂಬಾ ವರ್ಷದಿಂದ ಪ್ರೀತಿಸುತ್ತಿದ್ದ ರಣವೀರ್ ಅವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
Comments