'ಜೂನಿಯರ್ ಸುದೀಪ್' ನಿರೀಕ್ಷೆಯಲ್ಲಿದ್ದಾರಾ ಅಭಿನಯ ಚಕ್ರವರ್ತಿ ಕಿಚ್ಚ...!!!

ಕಿಚ್ಚ ಸುದೀಪ್ ಇಂದು ಸ್ಯಾಂಡಲ್’ವುಡ್ ನ ಟಾಪ್ ಸ್ಟಾರ್ ಗಳಲ್ಲಿ ಒಬ್ಬರು. ಅವರ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್ ಸದ್ಯ ಭರ್ಜರಿಯಾಗಿ ತೆರೆ ಕಾಣುತ್ತಿದೆ. ಅಂದಹಾಗೇ ಸುಮಾರು 8 ಭಾಷೆಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಇದ್ದು , ಚಿತ್ರ ಭರ್ಜರಿ ಹಿಟ್ ಕೊಡಲಿದೆ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ. ಈ ಮಧ್ಯೆ ಜೂನಿಯರ್ ಸುದೀಪ್ ನಿರೀಕ್ಷೆಯಲ್ಲಿ ಖುಷಿ ಕಾಣುತ್ತಿದ್ದಾರೆ ಕೆಲವರು. ಅಂದಹಾಗೇ ನಟ ಸುದೀಪ್ ಅಪ್ಪ ಆಗ್ತಿದ್ದಾರಾ…? ಅಂತಾ ಅಚ್ಚರಿಯಾಗ ಬೇಡಿ. ಈ ಜೂನಿಯರ್ ಸುದೀಪ್ ಹೆಸರು ಹೇಳಿದ್ದು ನವರಸ ನಾಯಕ ಜಗ್ಗೇಶ್. ಇತ್ತೀಚಿಗೆ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ ರೊಮ್ಯಾಂಟಿಕ್ ಫೋಟೋವೊಂದನ್ನು ಅಭಿಮಾನಿಯೊಬ್ಬರು ಶೇರ್ ಮಾಡಿದ್ದರು. ಇದನ್ನು ಜಗ್ಗೇಶ್ ಲೈಕ್ ಮಾಡಿ ಶೇರ್ ಮಾಡಿ ಟ್ಯಾಗ್ ಲೈನ್ ನೀಡಿದ್ದಾರೆ.
ಇದನ್ನು ನೋಡಿದ ಜಗ್ಗೇಶ್ ಅವರು ಶೇರ್ ಮಾಡುವುದರ ಮೂಲಕ ತುಂಬಾ ಒಳ್ಳೆಯ ಜೋಡಿ ,ಗಂಡುಮಗು ಪ್ರಾಪ್ತಿರಸ್ತು ಎಂದು ಹಾರೈಸಿದ್ದಾರೆ. ಹೌದು ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ ಫೋಟೋಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಅವರು ಈ ದಂಪತಿಗಳಿಗೆ ಆದಷ್ಟು ಬೇಗ ಗಂಡು ಮಗುವಾಗಲಿ ಎಂದು ಹೇಳಿದ್ದಾರೆ. ಜಗ್ಗೇಶ್ ಅವರ ಈ ಟ್ವೀಟ್ ಗೆ ಕೆಲ ಮಂದಿ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ ಯಾಕೆ ಗಂಡು ಗಂಡು ಎನ್ನುತ್ತೀರಿ ಎಂದು ಸಹ ಪ್ರಶ್ನೆ ಹಾಕಿದ್ದಾರೆ. ಇನ್ನು ಈ ಪ್ರಶ್ನೆಗೆ ಉತ್ತರಿಸಿರುವ ಜಗ್ಗೇಶ ಅವರು ಈಗಾಗಲೇ ಸುದೀಪ್ ಅವರಿಗೆ ಒಂದು ಹೆಣ್ಣು ಮಗಳು ಇದ್ದಾಳೆ ಹೀಗಾಗಿ ಗಂಡು ಆಗಲಿ ಎಂದು ಹೇಳಿದ್ದೇನೆ ಅಷ್ಟೇ ಹೆಣ್ಣನ್ನು ಹೆಚ್ಚಾಗಿ ಗೌರವಿಸುವ ವ್ಯಕ್ತಿ ನಾನು ಎಂದು ಸಹ ಹೇಳಿದ್ದಾರೆ.
ಅಂದಹಾಗೇ ಜಗಣ್ಣನ ಮಾತಿಗೆ ಕಿಚ್ಚ ಯಾವುದೇ ರಿಯಾಕ್ಟ್ ಮಾಡಿದಂತೇ ಕಾಣುತ್ತಿಲ್ಲ. ಈ ಹಿಂದೆ ಸುದೀಪ್ ಮತ್ತುಪ್ರಿಯಾ ಮಧ್ಯೆ ದಾಂಪತ್ಯ ಬಿರುಕು ಬಿಟ್ಟಿದ್ದು,ಇವರಿಬ್ಬರ ಪ್ರಕರಣ ಕೋರ್ಟು ಮೆಟ್ಟಿಲೇರಿತ್ತು. ಆ ನಂತರ ರೆಬೆಲ್ ಸ್ಟಾರ್ ಮಧ್ಯಸ್ಥಿಕೆ ವಹಿಸಿ ಇಬ್ಬರನ್ನು ಒಂದು ಮಾಡಿದ್ದರು. ಮುದ್ದಿನ ಮಗಳಿಗಾಗಿ ಸತಿ-ಪತಿಗಳು ತಮ್ಮೆಲ್ಲಾ ವೈಮನಸ್ಸುಗಳನ್ನು ಮರೆತು ಚೆನ್ನಾಗಿದ್ದಾರೆ. ಇವರ ಜೀವನ ಮತ್ತೊಬ್ಬರಿಗೆ ಮಾದರಿಯಾಗುವಂತೆ ಮಾಡಿದೆ. ಈ ನಡುವೆ ಸುದೀಪ್ ಕಡೆಯಿಂದ ಏನಾದರೂ ಗುಡ್ ನ್ಯೂಸ್ ವಿಚಾರ ಹೊರ ಬರಬಹುದೇ....? ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕು.
Comments